Custom Search

Tuesday, January 10, 2012

28 hours....


ಏನು ಎತ್ತ ಅಂತ ಗೊತ್ತಿಲ್ಲ, ಕಳೆದ ವರ್ಷ ಯಾಕೋ ಒಂದು ಆಸೆ ಮನಸಲ್ಲಿ ಬಂದ್ಬಿಡ್ತು ಕಣ್ರೀ.. ಏನಾದ್ರೂ ಆಗ್ಲಿ ಜೋಗ ಜಲಪಾತಕ್ಕೆ ಹೋಗ್ಲೇಬೇಕು ಅಂತ.... ಒಂದ್ಸಲ ಅದನ್ನ ಕಣ್ತುಂಬ ನೋಡ್ಲೇಬೇಕು ಅಂತ...

ಅಸೆ ಇದ್ರೂ ಏನ್ ಪ್ರಯೋಜನ, ಅದು ಕೈಗೂಡ್ಬೇಕು ಆಲ್ವಾ? ಹೋದ ವರ್ಷ ಜೂನ್ ಇಂದ ಕಾದು ಕಾದು, ಈಗ ಅದಕ್ಕೆ ಟೈಮ್ ಬಂತು. ಹೋದ ವರ್ಷ ಜೂನ್ ಇಂದ, ಒಂದಲ್ಲ ಒಂದು ಕಾರಣ, ಅಡ್ಡ ಬರ್ತಿತ್ತು, ಎಲ್ಲ ಸರಿ ಇದೆ ಅಂತ ಅನ್ಕೊಂಡ್ರೆ ಜೋಗದಲ್ಲಿ ನೀರಿಲ್ಲ ಅನ್ನೋ ಕೆಟ್ಟ ವಿಷ್ಯ ಬೇರೆ ಕಿವಿಗೆ ಬೀಳೋದು. ಹೀಗೆ ವರ್ಷ ಕಳೆದ್ಮೇಲೆ, ನಂಗು ತಲೆ ಒಂದು ಲೆವೆಲ್ಗೆ ಫುಲ್ ಕೆಟ್ಟಿತ್ತು, ಹಾಗಾಗಿ ಡಿಸೈಡ್ ಮಾಡ್ಕೊಂಡೆ, ಏನಾದ್ರೂ ಆಗಲಿ ಈ ಸಲ ಹೋಗ್ಲೇಬೇಕು, ಫೋಟೋ ತೆಗಿಲೇಬೇಕು ಅಂತ. ಸದ್ಯಕ್ಕೆ ನಾನು ಒಬ್ನೇ ಹೋಗಿ ಬರೋದು ಅಂತ ಅನ್ಕೊಂಡಿದ್ದೆ, ಯಾಕಂದ್ರೆ, ಜನರನ್ನ (friends) ರೆಡಿ ಮಾಡ್ಸಿ, ಅವ್ರಿಗೆ ಕಾಯ್ಕೊಂಡು, ಅವ್ರೆಲ್ಲಾ ಓಕೆ ಅಂದು ಆಮೇಲೆ ಹೋಗೋದು, ಉಸ್ಸ್ಸ್ಸ್!!!! ಬಾರಿ ರಿಸ್ಕ್ ಕೆಲ್ಸ, ಯಾರಿಗೂ ಹೇಳೋದು ಬೇಡ ಅಂತ ಅನ್ಕೊಂಡಿದ್ದೆ. ಆದ್ರೆ, ಮೇಲಿನವ್ನು ಇದಾನೆ ಅಲ್ವ.. ಬಾರಿ ಛತ್ರಿ, "ತಾನೊಂದು ಬಗೆದರೆ, ದೈವವೊಂದು ಬಗೆವುದು" ಅನ್ನೋ ಹಾಗೆ ಆಯ್ತು. ಕೊನೆಗೆ ಹೇಗೋ, ಯಾವ್ದೋ ವಿಷ್ಯಕ್ಕೆ, ಏನೋ ಮಾತಾಡ್ಬೇಕಿದ್ರೆ ಬಾಯ್ತಪ್ಪಿ ಹೇಳ್ಬಿಟ್ಟೆ ;) . ಮುಗಿತು ಕಥೆ, ಹೇಳಿದ ತಕ್ಷಣ ಒಂದು ವಿಕೆಟ್ ರೆಡಿ (ಸಂತು), ಇನ್ನು ಸ್ವಲ್ಪ ಹೊತ್ತಲ್ಲೇ ಇನ್ನೆರಡು (ಸ್ವಾಮಿ, ಚೇತನ್). So, ಒಂದು ಇದ್ದದ್ದು ನಾಲ್ಕಾಯ್ತು. ಮುಂದೆ???  ಸರಿ ಹೋಗೋಣ, 16th sept 2011 ಶುಕ್ರವಾರ  ರಾತ್ರಿ ಹೊರಟು, ಶನಿವಾರ ರಾತ್ರಿ ವಾಪಾಸ್ ಬರೋಣ ಅಂತ ಮಾತು ಕಥೆ ಮಾಡ್ಕೊಂದ್ವಿ. ಆದ್ರೆ ಕಾರಣಾಂತರಗಳಿಂದ, ಆ ದಿನ ಹೋಗೋದು ಬೇಡ ಅಂತ ಮತ್ತೆ ಪ್ಲಾನ್ ಚೇಂಜ್.  ಮುಂದಿನ ವಾರ ಹೋಗೋಣ (ಆಗಲು ನಾಲ್ಕೇ ಜನ ಅಂತ ಪ್ಲಾನ್ ಇದ್ದಿದ್ದು.). ಈ ಒಂದು ವಾರ ಗ್ಯಾಪ್ ಅಲ್ಲಿ... ;) ಮತ್ತೊಂದು ಟ್ವಿಸ್ಟ್. ಹ್ಹ ಹ ಹ. ನನ್ನ ಬಾಯಿ ಹಾಗೆ ಸುಮ್ನೆ ಇರೋದಿಲ್ಲ, ಇನ್ನೊಬ್ಬ ಫ್ರೆಂಡ್ ಹತ್ರ ಬಾಯ್ಬಿಟ್ಟೆ, Done, +2. ಎಷ್ಟಾಯ್ತು?? ಆರು. ಹ ಹ ಹ...

ಒಂದರಿಂದ ಆರು, ಅಲ್ಲಿಗೆ ನಿಲ್ತು ಅನ್ಕೊಂಡ್ರ??? ಇಲ್ಲಾ... ಇಲ್ವೆ ಇಲ್ಲಾ. :)  ಸುವರ್ಣ ಕರ್ನಾಟಕ ಸಾರಿಗೆ ಬಸ್ಸಲ್ಲಿ ಒಬ್ನೇ ಹೋಗೋದು ಅಂತ ಆಗಿದ್ದ ಪ್ಲಾನ್, ರಾಜಹಂಸ ಬಸ್ಸಲ್ಲಿ ನಾಲ್ಕು ಜನ ಹೋಗೋದು ಅಂತ ಆಯ್ತು, ಆಮೇಲೆ  ಆರು ಜನ ಟಾಟಾ ಸುಮೋ ಮಾಡ್ಕೊಂಡು ಹೋಗೋಣ ಪ್ಲಾನ್ ಚೇಂಜ್ ಮಾಡಿದ್ವಿ. ಕೊನೆಗೆ ಹೋಗಿದ್ದು TTಅಲ್ಲಿ, ಒಟ್ಟು ಹನ್ನೆರಡು!!!!

ಇಷ್ಟೆಲ್ಲಾ ಆಗಿ, ಫೈನಲ್ಲಿ ಶನಿವಾರ 24th sept 2011 ರಾತ್ರಿ ಒಂಬತ್ತಕ್ಕೆ ಹೊರಡೋದು ಅಂತ ಮಾತಾಡ್ಕೊಂಡು ಅದೇ ರೀತಿ, ಶನಿವಾರ ರಾತ್ರಿ ಒಂಬತ್ತು ಘಂಟೆಗೆ ಶುರು ಮಾಡಿದ್ವಿ ನಮ್ಮ ಪಯಣ, ಜೋಗ ಜಲಪಾತದ ಕಡೆಗೆ.  ನಾನು ಮನೆ ಇಂದ ಹೊರಟಾಗ 8.45PM, ಅಲ್ಲಿಂದ ಸೀತಾ ಸರ್ಕಲ್ ಗೆ ಹೋಗೋದು 9.00PM ಆಗಿತ್ತು. ಕದ್ರೆನಹಳ್ಳಿ ಪೆಟ್ರೋಲ್ ಬಂಕ್ ಮೊದಲ ಪಿಕ್-ಅಪ್ ಪಾಯಿಂಟ್, ಅಲ್ಲಿಂದ ಶುರು ಆಗಿ, ಎಲ್ಲರನು ಪಿಕ್ ಮಾಡಿ ಯಶವಂತಪುರ ರೀಚ್ ಆಗೋದು 10-10.15 ಆಯ್ತು. Dry ಜಾಮೂನ್ ತಿನ್ತಾ , ಮಾತು, ಕಾಲೆಳೆದಾಟ , ಕೀಟಲೆ, ಸ್ವಲ್ಪ ನಿದ್ದೆ ಇದು ನಮ್ಮ journey ಯ main ಕೀ ಪಾಯಿಂಟ್ಸ್... :) . ಯಶವಂತಪುರದಿಂದ ಸೀದಾ ಹೊರಟ ನಾವು, funny ದೆವ್ವದ ಮೂವಿ ನೋಡ್ಕೊಂಡು ಅಲ್ಲಿ ಇಲ್ಲಿ ಒಂದೆರಡು break ತಗೊಂಡು ಮುಂದೆ ಹೋಗ್ತಾ ಇದ್ವಿ. ಫಿಲಮ್ಮು ಸಕ್ಕತ್ತಾಗಿತ್ತು, ಅದನ್ನ ನೋಡಿ ನಮ್ಮ ಗೆಳಯರಲ್ಲಿ ಕೆಲವರು ಒಂದ್ಚೂರು ಹೆದರ್ಕೊಂಡಿದ್ದು ಆಯ್ತು,  ಇದೆಲ್ಲದರ ಮಧ್ಯೆ, break ಅಲ್ಲಿ ಗೊತ್ತಾದ ಒಂದು ಮುಖ್ಯವಾದ ವಿಷ್ಯ ಏನು ಅಂದ್ರೆ, ಗಂಡಸರ ಬೆಲೆಯನ್ನು normalize/generalize ಮಾಡಿ, ಒಂದು ಬೆಲೆ ಕಟ್ಟಿರೋದು. ನಿಮಗೆ ಆ ರೇಟ್ ಏನಾದ್ರು ಗೊತ್ತಾ???? ಗೊತ್ತಿಲ್ಲ ಅಂದ್ರೆ ಈ ಪಿಕ್ಚರ್ ನೋಡಿ :) ;) .ನಾನು ಮತ್ತೆ ನಮ್ಮ ಗೆಳೆಯರು ತಿಂಡಿ ಪ್ರಿಯರು ಅಂತ ಏನಲ್ಲ, ಏನೋ ಹೊಟ್ಟೆ ಹಸಿದಾಗ.. ಸ್ವಲ್ಪ ಸ್ವಲ್ಪ ತಿಂತೀವಿ ಅಷ್ಟೇ. ಹಿಂಗೆ ಸೆಕೆಂಡ್ ಬ್ರೇಕ್ ಅಲ್ಲಿ ಲೈಟ್ ಆಗಿ ಒಂದೆರಡ್-ಮೂರು ಇಡ್ಲಿ ತಿಂದು ಚಾ. ಕುಡಿದು... ಮತ್ತೆ ಗಾಡಿ ಏರ್ಕೊಂಡು ಜೈ ಅಂತ ಮುಂದೆ ಹೋದ್ವಿ. ಅಲ್ಲಿಂದ ಹೊರಟು ಜೋಗಜಲಪಾತ ರೀಚ್ ಅದಾಗ ಬೆಳಗ್ಗೆ 5.30 ಆಗಿತ್ತು. ವಾಹ್.... ವಾಹ್...... ಮುಂಜಾವಿನ ಮುಸುಕಿನಲಿ ಮಂಜಿನ ಮಾಲೆಯಲಿ ಕಂಡಳು ಶರಾವತಿ.. ಆ ನಿಶ್ಯಬ್ಧ ಜಾಗದಲ್ಲಿ, ರೋರರ್ ನ ಸದ್ದು ಬಿಟ್ಟು ಬೇರೆ ಏನು ಕೇಳ್ತಾ ಇರ್ಲಿಲ್ಲ. ನೋಡೋದು ಕಣ್ಣಿಗೆ ತಂಪು, ಕೇಳೋದು ಕಿವಿಗೆ ಇಂಪು... ಆಹಾ.... ಅದಕ್ಕೆ ಕವಿ ಹೇಳಿರೋದು, "ಇರೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ಗುಂಡಿ" ಅಂತ.

