Custom Search
Showing posts with label ಪ್ರಯಾಣ. Show all posts
Showing posts with label ಪ್ರಯಾಣ. Show all posts

Wednesday, January 12, 2011

ಸ್ಕಂದಗಿರಿಯ ಸುಂದರ ಸೂರ್ಯೋದಯ...


ನನ್ನದು ಆಗ್ಲೇ ಟ್ರಿಪ್ ಪ್ಲಾನ್ ಆಗಿತ್ತು, 7th Jan 2011 ಹೊನ್ನೇಮರ್ಡು ಹೋಗ್‌ಬೇಕು ಅಂತ. ಹೀಗೆ  gtalk ಅಲ್ಲಿ ಚಾಟ್ ಮಾಡ್ತಿರ್ಬೇಕಿದ್ರೆ, ಗೆಳೆಯ ರವಿ ಕೇಳ್ದ, "ಈ ವೀಕೆಂಡ್ ಫ್ರೀ ಇದೀಯಾ? for one day trip???", ಮೊದ್ಲು ನಾನು ಸ್ವಲ್ಪ ಹಿಂದೂ ಮುಂದು ನೋಡ್ಬೆಕಾಯ್ತು, ಆಲ್‌ರೆಡೀ ಪ್ಲಾನ್ ಆಗಿರೋ ಟ್ರಿಪ್ ಗೆ ಏನು ಕಿರಿಕ್ ಆಗ್ಬಾರ್‌ದೂ ಅಂತ. ಆಮೇಲೆ ಸರಿ ಫ್ರೀ ಇದೇನಿ, ಹೋಗೋಣ ಅಂತ ಡಿಸೈಡ್ ಆಯ್ತು. ಜಾಗ??? ಹ್ಹ ಹ ಹ.. ಇಬ್ಬರಿಗೂ ಇದ್ದಿದ್ದು ಒಂದೇ ಪ್ರಶ್ನೆ, ಎಲ್ಲಿ ಹೋಗೋದು, ಫಾರ್ ವನ್ ಡೇ ಟ್ರಿಪ್??? ನನ್ ತಲೆಗೆ ಮಿಂಚಂತೆ ಬಂದಿದ್ದು ಸ್ಕಂದಗಿರಿ. ನಮ್ಮಿಬ್ರಿಗೂ ಓಕೇ ಆಯ್ತು ಅಷ್ಟೇ. ಶುಕ್ರವಾರ 24th Dec 2010 ರಾತ್ರಿ, ಹೊರಟೇ ಬಿಟ್ವಿ, ನಾನು, ರವಿ, ಮತ್ತೆ ಅವನ ಇಬ್ಬರು ಗೆಳೆಯರು.

