Custom Search

Thursday, July 30, 2009

ಹಾವೂ ಸಾಯ್ಬಾರ್ದು, ಕೋಲೂ ಮುರೀಬಾರ್ದು...


ಗುಂಡ : ಲೋ ತಿಮ್ಮ ಏನೋ ಸಮಾಚಾರ???
ತಿಮ್ಮ : ಏನಿಲ್ಲಾ ಕಣೋ ಹಾಗೆ ಬೇಜಾರು ಜೀವನ...
ಗುಂಡ : ಯಾಕೋ ತಿಮ್ಮ , ಮನ್ಸು ಸರಿ ಇಲ್ವಾ???
ತಿಮ್ಮ : ಗುಂಡ, ನನ್ ಹೆಂಡ್ತಿ "ಹಾವು ಸಾಯ್ಬಾರ್ದು ಕೋಲು ಮುರೀಬಾರ್ದು" ಅನ್ನೋ ಥರ, ನನ್ನ ಕೈಲಿ ಕೆಲ್ಸಾ ಮಾಡಿಸ್ತಾಳೆ ಕಣೋ!!!
ಗುಂಡ : ಹ್ಹ ಹ ಹ.. ಅಯ್ಯೋ ತಿಮ್ಮ, ನಮ್ಮಪ್ಪನ್ನ ಆಸ್ಪತ್ರೆಗೆ ಸೇರ್ಸಿ ವರ್ಷ ಆಗ್ತಾ ಬಂತು, ಡಿಸ್ಚಾರ್ಜ್ ಮಾಡೋದೇ ಇಲ್ಲ ಅಂತಾನೆ ಆ ಡಾಕ್ಟ್ರು...
ತಿಮ್ಮ (ಕೋಪದಿಂದ): ಲೋ ಗುಂಡ, ನಿಮ್ಮಪ್ಪ ಡಿಸ್ಚಾರ್ಜ್ ಆಗ್ದೆ ಇರೋದಕ್ಕೂ, ನನ್ ಹೆಂಡ್ತಿ ನನ್ ಕೈಲಿ ಕೆಲ್ಸಾ ಮಾಡ್ಸೋದಕ್ಕು ಏನೋ ಸಂಬಂಧ????
ಗುಂಡ : ಪೇಶೆಂಟು (ರೋಗೀನು) ಸಾಯ್ಬಾರ್ದು, ಬರೋ ಕಾಸು ನಿಲ್ಬಾರ್ದು... Smiling Eye-wink wink Smiling

Sunday, July 26, 2009

dEfiNiteLy FemALe!!!


Any Comments...???? :) ;) :)

Sunday, July 12, 2009

ಹಳೆ ಪಯಣದ ಹೊಸ ಅನುಭವ....

ಪ್ರತಿ ತಿಂಗಳಿನಂತೆ last ಶುಕ್ರವಾರ (10-july-2009) ರಾತ್ರಿ ಧರ್ಮಸ್ಥಳಕ್ಕೆ ಹೊರಟೆ. ಹೊರಡುವ ಮೊದಲು ಯಾವುದೇ ಭಯ, ಅಂಜಿಕೆ, ಆಶ್ಚರ್ಯ ಇರಲಿಲ್ಲ. ಕಳೆದ ಐದು ತಿಂಗಳಿಂದ ಈ ಪ್ರಯಾಣ ನಂಗೆ ರೂಢಿಯಾಗಿತ್ತು. ಹಾಗಾಗಿ ಯಾವುದೇ ಹೊಸ ಅನುಭವದ ನಿರೀಕ್ಷೆ ಇಲ್ಲದೆ, ನನ್ನ ಪಯಣ ಸಾಗಿತು. ಸುಮಾರು ರಾತ್ರಿ ಹತ್ತರ ಸುಮಾರಿಗೆ Majestic ತಲುಪಿದೆ, ಅಲ್ಲಿ ಒಂದ್ ಐದಾರು ಬಸ್ಸು ನೋಡಿ ನೋಡಿ ಸಾಕಾಯ್ತು,, ಕೊನೆಗೆ ಯಾವುದ್ರಲ್ಲೂ ಕಿಟಕಿ(window) ಸೀಟ್ ಸಿಗ್ಲಿಲ್ಲ... :( ;( :( ಬೇರೆ ದಾರಿ ಇಲ್ಲದೆ.. ಸಿಕ್ಕಿದ್ ಕಡೆ ಕೂತ್ಕೊಂಡು ಹೋಗ್ಬೇಕಾಯ್ತು. ಇದ್ರಲ್ಲಿ ಏನು ವಿಶೇಷ ಇರ್ಲಿಲ್ಲ.. ಪ್ರತಿ ಸಲಕ್ಕಿಂತ,, ಈ ಬಸ್ ಡ್ರೈವರ್ ಹೆಚ್ಚು ಪುಣ್ಯ ಮಾಡಿದ್ದ ಪುಣ್ಯಾತ್ಮ , ಹೈವೇ ರೋಡಲ್ಲಿ ಸಾಮಾನ್ಯಕ್ಕಿಂತ ನಿಧಾನವಾಗಿ ಗಾಡಿ ಓಡಿಸ್ತಿದ್ದ... ಇದೆ reason ಬೆಳಗೆ 6:30 ಗೆ ಧರ್ಮಸ್ಥಳ reach ಆದೆ.

ಧರ್ಮಸ್ಥಳದಲ್ಲಿ ಇಳಿಯುತ್ತಿದ್ದಂತೆ, ಮಳೆ!!!!!!!!!!! ಕಳೆದ ನಾಲ್ಕು ತಿಂಗಳಲ್ಲಿ ಅಲ್ಲಿ ಇದು ಮೊದಲನೇ ಸಲ ನೋಡ್ತಿದ್ದೆ ಮಳೆಯನ್ನ. ಮಳೆಯಲ್ಲಿ ಏನು ವಿಶೇಷ ಅಂತೀರಾ...??? ಬರಿ ಮಳೆಯಲ್ಲಿ ಏನು ವಿಶೇಷ ಇಲ್ಲ ಕಣ್ರೀ... ಆದರೆ ಇಲ್ಲಿನ ಮಳೆಯಲ್ಲಿ ವಿಶೇಷ, sooooperrrr, masthu.... maja.... ಇತ್ತು. ಮಳೆ ಬಂದಿದೆ/ಬರ್ತಾ ಇದೆ, ನೇತ್ರಾವತಿ (ಧರ್ಮಸ್ಥಳದಲ್ಲಿ ಹರಿಯುವ ನದಿ)ಯ, speedu, ಆವೇಶ ಹೇಗಿರುತ್ತೋ, ಮತ್ತೆ ಮಳೆಯಲ್ಲಿ ಒಬ್ಬನೇ ಹೇಗೆ ಸ್ನಾನಕ್ಕೆ ಹೋಗೋದು, ಏನಾದ್ರು ಹೆಚ್ಚ್ಚು-ಕಡಿಮೆ ಆದ್ರೆ??? :( ;( :( ಅನ್ನೋ ಭಯ ಶುರು ಆಯ್ತು . ಆ ಭಯದಲ್ಲೇ ನೇತ್ರಾವತಿ ಕಡೆ ನಡೆದೆ. ಹೊರಡುವ ಮುಂಚೆ ಸ್ವಲ್ಪ ready ಆಗಿದ್ದೆ, ಮನೆಯಿಂದ ಮಳೆ ಇರ್ಬಹುದು, ಜೊತೆ ಇರ್ಲಿ ತಗೊಂಡೋಗು ಅಂತ ಜೆರ್ಕಿನ್ (ಮಳೆ ಇಂದ ನನ್ನ ನಾನು save ಮಾಡ್ಕೊಳ್ಳೋಕೆ) ಕೊಟ್ಟಿದ್ರು!!! :) :). ಅದನ್ನು ಹಾಕ್ಕೊಂಡು ತಲೆ/ಮೈ ನೆನೆಯದಂತೆ cover ಮಾಡ್ಕೊಂಡು ಹೊರಟೆ. ನನ್ನ ಅನಿಸಿಕೆಯಲ್ಲಿ ಆ ತರದ ಮಳೆ ಬೇರೆ ಕಡೆ ನಾನು ಅದುವರೆಗೂ ನೋಡಿರ್ಲಿಲ್ಲ. ಸ್ವಲ್ಪ ಹೊತ್ತು ಜೋರಾಗಿ ಬಂದ್ರೆ, ಸ್ವಲ್ಪ ಹೊತ್ತು ಏನು ಇಲ್ಲ. ಹೀಗಿರುವಾಗ ಐದು ನಿಮಿಷದ walking ಆದ್ಮೇಲೆ, ಜೆರ್ಕಿನ್ ನನ್ನ bag ನ ಮಾತ್ರ cover ಮಾಡಿತ್ತು!!!!!!!!. ಹಾಗೆ, ನೆನೆದು ನೆನೆಯದಂತೆ, ನೆನೆಯದಂತೆ ನೆನೆದು, ಮುಂದೆ ಹೋಗಿ ಹೋಗಿ ನೇತ್ರಾವತಿ ಸೇರ್ಕೊಂಡೆ. ಅಲ್ಲಿ ನೋಡಿದ್ರೆ, ಯಪ್ಪಾ,,, ಯಪ್ಪಾ... ಏನು ಅರ್ಭಟ, ಏನು ರಭಸ. ಸರಿ ಏನಾದ್ರು ಇರ್ಲಿ ನನ್ ಕೆಲಸ ಮುಗಿಸ್ಕೊಂಡು ನಾನು ಹೋದ್ರೆ ಸಾಕು ಅಂತ ನೀರಿಗೆ ಇಳಿದೆ. ಆಗ್ಲೇ ಗೊತ್ತಾಗಿದ್ದು ನಂಗೆ, ಜನ ಹೇಗೆ ಹರಿಯೋ ನೀರಲ್ಲಿ ಕೊಚ್ಕೊಂಡು ಹೋಗ್ತಾರೆ ಅಂತ..!!!???? ಇಷ್ಟು ದಿನದ ನನ್ನ ಆ ನದಿಯ ಸ್ನಾನದಲ್ಲಿ silentaada ಗಾಂಧಿ ತಾತನ್ನ ಮಾತ್ರ ನೋಡಿದ್ದೆ ಆದ್ರೆ ಮೊನ್ನೆ ಸ್ವಲ್ಪ rise ಆಗಿದ್ದ ಸುಭಾಷಚಂದ್ರ ಬೋಸ್ ನೋಡಿ, ಸಮಾಧಾನ ಮಾಡ್ಕೊಂಡು ನಾನು ಜಾಸ್ತಿ rise ಆಗದೆ ಅಲ್ಲೇ ಅಂಚಲ್ಲಿ ಕೂತು ಸ್ನಾನ ಮಾಡ್ಕೊಂಡು ಬಂದ್ಬಿಟ್ಟೆ. ಇದು ಮುಗಿದ್ ಮೇಲೆ ಹೆಚ್ಚೇನು ವಿಷ್ಯ ಇರ್ಲಿಲ್ಲ,, ಹಾಗೆ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡ್ಕೊಂಡು, ಮತ್ತೆ ಕುಕ್ಕೆ ಕಡೆಗೆ ಸಾಗ್ತು ನನ್ ಪಯಣ.


