Custom Search

Tuesday, April 12, 2011

ಯಾರು???? ಅಂದ್ರೆ ಬಾಲ್ಯ... :)

ನೀನು ಮತ್ತೆ ಬರ್ತೀನಿ ಅಂದ್ರೂ ಬಾ ಅನ್ನೋಕೆ ಆಗೋದಿಲ್ಲ, ಅನುಭವಿಸೋದಕ್ಕೂ ಆಗೋದಿಲ್ಲ, ನಿನ್ನೊಳಗೆ ನಾ ಒಂದಾಗಿ ಖುಷಿಯಾಗಿರೋದಕ್ಕೂ ಸಾಧ್ಯ ಇಲ್ಲ. ಯಾಕಂದ್ರೆ.. ಈಗಾಗ್ಲೇ ಸಮಯ ಬೇಜಾನ್ ಮುಂದೆ ಹೋಗ್ಬಿಟ್ಟಿದೆ. ನನ್ನ ತಾಳ್ಮೆ ಸಹನೆಗಳು ಮಟ್ಟ ಉತ್ತುಂಗಕ್ಕೇರಿದೆ...

ನನ್ನ-ನಿನ್ನೊಂದಿಗಿನ ಒಡನಾಟ ಈಗ ಮುಗಿದುಹೋದ ಕಥೆ...
ನಾನು ನಿನ್ನ ಮತ್ತೆ ಪಡಿಬೇಕು ಅಂದ್ರೆ, ನೀನು ಮತ್ತೆ ನನ್ನೊಂದಿಗೆ ಇರ್ಬೇಕು ಅಂದ್ರೆ, ಮುಂದಿನ ಜನ್ಮದವರೆಗೂ ಕಾಯ್ಲೆಬೇಕು...

-GC

Tuesday, April 5, 2011

ಹೊಸ ಪ್ರೀತಿ...

ಹಸಿಮನಸಿನ ಹೊಸ ಪ್ರೀತಿಯ,
ಹುಸಿಮಾತಲಿ ತುಸು ಹೇಳಲು,
ಪಿಸುಮಾತಲೆ ಮಸಿಗೊಳಿಸಿ,
ಕಸಪೊರಕೆಯ ಕೈಲ್‌ಹಿಡಿದು ರಸ ತೆಗೆದೆಯ ಬಾಲೆ...??