ಇನ್ಫರ್ಮೇಶನ್ ಕಲೆಕ್ಟ್ ಮಾಡಿದ್ ಪ್ರಕಾರ ಸ್ವಲ್ಪ ಬೇಗ ಹೊರ್ಡೋದು ಅಂತ ಮಾತಾಡ್‌ಕೊಂಡು, ಮಿನಿಮಮ್ ಲಗೇಜ್/ಫುಡ್/ಸ್ನ್ಯಾಕ್ಸ್ ರೆಡೀ ಮಾಡ್ಕೊಂಡು ಗಾಡಿ ಎತ್ತಿದ್ವಿ. ಮೂರು ಜನ ರವಿಯ ಕಾರ್ ನಲ್ಲಿ ಕಾರ್ಪೊರೇಶನ್ ಹತ್ರ ಬರ್ಬೇಕಿತ್ತು, ಮತ್ತೆ ನಾನು ಅಲ್ಲೇ ವೇಟ್ ಮಾಡ್‌ಬೇಕಿತ್ತು. ಪ್ಲಾನ್ ಹಾಕ್ಕೊಂಡ್ ಥರಾನೆ  ಕಾರ್ಪೊರೇಶನ್ ಹತ್ರ ಮೀಟ್ ಆಗಿ, ಶುರು ಆಯ್ತು ನಮ್ಮ ಪಯಣ ಸ್ಕಂದಗಿರಿ ಕಡೆಗೆ (ಟೈಮ್ 11.00PM). ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ರೋಡಲ್ಲಿ.. ಸೊಯ್‌ಯ್‌ಯ್ಯ್ ಅಂತ ಹೋಗ್ತಿರ್ಬೇಕಿದ್ರೆ.. ಜ್ಞಾಪಕ ಆಯ್ತು  ಗಾಡಿಲಿ ಪೆಟ್ರೋಲ್ ಕಡ್ಮೆ ಇದೆ ಅಂತ. ಹ್ಹ ಹ ಹ.. ಏರ್‌ಪೋರ್ಟ್ ಪಾಸ್ ಆಗಿ, ಮುಂದೆ  ಹೋಗಿದ್ವಿ, ಅಲ್ಲಿ ರೀಚ್ ಆಗೋ  ಹೊತ್ಗೆ  ಎಲ್ಲ ಪೆಟ್ರೋಲ್ ಬಂಕ್ ಕ್ಲೋಸ್ ಆಗಿದ್ರಿಂದ.. ಮತ್ತೆ 16KM ವಾಪಸ್ ಬರ್ಬೇಕಾಯ್ತು, ಏರ್‌ಪೋರ್ಟ್ ಕಡೆಗೆ , ಯಲಹಂಕ ಹತ್ರ. ಕೈಯಲ್ಲಿ google mapsದು ಪ್ರಿಂಟ್, GPS ಇಟ್ಕೊಂಡು ಮುಂದೆ ಹೋದ್ವಿ, ಚಿಕ್ಕಬಳ್ಳಾಪುರ ರೀಚ್ ಆದ್ಮೇಲೆ ಸ್ವಲ್ಪ ರಿಸ್ಕ್ ಆಯ್ತು, maps, GPS ಹೆಲ್ಪ್ ಮಾಡ್ಲಿಲ್ಲ, ಅಲ್ಲೇ ಇದ್ದ ಯಾರ್ಯಾರ್ನೊ ಕೇಳ್ಕೊಂಡು ಹೋಗಿದ್ದಾಯ್ತು :(. ಅಲ್ಲಿ ಒಂದ್ ಕಡೆ ಮಿಸ್ ಆಗಿ ರಾಂಗ್ ಟರ್ನ್ ತಗೊಂಡ್ ಮತ್ತೆ ವಾಪಸ್ ಚಿಕ್ಕಬಳ್ಳಾಪುರ ಊರೊಳಗೆ ಬಂದು.. ವಾಪಸ್ ನಂದೀಬೆಟ್ಟದ ಕಡೆ ಇಂದ ಹೋಗೋಣ ಅಂತ ಡಿಸೈಡ್ ಮಾಡ್ಕೋಂಡ್ವಿ. ಆದ್ರೆ ಒಂದು ಲಾಸ್ಟ್ ಟ್ರೈ ಇರ್‍ಲಿ ಅಂತ.. ಮತ್ತೊಂದ್ ಸಲ ಅಲ್ಲೇ ಇದ್ದ ಪೋಲೀಸ್ ನ ಕೇಳಿ ಮುಂದೆ ಹೋದ್ವಿ... hurray.. ದಾರಿ ಸಿಕ್ತು.... :) ha ha... n we reached... :) :D

ಅಲ್ಲಿ ಹೋಗ್ತಿದ್ದಂಗೆ ಗೈಡ್ ಗಳ  ಹಾವಳಿ (800Rs ಅಂತೆ :@ grrrrrrrrrr), ನಾವು ಯಾವ್ದೇ ಗೈಡ್ ಬೇಡ ಅಂತ ಮುಂದೆ ಹೋದ್ವಿ. ಗಾಡಿ ಪಾರ್ಕ್ ಮಾಡಿ (parking charge paid 50Rs for car [20Rs for bike]), ಟ್ರೆಕಿಂಗ್ ಶುರು ಮಾಡ್ಕೊಂಡ್ವಿ. ಹ್ಹ ಹಾಹಾ.. ಅಲ್ಲಿದೆ ಟ್ವಿಸ್ಟ್.. ಸ್ವಲ್ಪ ಮುಂದೆ ಹೋಗಿ ದಾರಿ ಸಿಕ್‌ದೇ ತಲೆ ಕೆಡ್ತು, ಇದು ಗೊತ್ತಿಲ್ಡ ಒಬ್ಬ ತಾತ (ಗೈಡ್) ನಮ್ಹಿಂದೆ ಬರ್ತಿದ್ರು, ಆವ್ರು 400Rs ಇಂದ ಶುರು ಮಾಡ್ಕೊಂಡು, ಮಾತಾಡ್ತಿದ್ರು. ಕೊನೆಗೆ ದಾರಿ ಸಿಕ್‌ದೇ ಇದ್ದಾಗ, ಇನ್ನೊಂದು ಗ್ರೂಪ್ ಜೊತೆ ಸೇರಿ ಒಟ್ಟು 300Rs ಕೊಡೋದು ಅಂತ ಬಾರ್‌ಗೇನ್ ಮಾಡಿ ಜೈ ಅಂದ್ವಿ. ತಾತನ್ಗೆ 78 ವರ್ಷಗಳು..., ಮತ್ತೆ ಆವ್ರು ನಮ್ಮ ಗೈಡ್.. ;) . ನಾನು ಮತ್ತೆ ರವಿ ಫೈನ್, ಆರಾಮಾಗಿ ಹತ್ಕೊಂಡು ಹೋದ್ವಿ, ಉಳಿದ ಇಬ್ರೂ ಸ್ವಲ್ಪ ಹಿಂಸೆ ಪಡ್ತಿದ್ರು, ನಂಗಿಂತ ಫಾಸ್ಟಾಗಿ ನಮ್ ಗೈಡ್ ಮುಂದೆ ಹೋಗ್ತಿದ್ರು. ಎರಡು ಒರೆ ಮೂರು ಘಂಟೆಗಳ ಟ್ರೆಕಿಂಗ್ ಆದ್ಮೇಲೆ peak ಸೇರ್‌ಕೊಂಡ್ವಿ. maggi ತಿನ್ಕೊಂಡು, ಕ್ಯಾಂಪ್ ಫೈಯರ್ (camp fire) ಮುಂದೆ timepass ಮಾಡ್ತಿರ್ಬೇಕಿದ್ರೆ.. sunrise ಆಗೋಕೆ ಶುರು ಆಯ್ತು... sunrise ಆಗೋ ಟೈಮಲ್ಲಿ.. ಜಸ್ಟ್ ವೋವ್ವವ್ವ್ವ್ವ್ (just wowwwwwwww) ... ಅಷ್ಟೇ..  ಹಾಲಿನ ಸಮುದ್ರದ ತರಹ ಮೋಡಗಳು... ಕೆಳಗೆ ತೇಲ್ತಿದ್ರೆ, ದೂರದ ದಿಗಂತದಂಚಲ್ಲಿ ಸೂರ್ಯೋದಯ.. :) ಬೆಳ್ಳಗಿನ ಮೋಡಗಳ ಬಣ್ಣ ಹೊಂಬಣ್ಣಕ್ಕೆ ತಿರುಗ್ತಾ ಇತ್ತು ಸೂರ್ಯ ಬರ್ತಿದ್ದಂಗೆ. ತನ್ನ ಮನೆಯ ಬಾಗಿಲಿಗೆ ಚಿನ್ನ ಹಾಕಿರೋ ಹಾಗೆ ಕಾಣ್ತಿದ್ದ ಪೂರ್ವ ದಿಕ್ಕು.. ಆಹಾ... Soooooper... :)  ನಂಗಂತೂ ಮರೆಯಲಾಗದ ಒಂದು ಸುಂದರ ಅನುಭವ.. ನನ್ನ ಲೈಫ್ಟೈಮ್ ಆಸೆ ಕೂಡ ಆಗಿತ್ತು... :D :P











ಜಾಸ್ತಿ  ಹೇಳಿದ್ರೆ ನಿಮ್ಗೂ ಬೇಜಾರು.. ಮಿಸ್ ಮಾಡ್ಕೊಬೇಡಿ.. ಲೈಫ್ ಅಲ್ಲಿ ಒಂದ್ಸಲ ಆದ್ರೂ ಹೀಗೆ ಮೋಡಗಳ ಮಧ್ಯೆ ಸೂರ್ಯೋದಯ ನೋಡ್ಬೆಕಿದ್ರೆ, ಸ್ಕಂದಗಿರಿಗೆ ಹೋಗಿಬನ್ನಿ...


Route Info :
ಬೆಂಗಳೂರು -> ಚಿಕ್ಕಬಳ್ಳಾಪುರ -> ಸ್ಕಂದಗಿರಿ -> ನಂದಿ ಬೆಟ್ಟ -> ಬೆಂಗಳೂರು

map shows from APMC market, Chikkaballapura to Kalawara (Skandagiri start point)


View Larger Map
Once you enter Chikkaballapura city from NH7 (left deviation on NH7), ask for police station or APMC market.near APMC market, look for arch "Papagni matha", take that road. From the above map

A: APMC market
B: Skandagiri


Best time :
As per the guide, December to February

Tuesday, November 23, 2010

GC - quote - 1

ಬ್ಯೂಟಿಫುಲ್ ಹುಡ್ಗಿ ಹಿಂದೆ ಹೋದ್ರು, 
BMTC ಬಸ್ ಮುಂದೆ ಹೋದ್ರು .... 
                ಕೊನೆಗ್ ಸೇರೋದ್ ಆಸ್ಪತ್ರೇನೆ...!!!

Sunday, July 12, 2009

ಹಳೆ ಪಯಣದ ಹೊಸ ಅನುಭವ....

ಪ್ರತಿ ತಿಂಗಳಿನಂತೆ last ಶುಕ್ರವಾರ (10-july-2009) ರಾತ್ರಿ ಧರ್ಮಸ್ಥಳಕ್ಕೆ ಹೊರಟೆ. ಹೊರಡುವ ಮೊದಲು ಯಾವುದೇ ಭಯ, ಅಂಜಿಕೆ, ಆಶ್ಚರ್ಯ ಇರಲಿಲ್ಲ. ಕಳೆದ ಐದು ತಿಂಗಳಿಂದ ಈ ಪ್ರಯಾಣ ನಂಗೆ ರೂಢಿಯಾಗಿತ್ತು. ಹಾಗಾಗಿ ಯಾವುದೇ ಹೊಸ ಅನುಭವದ ನಿರೀಕ್ಷೆ ಇಲ್ಲದೆ, ನನ್ನ ಪಯಣ ಸಾಗಿತು. ಸುಮಾರು ರಾತ್ರಿ ಹತ್ತರ ಸುಮಾರಿಗೆ Majestic ತಲುಪಿದೆ, ಅಲ್ಲಿ ಒಂದ್ ಐದಾರು ಬಸ್ಸು ನೋಡಿ ನೋಡಿ ಸಾಕಾಯ್ತು,, ಕೊನೆಗೆ ಯಾವುದ್ರಲ್ಲೂ ಕಿಟಕಿ(window) ಸೀಟ್ ಸಿಗ್ಲಿಲ್ಲ... :( ;( :( ಬೇರೆ ದಾರಿ ಇಲ್ಲದೆ.. ಸಿಕ್ಕಿದ್ ಕಡೆ ಕೂತ್ಕೊಂಡು ಹೋಗ್ಬೇಕಾಯ್ತು. ಇದ್ರಲ್ಲಿ ಏನು ವಿಶೇಷ ಇರ್ಲಿಲ್ಲ.. ಪ್ರತಿ ಸಲಕ್ಕಿಂತ,, ಈ ಬಸ್ ಡ್ರೈವರ್ ಹೆಚ್ಚು ಪುಣ್ಯ ಮಾಡಿದ್ದ ಪುಣ್ಯಾತ್ಮ , ಹೈವೇ ರೋಡಲ್ಲಿ ಸಾಮಾನ್ಯಕ್ಕಿಂತ ನಿಧಾನವಾಗಿ ಗಾಡಿ ಓಡಿಸ್ತಿದ್ದ... ಇದೆ reason ಬೆಳಗೆ 6:30 ಗೆ ಧರ್ಮಸ್ಥಳ reach ಆದೆ.