ಕುಕ್ಕೆಗೆ ಹೋಗ್ತಾ ದಾರಿಲಿ ಆ ಕಡೆ/ಈ ಕಡೆ ದೂರದಲ್ಲಿ ಬೆಟ್ಟದ ಮೇಲೆ/ಬೆಟ್ಟದ ಹತ್ತಿರ ಮೋಡಗಳು ನಡೆದಾಡುತ್ತಿದ್ದಂತೆ ಕಂಡಿತು, ಇಷ್ಟು ನೋಡ್ತಿದ್ದಂಗೆ ನಮ್ close frend ನಿದ್ರಾದೇವಿ ನಮ್ಮನ್ನ attack ಮಾಡ್ಬಿತ್ಳು. ಮತ್ತೆ ಎಚ್ಚರ ಅದಾಗ ಕುಕ್ಕೆ ಬಸ್ಟಾಪ್ ಅಲ್ಲಿ ಇದ್ದೆ. ಸರಿ ಹಾಗೆ ತೇಲ್ತಿದ್ದ ಮೋಡಗಳ್ನ ನೋಡ್ಕೊಂಡು ದೇವಸ್ಥಾನಕ್ಕೆ ಹೊರಟೆ, ದರ್ಶನ ಆಯ್ತು. ಮತ್ತೆ ಊರ್ ಕಡೆ ಬರೋಕೆ ಬಸ್ ಹತ್ಕೊಂಡು ಕೂತ್ಬಿಟ್ಟೆ. ಆದ್ರೆ ಈ ಸಲ ಕಿಟಕಿ ಸೀಟ್ ನಂಗೆ miss ಆಗ್ಲಿಲ್ಲ... ಹ್ಹ ಹ ಹ ಹ.... ಧರ್ಮಸ್ಥಳದಷ್ಟು ಇಲ್ದಿದ್ರೂ ಒಂದ್ ಚೂರು ಇಲ್ಲಿ ಕಣ್ಣ-ಮುಚ್ಚಾಲೆ ಅಡ್ತಿತ್ತು ಛತ್ರಿ ಮಳೆ... :) ;) :). ಬರ್ತಾ ದಾರಿಲಿ ಗುಂಡ್ಯದ ಹತ್ರ ಮೊದ್ಲು ಹೇಗಿತ್ತೋ ಹಾಗೆ ಇತ್ತು ಪರಿಸ್ಥಿತಿ (ಜೋರು ಮಳೆ). ಮತ್ತೆ ಶಿರಾಡಿ ಮೇಲೆ ನಮ್ಮ ಪಯಣ ಸಕಲೇಶಪುರದ ಕಡೆಗೆ. ಅಬ್ಬಬ್ಬಾ!!!!! ಅತಿ ರೋಚಕ, ರೋಮಾಂಚಕ, ಮೈ ರೋಮಗಳು ನಿಲ್ಲುವ "ಅನುಭವ" . ನನಗೆ ಸಾಮಾನ್ಯಕ್ಕಿಂತ ಅರ್ಧ ಗಂಟೆ ಮುಂಚೆ ಸಕಲೇಶಪುರ ತಲುಪಿದಂತೆ ಅನಿಸ್ತು. ಆ level ಅಲ್ಲಿ ಡ್ರೈವರ್ ಬಸ್ ಹೋಡಿಸ್ತಿದ್ದ.... ಹ್ಹ ಹ ಹ... ಹೇ ಹೇ ಹೇ ಹೇ.... ಗುಂಡ್ಯ ದಿಂದ ಬಲಕ್ಕೆ ತಿರುಗಿ ಬಸ್ accelerator rise ಮಾಡ್ದೋನು, ಅಲ್ಲಿ ಇಲ್ಲಿ ಎಲ್ಲೋ ಒಂದೊಂದು ಕಡೆ ಕಡ್ಮೆ ಮಾಡ್ತಿದ್ದ. ಅಲ್ಲೇ ಆ ರೋಡಲ್ಲಿ, ಶಿರಡಿ ಘಟ್ಟದ ಕಿತ್ತೋದ ರೋಡಲ್ಲಿ, make-up ಮಾಡ್ಕೊಂಡು ಮೆತ್ತಗೆ ಕ್ಯಾಟ್-ವಾಕ್ ಹೋಗೋತರ ಹೋಗ್ತಿದ್ದ ಲಾರಿ/ಗ್ಯಾಸ್ ಟ್ಯಾಂಕರ್.. side ಹೊಡ್ಯೋವಾಗ ಕೆಲವು ಕಡೆ ಸ್ಪೀಡ್ ಸ್ವಲ್ಪ ಕಡ್ಮೆ ಆಗಿದ್ದು ಅಷ್ಟೇ. ಇನ್ನು ಕೆಲವು ಕಡೆ.. ಅದೇ speedu ರಸ್ತೆಯ ಅಂಚು...!!!!!!!!! (ಹೀಗೆ ಒಂದ್ ಏಳೆಂಟು ಸಲ ಆಯ್ತು, ಆ ಟೈಮ್ ಅಲ್ಲಿ ಒಂದೆರಡು ಸಲ ನನ್ ಜೀವ ನನ್ ಕೈಗೆ ಬಂದಿತ್ತು). ಉಸ್ಸ್ಸ್.... ಹಾಗೆ ಹೋಗ್ತಿತ್ತು ಬಸ್ಸ್ಸು... ಅಲ್ಲೇ ಹರಿತಿದ್ದ ನದಿ ಮೇಲೆ ಮೋಡಗಳ ಪಯಣ ಕಾಣ್ತಿತ್ತು.. "ನಾನು ಆ ಮೋಡಗಳಲ್ಲಿ ಕೂತು ತೇಲ್ತಿದ್ರೆ ಹೇಗಿರುತ್ತೆ" ಅಂತ ಕನ್ಸು ಕಾಣ್ತಾ ಕೂತಿದ್ದೆ. ಹರಿತಿದ್ದ ನದಿಯ ಹಾಲ್ನೊರೆಯೇ ಈ ಮೋಡಗಳ್ನ ready ಮಾಡ್ತಿದ್ದಂಗೆ ನಂಗೆ ಅನಿಸ್ತು. ನೀರು ಅಷ್ಟು ರಭಸದಲ್ಲಿ ಮುಂದೆ ಸಾಗ್ತಿತ್ತು... ಅಲ್ಲಲಿ,, ಎಲ್ಲಿ ಕೆಳಗೆ ಬೀಳ್ಬೇಕೋ, ಎಲ್ಲಿ ಯಾರ್ನಾದ್ರೂ meet ಆಗ್ಬೇಕೋ ಅಲ್ಲಲ್ಲಿ ಈ ಥರ ಹಾಲ್ನೊರೆ ಕಾಣ್ತಿತ್ತು... ಅಲ್ಲಿ ನನ್ನ ನೆಚ್ಚಿನ ಮೋಡಗಳು.... :) ;) :) ಅರ್ಧ ಗಂಟೆಗಳ ಕಾಲ ಆ ರೋಡಲ್ಲಿ ಬಸ್ಸು ಹೋಗ್ತಿದ್ದಂಗೆ, ನನ್ನ ಕನಸು ನನಗೆ ನಿಜವಾಗಿ ಕಾಣ್ತಿತ್ತು.... ಆ ಆ ಆ ತೇಲುವ ಮೋಡಗಳ್ನ ಗುದ್ದಿ, ಒಡೆದು ನುಗ್ಗಿ ಹೋಗ್ತಿತ್ತು ಬಸ್ಸು... ಆಗ ಆ ಮೋಡಗಳ್ನ ನಾನು ನನ್ ಕೈಯಲ್ಲಿ ಹಿಡಿದು ಹೋಗ್ತಿದ್ದೀನಿ ಅಂತ ಯಾರೋ ಒಳಗಿಂದ ಹೇಳ್ತಿದ್ರು. ಅದೇ feelingಅಲ್ಲಿ ನೋಡಿದ್ರೆ... ಆ ಬೆಳ್ಳಿ ಮೋಡದಲ್ಲಿ, ಸುಮಾರು ಕಪ್ಪು ಇರುವ ಮೋಡದ ರಾಜನಂತೆ ತೇಲಾಡಿದಷ್ಟು ಖುಷಿ ನಂಗೆ.... ಆ ಮೋಡಗಳಲ್ಲಿನ ಪಯಣ, ಅಲ್ಲಿಂದ ಕೆಳಗೆ ನೋಡಿದರೆ ಆಟಿಕೆಗಳಂತೆ ಕಾಣ್ತಿದ್ದ ಝರಿ-ತೊರೆ, ನದಿ, ಬೆಟ್ಟ, ಗುಡ್ಡ, ಮರ, ಮನೆ, ಮನುಷ್ಯ.... ಆ ಖುಷಿ ನನ್ lifeಅಲ್ಲಿ ಮರ್ಯೋಕೆ ಅಷ್ಟು ಸುಲಭವಾಗಿ ಆಗೋದಿಲ್ಲ ಅನ್ಸುತ್ತೆ... ಮತ್ತೊಮ್ಮೆ ಈ ಥರದ ಅನುಭವ ಯಾವಾಗ ಆಗುತ್ತೋ ನಂಗೆ ಗೊತ್ತಿಲ್ಲ... ಆದ್ರೆ ಹಾಗೆ ಸುಮಾರು ಮುಕ್ಕಾಲು-ಒಂದು ಗಂಟೆ ಮೋಡಗಳಲ್ಲಿ ತೇಲಾಡ್ತಾ ತೇಲಾಡ್ತಾ ಇದ್ದೆ. ಈ ಒಂದು ಹೊಸ ಅನುಭವದಲ್ಲಿ, ಹೊಸ ಹೊಸ ಖುಷಿಯಲ್ಲಿ, ಕನಸು ನನಸಾದ ಸಂಭ್ರಮದಲ್ಲಿ ರಾತ್ರಿ 8:30 ರ ಸುಮಾರಿಗೆ ಮನೆ ಸೇರ್ದೆ.