ಅಂದ್ಕೊಂಡಿದ್ದಂಗೆ ಗೆಸ್ಟ್ಹೌಸ್ ಬುಕ್ ಆಗ್ಲಿಲ್ಲ, ಯಾವ್ದೋ ಕಿರಿಕ್ ಪಾರ್ಟಿ ಎಂಟ್ರಿ ಇಂದ, ಏನು ಮಾಡೋಕೆ ಆಗೋಲ್ಲ.. ಇದು ನಮ್ಮ ದೇಶ. ಅದರಿಂದ ನಾವು ಫ್ರೆಶ್ ಆಗೋಕೆ ಬೇರೆ alternate ವ್ಯವಸ್ಥೆ ನೋಡ್ಕೊಬೇಕಾಯ್ತು. ನಂದನ್ ಅವರು ಅವರ ಪರಿಚಯದ ದೇವಸ್ಥಾನದಲ್ಲಿ ವ್ಯವಸ್ಥೆ ಮಾಡಿದ್ರು, ಅದರ ಜೊತೆ ಒಳ್ಳೆ ಭರ್ಜರಿ ತಿಂಡಿ ಕೂಡ ಇತ್ತು.. ;)  .  ಆ ದೇವಸ್ಥಾನ ಇರೋದು, ವಡಮ್ಬೈಲು (vadanbail) ಊರಲ್ಲಿ, ಆ ಊರಿಗೆ ಹೋಗ್ಬೇಕು ಅಂದ್ರೆ restricted area ಮೂಲಕ ಹೋಗ್ಬೇಕು, photography strictly prohibited, ಏನ್ ಮಾಡೋದು.....?? permission ತಗೊಂಡು ಒಳಗೆ ಹೋಗ್ತಾ ಇದ್ವಿ. ಬಿತ್ತು ನೋಡಿ ನಮ್ ಕಣ್ಣಿಗೆ ಒಂದು ಸುಂದರ view point. ಕೈ ಸುಮ್ನೆ ಇರುತ್ಯೇ?? ತಲೆಲಿ ಫೋಟೋ ತೆಗಿಬೇಕು ಅಂತ ಯೋಚನೆ ಬರೋದಿಲ್ವೇ? ಬಂತು, ಬಂದೇಬಿಡ್ತು... ಎಲ್ಲ ಚಕಾ-ಚಕ್ ಅಂತ ಇಳಿದು ಪೋಸ್ ಕೊಡೋಕೆ ರೆಡಿ ಆಗ್ಬಿಟ್ರು. ನಮ್ ಕ್ಯಾಮೆರಾಗಳ ಕಚಕ್-ಕಚಕ್ ಸೌಂಡ್ ಜಾಸ್ತಿ ಆಯ್ತು. ಅದು ಬಹುಶಃ ಕೇಳಿಸ್ತು ಅನ್ಸುತ್ತೆ, ದೊಡ್ಡ ಬಸ್ಸಲ್ಲಿ ಬಂದ್ರು ನಮ್ ಮಾವಂದಿರು. ಪೂಜೆ ಶುರು ಆಯ್ತು, ಕ್ಯಾಮೆರಾ ಕಿತ್ಕೊಳೋದು ಬಾಕಿ, ಆದ್ರೆ ಹೇಗೋ ಬಚಾವ್. ಮುಂದೆ ಚೆಕ್ ಪಾಯಿಂಟ್ ಅಲ್ಲಿ, ಕಾಯ್ತಾ ಕೂತಿದ್ರು. ನಾವು ಅಲ್ಲಿ ರೆಅಚ್ ಆಗ್ತಿದ್ದಂಗೆ ಕ್ಯಾಚ್ ಹಾಕ್ಕೊಂಡು, ತೆಗೆದಿದ್ದ ಫೋಟೋಸ್ ಡಿಲೀಟ್ ಮಾಡ್ಸಿದ್ರು. ನಮ್ಮ ಪುಣ್ಯ ಇಷ್ಟೇ ಅಂತ ಮುಂದೆ ಹೋಗಬೇಕಾಯ್ತು!!! ದೇವಸ್ಥಾನಕ್ಕೆ ಹೋದ್ಮೇಲೆ, ಸ್ನಾನ ಆಯ್ತು, ಸ್ವಲ್ಪ ರೌಂಡ್ ಮತ್ತೆ ಫೋಟೋ ಸೆಷನ್ ಮುಗಿದ್ಮೇಲೆ, heavy batting breakfast. ತಿಂಡಿ ತೀರ್ಥ ಆದ್ಮೇಲೆ ಮತ್ತೆ ಜೋಗದ ಕಡೆಗೆ ಪಯಣ. ಜೋಗ ತಲುಪಿದಮೇಲೆ ಗೊತ್ತಾಯ್ತು, ಹೆಂಗೆ ಬಿಸಿಲು ಅಂದ್ರೆ ಅಂತ, ಎಲ್ಲರು ಹೇಳ್ತಿದ್ರು,,, ಹುಷಾರು ಮಳೆ ಇದೆ, ಮಳೆ-ಮಾರು ಜೋಪಾನ...ಆಹಾ!!! ಅದಕ್ಕೆ ಮಳೆ ಅಂದ್ರೆ.. ಪರಮಾತ್ಮ ತೃಪ್ತನಾಗ್ತಾನೆ. :) .  ಅಲ್ಲಿ ಒಂದಷ್ಟು ಫೋಟೋ ತೆಗೆದ್ಮೇಲೆ, ಆನ್ ಸ್ಪಾಟ್ ಡೆಲಿವರಿ ಫೋಟೋ ಕೂಡ ಕ್ಲಿಕ್ ಮಾಡ್ಸಿ, ಫೋಟೋದು ಕಾಪಿ ತಗೊಂಡು, ಕೆಳಗೆ  ಇಲ್ಯೋಣ ಅಂದ್ಕೊಂಡು ಮುಂದೆ ಇಳಿಯೋಕೆ ಶುರು  ಮಾಡ್ಕೊಂದ್ವಿ. ಅರ್ಧ ಇಳಿಯೋ ಹೊತ್ಗೆ ಸುಸ್ತಾದಂಗೆ ಅನಿಸ್ತು (ನನಗಲ್ಲ ;) :ದ ), ಮತ್ತೆ ಅದು ನಮ್ಮ ಪ್ಲಾನ್ ಅಲ್ಲಿ ಇಲ್ಲದೆ ಇದ್ದಿದ್ರಿಂದ ಮತ್ತೆ ವಾಪಾಸ್ ಮೇಲೆ ಬಂದ್ಬಿಡೋಣ ಅಂತ ಅಲ್ಲಿಂದ ಕಾಲು ಕಿತ್ವಿ. ಮೇಲಿನ ಬಿಸಿಲು, ನೀರಿನ ಹವೆ, ಸುತ್ತ ಮುತ್ತಲಿನ ಗಿಡಗಳು, ಎಲ್ಲ ಮಿಕ್ಸ್ ಆಗಿ, ಬೆವರು, ಸುಸ್ತು, ಆಯಾಸ, ಆರಾಮ, ಮನೋಲ್ಲಾಸ, ಖುಷಿ ಒಟ್ಟೊಟ್ಟಿಗೆ ಆಗ್ತಿತ್ತು. ವಾಪಾಸ್ ಬರ್ತಾ, ನಮ್ಮೋರು ತುಂಬ ನಿಷ್ಟಾವಂತರು, ಬೆಳ್ಗೆ ಆಗಿದ್ದ ತಿಂಡಿ ಬಿಟ್ಟು ಮಧ್ಯಾಹ್ನ ಊಟ ಮಾತ್ರ ಮಾಡೋರು. ಈ ಮಧ್ಯೆ ಊಟ/ತಿಂಡಿ ತಿನ್ನೋದು ಬಹಳ ಕಡಿಮೆ, ಅದರಿಂದಲೇ ಒಂದು 5-6 ಸೌತೆಕಾಯಿ, 3-4 bottle  ಜೀರಿಗೆ ಸೋಡಾ,  ಪಲ್ಪಿ ಆರೆಂಜ್. etc. etc.  ಅಷ್ಟೇ ತಿಂತಾ /ಕುಡಿತಾ ಮೇಲೆ ಬಂದು, ಆಮೇಲೆ ನಮ್ಮ ಪಯಣ  ಮುಂಗಾರುಮಳೆ ಸ್ಪಾಟ್ ಕಡೆಗೆ.  ವಾವ್!! ವಾವ್!! ಅದ್ಭುತ... ಮೇಲಿಂದ ಬೀಳ್ತಿರೋ ಆ ಜೋಗದ ನೀರು ನೋಡೋಕೆ, ಏನೋ ಖುಷಿ.... ಅಲ್ಲಿನ ಪ್ರಪಾತದ ಆಳ, ಆ ನೀರಿನ ವೇಗ, ಹಾಲಿನಂತ ಬಣ್ಣ, ಕೆಳಗೆ ಬಿದ್ದಾಗ ಕಾಣುವ ಹಾಲಿನ ನೊರೆಯ ರೀತಿ, ಆ ನೀರಿನ ಹವೆಯಲ್ಲಿ ಸೂರ್ಯಕಿರಣ ನುಗ್ಗಿ ಅದರಿಂದಾದ ಕಾಮನಬಿಲ್ಲು.ಆಹಾ....! ಕಣ್ಣಿಗೆ ತಂಪು, ಮನಸಿಗೆ ಸಂತೋಷ. ನೋಡಿದ್ದಾಯ್ತು, ಆಮೇಲೆ ಏನು???  ನೀರಿಗೆ ಜಾರಿದ್ದೆ. ;)  ಬಿಸಿಲಲ್ಲಿ ಫುಲ್ ಬೆಂದು ಬೆವತಿತ್ತು ಜೀವ, ನೀರು ಕಾಣಿಸ್ತು, ಬೀಳೋಕೆ ಕೂಡ ಚೆನ್ನಾಗಿ ಅನಿಸ್ತು, ಬಿದ್ವಿ,  ಮಜಾ ಮಾಡಿದ್ವಿ :) ಆಮೇಲೆ ಎದ್ದು ಬಂದ್ವಿ. ಅಲ್ಲಿಂದ ಮತ್ತೆ ನಮ್ ಗಾಡಿ ಇರೋ ಜಾಗಕ್ಕೆ ಬರಬೇಕು ಅಂದ್ರೆ ನಡ್ಕೊಂಡು ಬರಬೇಕು ಅಲ್ವಾ?? ಅದೇ ಬಿಸಿಲು ಅಲ್ವಾ, ಮತ್ತೆ ಆಯಾಸ??? ;)  ಗಾಡಿ ಹತ್ರ ಬಂದ ತಕ್ಷಣ, ಏನಾದ್ರು ತಣ್ಣಗೆ ಕುಡಿಬೇಕು ಅನಿಸ್ತು ಎಲ್ಲರ್ಗೂ,  ಹಾಗಾಗಿ ಲೈಟ್ ಆಗಿ ಮಜ್ಜಿಗೆ ಕುಡಿದ್ವಿ. ಇದ್ದ ಹನ್ನೆರಡು ಜನರಲ್ಲಿ, ಒಂದಿಬ್ರು ಕುಡಿಲಿಲ್ಲ ಅನ್ಸುತ್ತೆ, ನಂಗೆ ಜ್ಞಾಪಕ ಇಲ್ಲಾ, ಒಟ್ಟು ಲೋಟಗಳ ಸಂಖ್ಯೆ ಮೂವತ್ತು (ನಾನು ಕೇವಲ ಮೂರುವರೆ- ನಾಲ್ಕುವರೆ ಲೋಟ ಕುಡಿದಿದ್ದೆ)  ದಾಟಿತ್ತು ಅಷ್ಟೇ. ಇಷ್ಟಾಯ್ತು ಮುಂದೆ???? ಮುಂದೆ ಇಕ್ಕೆರಿ ಕಡೆಗೆ... :)

ಸಾಗರಕ್ಕೆ ಹೋಗಿ, ಊಟ ಮಾಡಿ ಇಕ್ಕೆರಿಗೆ ಹೋದ್ವಿ. ಅಲ್ಲಿನ ಇತಿಹಾಸ ಪ್ರಸಿದ್ದ ದೇವಸ್ಥಾನ, ಅಲ್ಲಿ ದೇವರ ದರ್ಶನ ಮಾಡಿ ಮನೆ ಕಡೆ ಮುಖ ಮಾಡಿದ್ವಿ.
ಬರ್ತಾ ದಾರೀಲಿ ಮತ್ತೆ ಒಂದ್ಸಲ ಕಾಫಿ/ಟೀ ಆಯ್ತು, ಊಟ K.B. Cross ಅಲ್ಲಿ ಮುಗ್ಸಿ ಬೆಂಗಳೂರಿನೆಡೆಗೆ ಬಂದ್ವಿ. ನಾನು ಮನೆ ರೀಚ್ ಅದಾಗ 12.45 AM(26th Sept 2011) ಆಗಿತ್ತು.















for more pics... : click here