ಧರ್ಮಸ್ಥಳದಲ್ಲಿ ಇಳಿಯುತ್ತಿದ್ದಂತೆ, ಮಳೆ!!!!!!!!!!! ಕಳೆದ ನಾಲ್ಕು ತಿಂಗಳಲ್ಲಿ ಅಲ್ಲಿ ಇದು ಮೊದಲನೇ ಸಲ ನೋಡ್ತಿದ್ದೆ ಮಳೆಯನ್ನ. ಮಳೆಯಲ್ಲಿ ಏನು ವಿಶೇಷ ಅಂತೀರಾ...??? ಬರಿ ಮಳೆಯಲ್ಲಿ ಏನು ವಿಶೇಷ ಇಲ್ಲ ಕಣ್ರೀ... ಆದರೆ ಇಲ್ಲಿನ ಮಳೆಯಲ್ಲಿ ವಿಶೇಷ, sooooperrrr, masthu.... maja.... ಇತ್ತು. ಮಳೆ ಬಂದಿದೆ/ಬರ್ತಾ ಇದೆ, ನೇತ್ರಾವತಿ (ಧರ್ಮಸ್ಥಳದಲ್ಲಿ ಹರಿಯುವ ನದಿ)ಯ, speedu, ಆವೇಶ ಹೇಗಿರುತ್ತೋ, ಮತ್ತೆ ಮಳೆಯಲ್ಲಿ ಒಬ್ಬನೇ ಹೇಗೆ ಸ್ನಾನಕ್ಕೆ ಹೋಗೋದು, ಏನಾದ್ರು ಹೆಚ್ಚ್ಚು-ಕಡಿಮೆ ಆದ್ರೆ??? :( ;( :( ಅನ್ನೋ ಭಯ ಶುರು ಆಯ್ತು . ಆ ಭಯದಲ್ಲೇ ನೇತ್ರಾವತಿ ಕಡೆ ನಡೆದೆ. ಹೊರಡುವ ಮುಂಚೆ ಸ್ವಲ್ಪ ready ಆಗಿದ್ದೆ, ಮನೆಯಿಂದ ಮಳೆ ಇರ್ಬಹುದು, ಜೊತೆ ಇರ್ಲಿ ತಗೊಂಡೋಗು ಅಂತ ಜೆರ್ಕಿನ್ (ಮಳೆ ಇಂದ ನನ್ನ ನಾನು save ಮಾಡ್ಕೊಳ್ಳೋಕೆ) ಕೊಟ್ಟಿದ್ರು!!! :) :). ಅದನ್ನು ಹಾಕ್ಕೊಂಡು ತಲೆ/ಮೈ ನೆನೆಯದಂತೆ cover ಮಾಡ್ಕೊಂಡು ಹೊರಟೆ. ನನ್ನ ಅನಿಸಿಕೆಯಲ್ಲಿ ಆ ತರದ ಮಳೆ ಬೇರೆ ಕಡೆ ನಾನು ಅದುವರೆಗೂ ನೋಡಿರ್ಲಿಲ್ಲ. ಸ್ವಲ್ಪ ಹೊತ್ತು ಜೋರಾಗಿ ಬಂದ್ರೆ, ಸ್ವಲ್ಪ ಹೊತ್ತು ಏನು ಇಲ್ಲ. ಹೀಗಿರುವಾಗ ಐದು ನಿಮಿಷದ walking ಆದ್ಮೇಲೆ, ಜೆರ್ಕಿನ್ ನನ್ನ bag ನ ಮಾತ್ರ cover ಮಾಡಿತ್ತು!!!!!!!!. ಹಾಗೆ, ನೆನೆದು ನೆನೆಯದಂತೆ, ನೆನೆಯದಂತೆ ನೆನೆದು, ಮುಂದೆ ಹೋಗಿ ಹೋಗಿ ನೇತ್ರಾವತಿ ಸೇರ್ಕೊಂಡೆ. ಅಲ್ಲಿ ನೋಡಿದ್ರೆ, ಯಪ್ಪಾ,,, ಯಪ್ಪಾ... ಏನು ಅರ್ಭಟ, ಏನು ರಭಸ. ಸರಿ ಏನಾದ್ರು ಇರ್ಲಿ ನನ್ ಕೆಲಸ ಮುಗಿಸ್ಕೊಂಡು ನಾನು ಹೋದ್ರೆ ಸಾಕು ಅಂತ ನೀರಿಗೆ ಇಳಿದೆ. ಆಗ್ಲೇ ಗೊತ್ತಾಗಿದ್ದು ನಂಗೆ, ಜನ ಹೇಗೆ ಹರಿಯೋ ನೀರಲ್ಲಿ ಕೊಚ್ಕೊಂಡು ಹೋಗ್ತಾರೆ ಅಂತ..!!!???? ಇಷ್ಟು ದಿನದ ನನ್ನ ಆ ನದಿಯ ಸ್ನಾನದಲ್ಲಿ silentaada ಗಾಂಧಿ ತಾತನ್ನ ಮಾತ್ರ ನೋಡಿದ್ದೆ ಆದ್ರೆ ಮೊನ್ನೆ ಸ್ವಲ್ಪ rise ಆಗಿದ್ದ ಸುಭಾಷಚಂದ್ರ ಬೋಸ್ ನೋಡಿ, ಸಮಾಧಾನ ಮಾಡ್ಕೊಂಡು ನಾನು ಜಾಸ್ತಿ rise ಆಗದೆ ಅಲ್ಲೇ ಅಂಚಲ್ಲಿ ಕೂತು ಸ್ನಾನ ಮಾಡ್ಕೊಂಡು ಬಂದ್ಬಿಟ್ಟೆ. ಇದು ಮುಗಿದ್ ಮೇಲೆ ಹೆಚ್ಚೇನು ವಿಷ್ಯ ಇರ್ಲಿಲ್ಲ,, ಹಾಗೆ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡ್ಕೊಂಡು, ಮತ್ತೆ ಕುಕ್ಕೆ ಕಡೆಗೆ ಸಾಗ್ತು ನನ್ ಪಯಣ.


ಕುಕ್ಕೆಗೆ ಹೋಗ್ತಾ ದಾರಿಲಿ ಆ ಕಡೆ/ಈ ಕಡೆ ದೂರದಲ್ಲಿ ಬೆಟ್ಟದ ಮೇಲೆ/ಬೆಟ್ಟದ ಹತ್ತಿರ ಮೋಡಗಳು ನಡೆದಾಡುತ್ತಿದ್ದಂತೆ ಕಂಡಿತು, ಇಷ್ಟು ನೋಡ್ತಿದ್ದಂಗೆ ನಮ್ close frend ನಿದ್ರಾದೇವಿ ನಮ್ಮನ್ನ attack ಮಾಡ್ಬಿತ್ಳು. ಮತ್ತೆ ಎಚ್ಚರ ಅದಾಗ ಕುಕ್ಕೆ ಬಸ್ಟಾಪ್ ಅಲ್ಲಿ ಇದ್ದೆ. ಸರಿ ಹಾಗೆ ತೇಲ್ತಿದ್ದ ಮೋಡಗಳ್ನ ನೋಡ್ಕೊಂಡು ದೇವಸ್ಥಾನಕ್ಕೆ ಹೊರಟೆ, ದರ್ಶನ ಆಯ್ತು. ಮತ್ತೆ ಊರ್ ಕಡೆ ಬರೋಕೆ ಬಸ್ ಹತ್ಕೊಂಡು ಕೂತ್ಬಿಟ್ಟೆ. ಆದ್ರೆ ಈ ಸಲ ಕಿಟಕಿ ಸೀಟ್ ನಂಗೆ miss ಆಗ್ಲಿಲ್ಲ... ಹ್ಹ ಹ ಹ ಹ.... ಧರ್ಮಸ್ಥಳದಷ್ಟು ಇಲ್ದಿದ್ರೂ ಒಂದ್ ಚೂರು ಇಲ್ಲಿ ಕಣ್ಣ-ಮುಚ್ಚಾಲೆ ಅಡ್ತಿತ್ತು ಛತ್ರಿ ಮಳೆ... :) ;) :). ಬರ್ತಾ ದಾರಿಲಿ ಗುಂಡ್ಯದ ಹತ್ರ ಮೊದ್ಲು ಹೇಗಿತ್ತೋ ಹಾಗೆ ಇತ್ತು ಪರಿಸ್ಥಿತಿ (ಜೋರು ಮಳೆ). ಮತ್ತೆ ಶಿರಾಡಿ ಮೇಲೆ ನಮ್ಮ ಪಯಣ ಸಕಲೇಶಪುರದ ಕಡೆಗೆ. ಅಬ್ಬಬ್ಬಾ!!!!! ಅತಿ ರೋಚಕ, ರೋಮಾಂಚಕ, ಮೈ ರೋಮಗಳು ನಿಲ್ಲುವ "ಅನುಭವ" . ನನಗೆ ಸಾಮಾನ್ಯಕ್ಕಿಂತ ಅರ್ಧ ಗಂಟೆ ಮುಂಚೆ ಸಕಲೇಶಪುರ ತಲುಪಿದಂತೆ ಅನಿಸ್ತು. ಆ level ಅಲ್ಲಿ ಡ್ರೈವರ್ ಬಸ್ ಹೋಡಿಸ್ತಿದ್ದ.... ಹ್ಹ ಹ ಹ... ಹೇ ಹೇ ಹೇ ಹೇ.... ಗುಂಡ್ಯ ದಿಂದ ಬಲಕ್ಕೆ ತಿರುಗಿ ಬಸ್ accelerator rise ಮಾಡ್ದೋನು, ಅಲ್ಲಿ ಇಲ್ಲಿ ಎಲ್ಲೋ ಒಂದೊಂದು ಕಡೆ ಕಡ್ಮೆ ಮಾಡ್ತಿದ್ದ. ಅಲ್ಲೇ ಆ ರೋಡಲ್ಲಿ, ಶಿರಡಿ ಘಟ್ಟದ ಕಿತ್ತೋದ ರೋಡಲ್ಲಿ, make-up ಮಾಡ್ಕೊಂಡು ಮೆತ್ತಗೆ ಕ್ಯಾಟ್-ವಾಕ್ ಹೋಗೋತರ ಹೋಗ್ತಿದ್ದ ಲಾರಿ/ಗ್ಯಾಸ್ ಟ್ಯಾಂಕರ್.. side ಹೊಡ್ಯೋವಾಗ ಕೆಲವು ಕಡೆ ಸ್ಪೀಡ್ ಸ್ವಲ್ಪ ಕಡ್ಮೆ ಆಗಿದ್ದು ಅಷ್ಟೇ. ಇನ್ನು ಕೆಲವು ಕಡೆ.. ಅದೇ speedu ರಸ್ತೆಯ ಅಂಚು...!!!!!!!!! (ಹೀಗೆ ಒಂದ್ ಏಳೆಂಟು ಸಲ ಆಯ್ತು, ಆ ಟೈಮ್ ಅಲ್ಲಿ ಒಂದೆರಡು ಸಲ ನನ್ ಜೀವ ನನ್ ಕೈಗೆ ಬಂದಿತ್ತು). ಉಸ್ಸ್ಸ್.... ಹಾಗೆ ಹೋಗ್ತಿತ್ತು ಬಸ್ಸ್ಸು... ಅಲ್ಲೇ ಹರಿತಿದ್ದ ನದಿ ಮೇಲೆ ಮೋಡಗಳ ಪಯಣ ಕಾಣ್ತಿತ್ತು.. "ನಾನು ಆ ಮೋಡಗಳಲ್ಲಿ ಕೂತು ತೇಲ್ತಿದ್ರೆ ಹೇಗಿರುತ್ತೆ" ಅಂತ ಕನ್ಸು ಕಾಣ್ತಾ ಕೂತಿದ್ದೆ. ಹರಿತಿದ್ದ ನದಿಯ ಹಾಲ್ನೊರೆಯೇ ಈ ಮೋಡಗಳ್ನ ready ಮಾಡ್ತಿದ್ದಂಗೆ ನಂಗೆ ಅನಿಸ್ತು. ನೀರು ಅಷ್ಟು ರಭಸದಲ್ಲಿ ಮುಂದೆ ಸಾಗ್ತಿತ್ತು... ಅಲ್ಲಲಿ,, ಎಲ್ಲಿ ಕೆಳಗೆ ಬೀಳ್ಬೇಕೋ, ಎಲ್ಲಿ ಯಾರ್ನಾದ್ರೂ meet ಆಗ್ಬೇಕೋ ಅಲ್ಲಲ್ಲಿ ಈ ಥರ ಹಾಲ್ನೊರೆ ಕಾಣ್ತಿತ್ತು... ಅಲ್ಲಿ ನನ್ನ ನೆಚ್ಚಿನ ಮೋಡಗಳು.... :) ;) :) ಅರ್ಧ ಗಂಟೆಗಳ ಕಾಲ ಆ ರೋಡಲ್ಲಿ ಬಸ್ಸು ಹೋಗ್ತಿದ್ದಂಗೆ, ನನ್ನ ಕನಸು ನನಗೆ ನಿಜವಾಗಿ ಕಾಣ್ತಿತ್ತು.... ಆ ಆ ಆ ತೇಲುವ ಮೋಡಗಳ್ನ ಗುದ್ದಿ, ಒಡೆದು ನುಗ್ಗಿ ಹೋಗ್ತಿತ್ತು ಬಸ್ಸು... ಆಗ ಆ ಮೋಡಗಳ್ನ ನಾನು ನನ್ ಕೈಯಲ್ಲಿ ಹಿಡಿದು ಹೋಗ್ತಿದ್ದೀನಿ ಅಂತ ಯಾರೋ ಒಳಗಿಂದ ಹೇಳ್ತಿದ್ರು. ಅದೇ feelingಅಲ್ಲಿ ನೋಡಿದ್ರೆ... ಆ ಬೆಳ್ಳಿ ಮೋಡದಲ್ಲಿ, ಸುಮಾರು ