Custom Search

Friday, September 9, 2011

Love Marriageಆಆಆಆಆ??? Arranged Marriageಆಆಆಆ???


ವೇಗವಾಗಿ ಓಡ್ತಾ ಇರೋ ಪ್ರಪಂಚದಲ್ಲಿ ಹೆಚ್ಚು ಜನ ಇದೇ ವಿಷ್ಯದ ಬಗ್ಗೆ ಜಗಳ ಆಡ್ತಾ ಇರ್ತಾರೆ, ಗೊಂದಲದಲ್ಲಿ ಇರ್ತಾರೆ. ನನ್ನ/ನಮ್ಮ ಸುತ್ತ-ಮುತ್ತ ನಡೆದ ಮತ್ತೆ ಇನ್ನು ನಡೆಯುತ್ತಿರುವ ಕೆಲವು ಘಟನೆಗಳು, ಜಗಳ, ಮನಃಸ್ಥಾಪ, ಹಿಂಸೆ, ಕಿರುಕುಳ, ಆತ್ಮಹತ್ಯೆ ಎಲ್ಲಾ ನೋಡಿ ಏನೋ ಒಂದ್ತರ ಅನ್ಸುತ್ತೆ. ಗಂಡು ಹೆಣ್ಣು ಮದ್ವೆ ಆಗೋಕೆ ಇಷ್ಟೆಲ್ಲಾ ರಾದ್ಧಾಂತ ಆಗಬೇಕಾ? ಪ್ರಕೃತಿಯ ಜೀವ ಚಕ್ರದ ಒಂದು ಭಾಗಕ್ಕೆ ಮುಖ್ಯ ಹೆಬ್ಬಾಗಿಲು ಆಗಿರುವ ಮದುವೆಗೆ, ಹೀಗೆ ಜಾತಿ, ಕುಲ, ಮತ ಅಂತ ಜಗಳ ಆಡಬೇಕಾ? ಈ ಎಲ್ಲಾ ಜಗಳ, ಮನಃಸ್ಥಾಪ, ಆತ್ಮಹತ್ಯೆ ಇತ್ಯಾದಿಗಳ ಸುತ್ತ ನಾನು ಸುತ್ತಿದ್ದೇನೆ, ನೀವು ಸುತ್ತಿರ್ತೀರ, ಆದರೂ ಈ ಬ್ಲಾಗ್ ನ article ಮೂಲಕ, ನನ್ನ ಅನಿಸಿಕೆ ಅಭಿಪ್ರಾಯಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ನಿಮ್ಮನ್ನು ಮತ್ತೆ ಒಂದು ಸುತ್ತು ಹಾಕ್ಸೋಣ ಅಂತ ನನ್ನ ಆಲೋಚನೆ. ಇದು ಆಲೋಚನೆಯೇ ಹೊರತು, ಯಾರ್ಗೂ hurt ಮಾಡ್ಬೇಕು, ತಪ್ಪಾಗಿದ್ರೆ ಎತ್ತಿ ತೋರಿಸ್ಬೇಕು, ನಾನೊಬ್ನೆ ಸರಿ, ಉಳಿದವರೆಲ್ಲ ತಪ್ಪು ಅನ್ನೋದು ನನ್ನ ಉದ್ದೇಶ ಅಲ್ಲ... :)

ಈ ಲೇಖನ ಓದಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ನೀವು ಇದೇ ರೀತಿ ಯೋಚಿಸಿದ್ದಲ್ಲಿ ನಿಮ್ಮ note  ಕೂಡ ಸೇರಿಸಿ.

ಮೊದಲು ಈ ಎರಡು ಸಾಲು ಓದಿ ನಂತರ ನಿಮ್ಮ ಓದನ್ನು ಮುಂದುವರೆಸಿ...
“ಈ ಲೇಖನದಲ್ಲಿ ಬರುವ ಯಾವುದೇ ಘಟನೆಗಳಾಗಲಿ,ಸಂದರ್ಭಗಳಾಗಲಿ ಇತ್ಯಾದಿಗಳು ಯಾವುದೇ ಒಬ್ಬ ವ್ಯಕ್ತಿ, ಸಂಸ್ಥೆ ಇತ್ಯಾದಿಗಳಿಗೆ  ಸಂಬಂಧಪಟ್ಟಿರುವುದಿಲ್ಲ. ಹಾಗೇನಾದರು ಇಲ್ಲಿ ಹೇಳಿರುವ ಘಟನೆಗಳು, ಸಂದರ್ಭಗಳು, ಕೊಟ್ಟಿರುವ ಉದಾಹರಣೆಗಳು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಇತ್ಯಾದಿಗಳಿಗೆ ಹೊಂದಾಣಿಕೆಯಾದಲ್ಲಿ ಅದು ಕೇವಲ ಕಾಕತಾಳೀಯ ಮತ್ತು ಈ ರೀತಿಯ ಹೊಂದಾಣಿಕೆಗಳಿಗೆ blogger (ನಾನು), hosted blog ಅಥವಾ ಮತ್ಯಾರು ಜವಾಬ್ದಾರರಲ್ಲ. ಇವುಗಳ ವಿಷಯವಾಗಿ ಯಾವುದೇ ಪ್ರಶ್ನೆಗಳಿಗೆ ಆಸ್ಪದವಿಲ್ಲ”.

ನಾನು ನೀವು time ಇಲ್ಲ-time ಇಲ್ಲ ಅಂತ ಹೇಳ್ತಾನೆ ಎಷ್ಟೋ ಟೈಮ್ ಕಳೆದ್ಬಿಡ್ತೀವಿ. ಅಂತಹ ಟೈಮ್ ಹೇಗೆ ಮುಂದೆ ಹೋಗ್ತಿದೆ ಅಂತ ತಿಳ್ಕೊಳ್ಳುವಷ್ಟ್ರಲ್ಲೇ ಅದು ಮಾಯವಾಗಿ, ನಾವು ಯೋಚ್ನೆ ಮಾಡೋಕು ಆಗ್ದಿರುವಷ್ಟು ಮುಂದೆ ಹೋಗಿರುತ್ತೆ. ಹೀಗೆ ಅಲ್ಲಿ-ಇಲ್ಲಿ ಹೇಗೋ ಉಳಿಯೋ ಸ್ವಲ್ಪ ಟೈಮ್ ನ ನಾವು ಸರಿಯಾಗಿ ಉಪಯೋಗಿಸ್ಕೊಂಡು, ಅದರ ಒಳ್ಳೆ ರೀತಿಯ ಲಾಭಗಳನ್ನ ಪಡೆಯೋದ್ರಲ್ಲಿ ತುಂಬಾ ಖುಷಿ ಸಿಗುತ್ತೆ. ಈ ಟೈಮ್ ಜೊತೆ ಓಡ್ತಾ ಇರುವ ನಮ್ಮ ಪ್ರಪಂಚದಲ್ಲಿ, ಈಗ ಎಲ್ಲಾ ಕಡೆ ಜಾಗತೀಕರಣದ ಪರಾಕಾಷ್ಟೆ. ಜಾಗತೀಕರಣ ನಮಗೆ ವರಾನೋ?? ಶಾಪನೋ?? ಇದು ಒಂದು ಯಕ್ಷಪ್ರಶ್ನೆ. 

ಹೇಳ್ಬೇಕಾದ ವಿಷಯ ಬಿಟ್ಟು ಹಿಂಗೆಲ್ಲಾ ಯಾಕೆ ಇವ್ನು ಕಥೆ ಹೇಳ್ತಾ ಇದಾನೆ ಅಂತ ಬೇಜಾರ್ ಮಾಡ್ಕೋಬೇಡಿ, ಸ್ವಲ್ಪ ತಾಳ್ಮೆ ತಗೊಳ್ಳಿ... :) ಈ article ನ ನಾನು ಕತ್ತರಿಸಿ ಚಿಕ್ಕದಾಗಿ ಮಾಡ್ಬೇಕು ಅಂತಾನೆ ಅಂದ್ಕೊಂಡಿದ್ದೆ ಆದ್ರೆ ಇದು ಚಿಕ್ಕದಾಗುವ ಸಾಧ್ಯತೆ ತುಂಬಾ ಕಡಿಮೆ.

ಹೀಗೆ ಇಡೀ ವಿಶ್ವಾನೆ ಜಾಗತೀಕರಣ ಅಂತ ಮಾತಾಡ್ತಾ ಇರ್ಬೇಕಾದ್ರೆ, ನಮ್ಮದೇ ಸುತ್ತ-ಮುತ್ತ ಪ್ರತಿದಿನ ನಾವು ಕೇಳ್ತಾ ಇರ್ತೀವಿ, ವಯಸ್ಸಿಗೆ ಬಂದಿರೋ ಹುಡ್ಗ-ಹುಡ್ಗಿ ಇರುವ ಪ್ರತಿಯೊಂದು(ಹೆಚ್ಚು-ಕಡಿಮೆ ಪ್ರತಿಯೊಂದು)  ಮನೆಯಲ್ಲೂ, Love Marriage??? Arranged Marriage???? ಇದರ ಬಗ್ಗೆ ಕನಿಷ್ಠ ಗೊಂದಲ, ಸಣ್ಣ ಮಾತುಕತೆ (ವಾಗ್ವಾದ) ಇದ್ದೇ ಇರುತ್ತೆ.  ನಿಮ್ಮ ಪರಿಸ್ಥಿತಿ ಇದೇ ಆಗಿದ್ರೆ ನೀವು ಯಾವುದಕ್ಕೆ ನಿಮ್ಮ ವೋಟು ಹಾಕ್ತಿದ್ರಿ, Love Marriage?? ಅಥವಾ Arranged Marriage???

ನಾನು ಇಲ್ಲಿ, ಯಾವುದಕ್ಕೂ ಪರ ಅಥವಾ ವಿರೋಧ ಅಲ್ಲ. ನಮ್ಮ  ಸುತ್ತ  ಇಂತಹ ವಿಷಯಗಳನ್ನ ನೋಡಿ, ಅವುಗಳ ಬಗ್ಗೆ ನನಗೆ ಅನಿಸಿದ ಅನಿಸಿಕೆ ಇಲ್ಲಿ ಹಂಚ್ಕೊತಾ ಇದ್ದೆನಿ ಅಷ್ಟೇ.

ಮೊದಲು ಲವ್ ಮ್ಯಾರೇಜ್ ಬಗ್ಗೆ ಮಾತಾಡೋಣ.
ಮದ್ವೆ ವಯಸ್ಸಿಗೆ ಬಂದಿರೋ ಹುಡ್ಗ-ಹುಡ್ಗಿ, ಕಾಲೇಜ್ ಮೆಟ್ಟಲು ಹತ್ತಿರುವ ಯುವಕ-ಯುವತಿಯರು... ಹೀಗೆ young-young ಇರುವ ನಮ್ಮ young generation ಲವ್ ಮ್ಯಾರೇಜ್ prefer ಮಾಡ್ತಾರೆ. ಕೆಲವು ಸಲ ಮನೆ ಕಡೆ OK  ಆಗೋದು ಬಿಟ್ರೆ, ಹೆಚ್ಚಿನ ಸಲ ತಂದೆ-ತಾಯಿ ಇದಕ್ಕೆ ತದ್ವಿರುದ್ಧ.
ಸಾಮಾನ್ಯವಾಗಿ parents ಗಳಿಗೆ  ಏನು ಯೋಚ್ನೆ ಅಂದ್ರೆ ಆತ/ಆಕೆ ಯಾವ ಜಾತಿ-ಕುಲ, ಮತ-ಧರ್ಮಕ್ಕೆ ಸೇರಿದವರೋ, ಅವರಿಗೂ ನಮಗೂ ಹೊಂದಾಣಿಕೆ ಆಗುತ್ತೋ ಇಲ್ವೋ? ಆಸ್ತಿ-ಪಾಸ್ತಿ, ಮನೆತನ, ಹುಡ್ಗ/ಹುಡ್ಗಿ background ಹೇಗಿದೆಯೋ? ನಮ್ಮ ಮಗಳ್ನ ಇವ್ನು ಚೆನ್ನಾಗಿ ನೋಡ್ಕೊತಾನೋ, ಇಲ್ವೋ? ನಮ್ಮ ಮಗನಿಗೆ ಇವ್ಳು ಅಡ್ಜಸ್ಟ್ ಆಗ್ತಾಳೋ, ಇಲ್ವೋ? ಹೀಗೆ ಇನ್ನು ಹೆಚ್ಗೆ ಏನೇನೋ ಪ್ರಶ್ನೆಗಳು/ಯೋಚನೆಗಳು. ಮಕ್ಕಳನ್ನು ಪ್ರೀತಿಸೊ ಯಾವುದೇ ತಂದೆ-ತಾಯಿಗೆ ಇದು ಸಾಮಾನ್ಯ...

ಹೀಗಿರ್ಬೇಕಾದ್ರೆ, ನಾವು ಹೋಗಿ ತಂದೆ-ತಾಯಿ ಹತ್ರ ನಂಗೆ ಆ ಹುಡುಗ/ಹುಡುಗಿ ಇಷ್ಟ ಅವನನ್ನೇ/ಅವಳನ್ನೇ ಮದ್ವೆ ಆಗೋದು ಅಂದ್ರೆ ಕೋಪ ಬರೋದು, ಅದಕ್ಕೆ ತಕ್ಕಂತೆ ವಾಗ್ವಾದ, ಸಣ್ಣ ಜಗಳ ಇದೆಲ್ಲ ಸಹಜಾನೆ. ಇದಕ್ಕೆ ಮುಖ್ಯ ಇವು ಕಾರಣಗಳು ಇರಬಹುದು,
ಹುಡ್ಗ/ಹುಡ್ಗಿ ಸರಿಯಾಗಿದ್ದಾರೋ ಇಲ್ವೋ.
ಅವರಿಬ್ಬರ ಮಧ್ಯೆ ಇರೋದು ನಿಜವಾದ ಪ್ರೀತಿನಾ??? ಆಕರ್ಷಣೆನಾ??? ಆಸ್ತಿ-ಪಾಸ್ತಿ etc. ಮೇಲಿನ ಆಸೇನಾ?
ನಿಜವಾದ ಪ್ರೀತಿ ಆದ್ರೆ, ಅದು ಎಷ್ಟು ಗಟ್ಟಿ?
ಕೊನೆ ವರ್ಗು ಜೊತೆಗೆ ಇರ್ತಾರಾ? 
ಹೀಗೆ ಹತ್ತಾರು ಕಾರಣಗಳು ಸಿಗುತ್ತೆ, ಪ್ರಶ್ನೆಗಳು ಬರುತ್ತೆ. ಈ ಪ್ರಶ್ನೆಗಳಿಗೆ ಪುಷ್ಠಿ ಕೊಡೋದಕ್ಕೆ ಅಂತಾನೆ  ನಮ್ಮ ಸುತ್ತ  ಲವ್ ಮ್ಯಾರೇಜ್ failure caseಗಳು, ಆತ್ಮಹತ್ಯೆಗಳು, ಮೋಸ-ವಂಚನೆಗಳು ನಡಿತಾ ಇರ್ತಾವೆ.

ಈ teenage ಅನ್ನೋದೇ ಹಾಗೆ ನೋಡಿ, ಈ ageage ಅಲ್ಲಿ ಹಿಂಗೆಲ್ಲ ಏನೇನೋ ಆಗ್ಬಿಡುತ್ತೆ... ಹಿಂಗೆಲ್ಲ ಹೆಂಗೆಂಗೋ ಆಗೋದು ಏನು ಅಂತ ಗೊತ್ತಿಲ್ದೆ ಇದ್ರೂ, ಅದು ಹುಡ್ಗ ಹುಡ್ಗಿ ಮಧ್ಯೆ ಆದ್ರೆ ಕೊನೆಗೆ ಅದಕ್ಕೆ ಪ್ರೀತಿ ಅಂತಾನೆ ರೂಪ ಸಿಗೋದು. ಇಂತಹ ಪ್ರೀತಿ ಎಷ್ಟು ನಿಜ, ಎಷ್ಟು ಸುಳ್ಳು ಅಂತ ಹೇಳೋಕೆ ದಿವ್ಯ ದೃಷ್ಟಿ ಇರಬೇಕಾಗುತ್ತೆ. 
ಇದು ಬಿಡಿ, ಇನ್ನೇನು ಎಲ್ಲರ್ಗೂ ಚೆನ್ನಾಗಿ ಬುದ್ಧಿ ಬಂದಿರುತ್ತೆ, ಲೈಫ್ ಅಲ್ಲಿ settle ಅಗೋ ಟೈಮ್, ಆಗ ಹೇಗೋ ಪ್ರೀತಿ ಆಯ್ತು... ಅಥವಾ ಅದೇ ಹಳೆಯ ಪ್ರೀತಿ ಹಾಗೆ ಮುಂದುವರ್ಕೊಂಡು ಬಂದಿತ್ತು ಅಂತ ಅಂದ್ರೆ, ಈ ಪ್ರೇಮಿಗಳ ಮಧ್ಯೆ ಎದುರಾಗೋದು ಅಪ್ಪ-ಅಮ್ಮ. ಹುಡ್ಗ ಅಥವಾ ಹುಡ್ಗಿಗೆ ಮನೆ ಕಡೆ ಮದ್ವೆ ಮಾತುಕತೆ ಶುರುಅಗುತ್ತೆ, ಮೊದ-ಮೊದಲು ಇದಕ್ಕೆ ವಿರೋಧ ಅದ್ರು, "ಕಣ್ಣೀರಿಗೆ ಕರಗದ ಮನಸಿದೆಯೇ?" ಅಂತ ಕೇಳೋ ಪ್ರಶ್ನೆಗೆ ತಕ್ಕಂತೆ, ಕರಗಿ ಒಪ್ಕೋತಾರೆ. ಅದು ಒತ್ತಾಯಪೂರ್ವಕವಾಗಿ ಅದ್ರು ಆಗಬಹುದು, ಕಣ್ಣೀರ ಕಥೆ ಅದ್ರು ಆಗಬಹುದು ಅಥವಾ ಇನ್ನು ಬೇರೆ ಏನಾದ್ರು ಆಗಬಹುದು, ಒಟ್ನಲ್ಲಿ ಆ ಪ್ರೀತಿಗೆ break. ಇದನ್ನ ಪ್ರೀತಿ ಅನ್ಬೇಕೋ ಏನ್ ಅಂತ ಹೇಳಬೇಕೋ ಗೊತ್ತಿಲ್ಲ. ಹೀಗೆ ಒಂದು ಸಂದರ್ಭ ಎದುರಿಸೋಕೆ ಆಗದೆ ಇರೋರು ಪ್ರೀತಿ ಯಾಕೆ ಮಾಡ್ಬೇಕು??  ಅಥವಾ ತಾನು ಹೀಗೆ ಅಂತ ಗೊತ್ತಿದ್ಮೇಲೆ ಪ್ರೀತಿಗೆ ಯಾಕೆ ಒಪ್ಪಿಗೆ ಕೊಡ್ಬೇಕು?. ಈ ರೀತಿ break ಆಗೋಕೆ ಮುಂಚೆ ದಯವಿಟ್ಟು ಸ್ವಲ್ಪ ಯೋಚನೆ ಮಾಡ್ಬೇಕು ಅಲ್ವಾ? ಹಾಗೆ ಇನ್ನೊಂದು ವ್ಯಕ್ತಿಯ ಭಾವನೆಗಳಿಗೆ ಬೆಲೆ ಕೊಡ್ಬೇಕು ಅಲ್ವಾ?  ಇಂಥ ಸಂದರ್ಭದಲ್ಲಿ ದುರ್ಬಲ ಮನಸ್ಸಿನವರು ಏನ್ ಮಾಡೋಕು ಹಿಂದೂ-ಮುಂದು ನೋಡೋಲ್ಲ, ಅದರಿಂದ ಏನಾದ್ರು ಹೆಚ್ಚು-ಕಡ್ಮೆ ಆದ್ರೆ???? ವ್ಯಕ್ತಿಯ ಜೀವಕ್ಕೆ ಬೆಲೆ ಇದೆ ಅಲ್ವಾ??? ಹಾಗಾಗಿ ಪ್ರೀತಿ ಅಂಗೀಕಾರ ಆಗೋಕೆ ಮುಂಚೆ ಸ್ವಲ್ಪ ಯೋಚಿಸಿದರೆ ಒಳ್ಳೇದು, ಏನಂತೀರಾ???

ಪ್ರೀತಿ ಹೀಗೆ ದುರಂತ ಅಂತ್ಯ ಕಾಣೋದು ಒಂದ್ ಕಡೆ ಆದ್ರೆ, ಇನ್ನೊಂದು ಹಣ-ಆಸ್ತಿಯ ಮೇಲಿನ ದುರಾಸೆ, ಅಂದದ ಆಕರ್ಷಣೆ... ಹೀಗೆ ಹಣ-ಆಕರ್ಷಣೆ ಹಿಂದೆ ಬೀಳೋದ್ರಲ್ಲಿ ಹುಡ್ಗ-ಹುಡ್ಗಿ ಯಾರು ಏನ್ ಕಡಮೆ ಇಲ್ಲ, ಎಲ್ಲರು ಸಮಾನರೆ. ಆಸೆ ಆಕರ್ಷಣೆಗಳಿಂದ ಬಂದ ಪ್ರೀತಿ, ಮುಂದೆ ಮದ್ವೆ ಆಗಿ ಬದಲಾವಣೆ ಆದ್ರು, ಅದು ಎಷ್ಟು ದಿನ ಗಟ್ಟಿಯಾಗಿ ನಿಲ್ಲುತ್ತೆ ಅಂತ ಹೇಳೋಕೆ ಸಾಧ್ಯ ಇಲ್ಲ. ಆಸೆ-ಹಣ-ಆಕರ್ಷಣೆಯ ಮೂಲ ಎಲ್ಲಿವರ್ಗು ಬರಿದಾಗೊದಿಲ್ವೋ ಅಥವಾ ಬೇಸರ ತರ್ಸೋದಿಲ್ವೋ ಅಲ್ಲಿವರ್ಗು ಗಟ್ಟಿ ಇರಬಹುದು ಅಷ್ಟೇ. ಇದಕ್ಕೆ ಪ್ರೀತಿ ಅಂತ ಹೆಂಗಾದ್ರು ಕರ್ಯೋಕೆ ಸಾಧ್ಯ? ಅದಕ್ಕೆ ಅಂತಾನೆ ಬೇರೆ ಬೇರೆ ಹೆಸರುಗಳಿವೆ, ಅದರ ಬಗ್ಗೆ ಮಾತಾಡೋದು ಬೇಡ ಬಿಡಿ.

  • ತನ್ನ ಎದೆ ಹಾಲು ಕುಡಿದ ಮಗು, ತನ್ನೆದೆಗೆ ಎರಡೂ ಕಾಲಲ್ಲಿ ಒದ್ದರೂ, ಆ ಮಗುವನ್ನೂ ಮುದ್ದಿಸ್ತಾಳೆ ಅಲ್ವೇ ಅದು ತಾಯಿ ಪ್ರೀತಿ.
  • ತಂದೆ ತನ್ನ ಮಗುವನ್ನು ಆಟ ಅಡಿಸ್ಬೇಕಿದ್ರೆ, ಆ ಮಗು ಅವನ ಮೇಲೇರಿ ನೃತ್ಯ ಮಾಡಿದ್ರು, ಆ ಮಗುವಿನ ಹುಟ್ಟಿಗೆ ನಾನೇ ಕಾರಣ ಎನ್ನುವ ಅಹಂ ಬಿಟ್ಟು ಆ ಮಗುವಿನ ಭವಿಷ್ಯದ ಬಗ್ಗೆ ಯೋಚನೆ ಮಾಡ್ತಾನೆ ಅಲ್ವೇ ಅದು ತಂದೆ ಪ್ರೀತಿ.
  • ಇನ್ನು ಗೆಳೆತನದಲ್ಲಿ ಹೇಳಲೇಬೇಕಿಲ್ಲ ಯಾವುದೇ ನಿರೀಕ್ಷೆಗಳಿಲ್ಲದ, ನಿಸ್ವಾರ್ಥ, ಮುಗ್ದ, ನಲಿವು-ನೋವು ಹಂಚ್ಕೊಂಡು ಸ್ಪಂದಿಸುವಂತಹ ಭಾವನೆ/ಅನುಭವ,  ತಿಳಿ ನೀರಿನಂಥ  ಪ್ರೀತಿ.   


ಇಷ್ಟೆಲ್ಲಾ ಎಲ್ಲೆಗಳನ್ನ ಮೀರಿ ಒಂದು ಜೋಡಿ ಮದ್ವೆ ಆದ್ರೆ, ಅದು ಖುಷಿ ತರುವಂತಹ ವಿಷ್ಯಾನೆ... :) ಮದ್ವೆ ಆದ್ಮೇಲೆ, ಒಂದೇ ಮನೇಲಿ ಇರ್ಬೇಕಿದ್ರೆ ಸಣ್ಣ-ಪುಟ್ಟ ಜಗಳ ಆಗೋದು ಸಾಮಾನ್ಯ, ಅದು ಗಂಡ-ಹೆಂಡತಿ ಮಧ್ಯೇನೇ ಆಗಿರಬೇಕು ಅಂತ ಅಲ್ಲ, ಅಣ್ಣ-ತಮ್ಮ, ಅಕ್ಕ-ತಂಗಿ, ಗೆಳೆಯರು, ಬಂಧುಗಳು ಯಾರೇ ಅದ್ರು ಇದು ತಪ್ಪಿದ್ದಲ್ಲ. ಇಂಥ ಸಣ್ಣ-ಪುಟ್ಟ ಜಗಳಗಳು ಪ್ರೀತಿ-ಪ್ರೇಮ, ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಳೋದು, ಒಬ್ಬರಿಗೊಗ್ಗಬ್ಬರು ಅನುಸರಿಸ್ಕೊಂಡು ಹೋಗೋದು, ಹೀಗೆ ಯಾವ್ದೋ ಕಾರಣದಿಂದ ರಾಜಿ ಆದ್ರೆ ತುಂಬ ಚೆನ್ನಾಗಿರುತ್ತೆ. ಆದ್ರೆ ಅದು ಆಗೋದು ತುಂಬ ಕಡಿಮೆ ಅನ್ಸುತ್ತೆ, ನಾವು ಗಂಡ-ಹೆಂಡತಿ, ನಾನು ಮೇಲು, ನೀನು ಕೀಳು, ನಾನು ಎನ್ನುವ ಸ್ವಪ್ರತಿಷ್ಠೆ, ನಾನ್ಯಾಕೆ ಬಗ್ಗಬೇಕು ಎನ್ನುವ ಹಠ, ಇತ್ಯಾದಿ ಇದ್ರೆ, ಸಂಸಾರ ಸಾಗಬೇಕಿರೋ ಬಂಡಿಯಲ್ಲಿ, ಒಂದು ಎತ್ತು ಏರಿಗೆ ಅಂದ್ರೆ, ಇನ್ನೊಂದು ನೀರಿಗೆ ಅಂತ ಆಗುತ್ತೆ ಜೀವನ.

ಇದಿಷ್ಟು Love Marriage ಬಗ್ಗೆ blade ಹಾಕ್ದ. ಇನ್ನು Arranged Marriage ಬಗ್ಗೆ ಏನ್ ಹೇಳ್ತಾನೆ ಅಂತ ತಲೆ ಕೆಡಿಸ್ಕೋಬೇಡಿ. ಅದನ್ನು simple ಆಗಿ ಹೇಳಿ ಮುಗಿಸ್ಬಿಡ್ತೀನಿ.... ದಯವಿಟ್ಟು ಸ್ವಲ್ಪ ತಾಳ್ಮೆ ಉಳಿಸ್ಕೊಳ್ಳಿ...

ಹುಡ್ಗ/ಹುಡ್ಗಿ ತುಂಬಾ innocent , ಇವರಿಗೆ ಈ ಪ್ರೀತಿ-ಪ್ರೇಮ, ಆಸೆ-ಬಯಕೆ ಈ ತರಹದ ಯಾವುದೇ ಯೋಚನೆ/ಆಲೋಚನೆ ಇಲ್ಲ. ಮದ್ವೆ ವಯಸ್ಸಿಗೆ ಬರ್ತಿದ್ದಂಗೆ ಅಪ್ಪ-ಅಮ್ಮನ್ದಿರ್ಗೆ ಕೆಲಸ ಶುರು. "ನಮ್ ಹುಡ್ಗಿ ತುಂಬಾ ಒಳ್ಳೆವ್ಳು, ನಿಮ್ ಕಡೆ ಯಾವ್ದಾದ್ರು ಒಳ್ಳೆ ವರ ಇದ್ರೆ ಹೇಳಿ", "ನಮ್ ಹುಡ್ಗ ತುಂಬ ಒಳ್ಳೆವ್ನು, ಸಾಧು, ಒಳ್ಳೆ ಕಡೆ ಕೆಲಸ ಮಾಡ್ತಿದಾನೆ, ಕೈತುಂಬಾ ಸಂಬಳ, ನಿಮ್ ಕಡೆ ಒಂದು ಒಳ್ಳೆ ವಧು ಇದ್ರೆ ಹೇಳಿ". ಹೀಗೆ ಶುರು ಆಗುತ್ತೆ ನೋಡಿ ಹುಡುಕಾಟ/ಬೇಟೆ. ಪತ್ರ, ವಿಷ್ಯ, ಜಾತಕ, ಫೋಟೋ ಬೇರೆ ಅವಶ್ಯ ಮಾಹಿತಿಗಳು ಊರೆಲ್ಲಾ ಸುತ್ತಿ, ಕೊನೆಗೆ ಮಾತುಕತೆ ವರೆಗೂ ಬರುತ್ತೆ. "ಎತ್ತಣಿಂದೆತ್ತ ಸಂಬಂಧವಯ್ಯಾ???" ಎನ್ನುವ ಹಾಗೆ, ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಹೀಗೆ ಒಂದಾಗೋ ಸಂದರ್ಭ ಬರುತ್ತೆ. ಜಾತಕ ಎಲ್ಲಾ ಓಕೆ ಆಗಿ, ಹುಡ್ಗ ಹುಡ್ಗಿ ಒಪ್ಕೊಂಡು, ಜಾತಿ-ಕುಲ-ಗೋತ್ರ ಎಲ್ಲಾ ಸರಿ ಹೊಂದಿ, background verification  success ಆಗಿ... full settled  ಅಂತ ಅನ್ಕೊಳ್ಳಿ. ಮೊದ್ಲು engagement ಆಗುತ್ತೆ... engagement ಆಗಿ ಸ್ವಲ್ಪ ದಿನಕ್ಕೆ ಮದ್ವೆ, ಅಂತ ಮೊದ್ಲೇ ನಿರ್ಧಾರ ಮಾಡ್ಕೊಂದಿರ್ತಾರೆ. ಮದ್ವೆ ಲೈಫ್ ಅಲ್ಲಿ ಒಂದೇ ಸಲ (doubt) ಆಗೋದು ನೋಡಿ,  ಅದಕ್ಕೆ  ತುಂಬ grand ಆಗಿ ಮಾಡ್ಬೇಕು ಅಂತ ಅಪ್ಪ-ಅಮ್ಮನ್ದಿರ್ಗೆ ಆಸೆ. ಅದಕ್ಕೆ ತಕ್ಕ ಸಿದ್ಧತೆ ಆಗಬೇಕು ಅಲ್ವ, ಛತ್ರ, ಊಟ-ವ್ಯವಸ್ಥೆ, ವಾಲಗ, ಬಂಧು-ಬಳಗನ ಆಹ್ವಾನ ಮಾಡೋದು, ವಡವೆ-ವಸ್ತ್ರ ಖರೀದಿ, ಅಬ್ಬಾ!!! ಒಂದಾ-ಎರಡಾ... ಇದಕ್ಕೆಲ್ಲ ಸ್ವಲ್ಪ ಟೈಮ್ ಬೇಕು ತಾನೇ?? ಅದಕ್ಕೆ engagement ಆದ್ಮೇಲೆ ಸ್ವಲ್ಪ ಗ್ಯಾಪ್ :) .
ಅಪ್ಪ-ಅಮ್ಮ, ಬಂಧು-ಬಳಗ ಹಿರಿಯರು-ಕಿರಿಯರು, ಸಮಾಜದ ಗಣ್ಯ ವ್ಯಕ್ತಿಗಳು ಅಂತ ಅನ್ನಿಸ್ಕೊಂಡಿರೋರು ಈ ಎಲ್ಲರ ಸಮ್ಮುಖದಲ್ಲಿ ವಿಜೃಂಭಣೆ, ಸಂತಸ, ಉಲ್ಲಾಸ ಉತ್ಸಾಹಗಳಿಂದ, ಕೊನೆಗೂ ಮದ್ವೆ ಸಾಂಘವಾಗಿ ಮುಗಿಯುತ್ತೆ. ಮದ್ವೆ ಅದ್ಮೇಲೆ ಮತ್ತೆ ಅದೇ ಅಲ್ವಾ, ಒಟ್ಟಿಗೆ ಇರ್ಬೇಕು, ಒಂದೇ ಮನೆಯಲ್ಲಿ ಇರ್ಬೇಕು. ಒಬ್ಬರನ್ನೋಬ್ರು ನೋಡ್ಬೇಕು, ಅರ್ಥ ಮಾಡ್ಕೊಬೇಕು. ಗಂಡ ಹೆಂಡತಿಯರಲ್ಲಿ ಯಾರದ್ರು ಮಾತಿನ ಮಲ್ಲರಾಗಿದ್ರೆ engagement-marriage ಗ್ಯಾಪ್ ಅಲ್ಲಿ ಜಾಸ್ತಿ ಮಾತುಕತೆ ಆಗಿ, ಒಂದು ಮಟ್ಟಕ್ಕೆ ಅರ್ಥ ಮಾಡ್ಕೊಳೋಕೆ ಪ್ರಯತ್ನ ಮಾಡಿರ್ತಾರೆ, ಇಲ್ಲ ಅಂದ್ರೆ ಅದು ಕೂಡ ಹೊಸದಾಗಿ ಶುರು ಆಗಬೇಕು. ಈ ತರಹ ಸಂದರ್ಭ arranged marriage ಅಲ್ಲಿ ಕೂಡ ಇರ್ಬೇಕಿದ್ರೆ, ಇಲ್ಲಿಯೂ ಸಣ್ಣ ಜಗಳ, ವಾಗ್ವಾಗ ಬರೋದು ಸಹಜ ತಾನೇ?? 

ಮತ್ತದೇ ಪುನರಾವರ್ತನೆ...   ಜಗಳ ಶುರು ಆದ್ರೆ, ಹೇಗೆ ಯಾವ ಹಂತ ಮುಟ್ಟುತ್ತೆ ಎನ್ನುವುದು ಆ ಜೋಡಿಯ ಮನಃಸ್ಥಿತಿ, ಸಂದರ್ಭ, ಯೋಚನಾಶಕ್ತಿ ಇತರೆ ಮುಖ್ಯ ಅಂಶಗಳ ಮೇಲೆ ನಿಂತಿರುತ್ತೆ ಅಲ್ವಾ?  ಇಲ್ಲಿ ಕೂಡ "ಒಂದು ಎತ್ತು ಏರಿಗೆ, ಮತ್ತೊಂದು ನೀರಿಗೆ" ಅಂದ್ರೆ ಆಗೋದು ಅದೇ ರಾದ್ದಾಂತನೆ. ಆದ್ರೆ ಇಲ್ಲಿ ಅಪ್ಪ-ಅಮ್ಮ, ಹಿರಿಯರು, ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಕೆಲವು ಹಿರೀಕರು ಮಧ್ಯೆ ಬಂದು ರಾಜಿ ಮಾಡುವ ಸಾಧ್ಯತೆ ಇರುತ್ತೆ, ಸಾಧ್ಯತೆ ಇರುತ್ತೆಯೇ ಹೊರತು, ಅದು ಸಾಧ್ಯ ಆಗೋದು ಆ ಜೋಡಿಯ ಸಮ್ಮತಿ ಸಿಕ್ಕಿದಮೆಲೇನೆ. ಗಂಡ-ಹೆಂಡತಿನೇ ರಾಜಿಗೆ ಸಿದ್ದ ಇಲ್ಲ ಅಂದ್ರೆ ಎಲ್ಲಾ ಮಾತುಕತೆ, ಯಾರೇ ಬಂದು ಮೂಗು ತೂರ್ಸಿದ್ರು ಅದು " ನೀರಲ್ಲಿ ಹೋಮ ಮಾಡಿದಂತೆ" ನೆ ಆಗೋದು. 

Arranged marriage ಆದ್ರುನೂ, ಇಲ್ಲಿ ಕೂಡ ನೂರಕ್ಕೆ ನೂರು ಎಲ್ಲಾ ಮುಕ್ತವಾಗಿದೆ, ಸರಿಯಾಗಿದೆ ಅಂತ ಹೇಳೋಹಾಗಿಲ್ಲ. ಇಲ್ಲಿಯೂ ಸಹ ಆಸ್ತಿ-ಅಂತಸ್ತು, ಅಂದ-ಚೆಂದ ಆಕರ್ಷಣೆ, ವರದಕ್ಷಿಣೆ ಹೀಗೆ ಬೇರೆ ಬೇರೆ ಕಾರಣಕ್ಕಾಗಿ ಮದ್ವೆ ಆಗಿರುವಂತ ಸಾಧ್ಯತೆ ಇದ್ದೇ ಇರುತ್ತೆ. ಇವೆಲ್ಲವುಗಳನ್ನ ಒಂದು side ಅಲ್ಲಿ ಇಡೋಣ ಅಂದ್ರೆ, ಎರಡೂ case ಅಲ್ಲಿ (arranged and love marriage), ಮದ್ವೆ ಅದ್ಮೇಲೆ ಬೇರೆ ಬೇರೆ ಬದಲಾವಣೆ ಆಗಬಹುದು. ಮದುವೆಯ ನಂತರದ ಸಂಬಂಧಗಳು, ಪರ ಪುರುಷ/ಸ್ತ್ರೀ ಸಂಬಂಧ, ಅನುಮಾನ, ಚಟಗಳು,  ಸಮಾಜ, ಒತ್ತಡ ಏನೆಲ್ಲಾ ಆಗಬಹುದು, ಸಧ್ಯಕ್ಕೆ ಊಹಿಸೋದು ತುಂಬಾ ಕಷ್ಟ. ನೀವು ಇದಕ್ಕೆ ಸಮ್ಮತಿಸ್ತೀರ ಅಂತ ನನ್ನ ಭಾವನೆ.

ಹೀಗೆ ಮದುವೆಯ ನಂತರದ ಜೀವನ/ಆಗು-ಹೋಗುಗಳ(ಭವಿಷ್ಯದ) ಬಗ್ಗೆ ಯಾರೇ ಅದ್ರು ಮೊದ್ಲು ಕಲ್ಪನೆ ಮಾಡ್ಕೊಬಹುದೇ ಹೊರತು, ಹೀಗೆ ಆಗುತ್ತೆ ಅಂತ ಖಚಿತವಾಗಿ ಹೇಳೋಕೆ ಸಾಧ್ಯ ಇಲ್ಲ ಅಲ್ವಾ? ಅದನ್ನ ಉಳಿಸಿಕೊಳ್ಳೋದು ಹಾಳು ಮಾಡ್ಕೊಳೋದು ಎಲ್ಲಾ ಆ ಗಂಡು-ಹೆಣ್ಣಿನ ಕೈಲಿ ಇರುತ್ತೆಯೇ ಹೊರತು ಮೂರನೇ ವ್ಯಕ್ತಿಯ ಕೈಯಲ್ಲಿ ಅಲ್ಲ. ಅದು ಅಪ್ಪ-ಅಮ್ಮ ಅದ್ರು ಆಗಿರಬಹುದು, ಬಂಧು-ಬಳಗ, ಗೆಳಯ-ಗೆಳತಿ ಯಾರೇ ಆಗಿರಬಹುದು, ಎಷ್ಟೇ ಪ್ರಯತ್ನಪಟ್ರು ಆ ಜೋಡಿಯ ನಿರ್ಧಾರದಲ್ಲಿ ಬದಲಾವಣೆ ಬರೋದು ಕಷ್ಟ ಸಾಧ್ಯ.  

ಒಂದು ಜೋಡಿ, ಗಂಡು-ಹೆಣ್ಣು, ಗಂಡ-ಹೆಂಡತಿ ಇವರ ಮದುವೆಯ ನಂತರದ ಜೀವನ ಇವರಿಬ್ಬರ ಆಸೆ ಆಕಾಂಕ್ಷೆ, ನೋವು ನಲಿವು, ಅಳಿವು-ಉಳಿವು, ಪ್ರೀತಿ-ಜಗಳ, ಇತ್ಯಾದಿಗಳೆಲ್ಲ, ಇವರ ಸ್ವಂತ ಅಸ್ತಿತ್ವ, ನಿರ್ಧಾರಗಳಿಗೆ ಬಿಟ್ಟಿದ್ದು ಆಗಿರ್ಬೇಕಿದ್ರೆ,

Love marriage - Arranged marriage  ಅಂತ ಬೇಧ-ಭಾವ ಮಾಡ್ಬೇಕಾ??
Love marriage - Arranged marriage ಅಂತ ಮನ:ಸ್ಥಾಪ, ರಾದ್ದಾಂತ ಬೇಕಾ?? 
Love marriage ಗೆ ಸಹಾಯ ಮಾಡೋಕೆ ಹೋಗಿ, ಎಷ್ಟೋ ಗೆಳೆಯರು ಹಿರಿಯರ ಜೊತೆಗಿನ ತಮ್ಮ ಅನುಬಂಧ ಕಳ್ಕೊಬೇಕಾ?
Love marriage ಗೆ ತಮ್ಮ ತಂದೆ-ತಾಯಿ ಒಪ್ಲಿಲ್ಲ ಅಂತ ಅತ್ಯಮೂಲ್ಯವಾದ ಬಾಳನ್ನ ಆತ್ಮಹತ್ಯೆಯ ಮೂಲಕ ಕೊನೆಮಾಡ್ಕೊಬೇಕಾ?
ತಾವು ಒಪ್ಪಿದ ಹುಡ್ಗ/ಹುಡ್ಗಿನೆ ಮದ್ವೆ ಆಗ್ಬೇಕು ಅಂತ ತಂದೆ-ತಾಯಿ ಒತ್ತಾಯ ಮಾಡೋದು ಸರಿನಾ?
ಸಮಾಜಕ್ಕೆ ಹೆದರಿ arranged marriage ಆಗಬೇಕು ಅಂತ ಹೇಳೋ ತಂದೆ-ತಾಯಿಗೆ, ತಮ್ಮ ಕಷ್ಟಕಾಲದಲ್ಲಿ ಈ ಸಮಾಜ/ಸಮಾಜದ ಜನ ಏನ್ ಮಾಡ್ತಾರೆ ಅಂತ ಗೊತ್ತಿಲ್ವಾ?

ಇನ್ನೂ ಪ್ರಶ್ನೆಗಳು ಸೇರ್ಕೊತಾ ಹೋಗ್ತವೆ... ಈಗಾಗ್ಲೇ ಜಾಸ್ತಿ ಆಗಿರೋದ್ರಿಂದ ಇಲ್ಲಿಗೆ stop ಮಾಡ್ತಿದ್ದೀನಿ.... 

ಕಟ್ಟ-ಕಡೆಯದಾಗಿ ನನ್ನ ಅಭಿಪ್ರಾಯ ಅನಿಸಿಕೆ ಹೇಳ್ಬೇಕು ಅಲ್ವ.. ಹೀಗೆ ನಮ್ಮ ಸುತ್ತಲಿನ ದಿನ ನಿತ್ಯದ ಜೀವನದಲ್ಲಿ ಇಂತಹ ಸಾವಿರಾರು ಘಟನೆಗಳನ್ನ ನೋಡ್ತೀವಿ, ನಾವು ಭಾಗಿ ಆಗಿದ್ದೀವಿ, ಕೆಲವು ಸಲ ಆಗಬೇಕಾಗಿ ಬರುತ್ತೆ.... ಹಾಗಾಗಿ... ಮದುವೆ ಅನ್ನೋದಕ್ಕೆ ಎಷ್ಟು ಪ್ರಾಧಾನ್ಯತೆ ಕೊಡಬೇಕೋ ಕೊಟ್ಟು, ಹೆಚ್ಚು ಸಮಯ ಬೇಡದ ವಿಷಯಗಳಲ್ಲಿ ವ್ಯರ್ಥ ಮಾಡದೇ, ಬೇಗ ಅದಕ್ಕೆ ಒಂದು ಒಳ್ಳೆ ರೂಪ ಕೊಟ್ರೆ ಒಳ್ಳೇದು. ಹೇಗಿದ್ರು ಮದುವೆಯ ನಂತರದ ಜೀವನಕ್ಕೆ, ಮದುವೆಯಾದ ಗಂಡು-ಹೆಣ್ಣು ಸಂಪೂರ್ಣ ಜವಾಬ್ದಾರಿ ಅಲ್ವೇ...?????? ;)  ಏನಂತೀರಾ?????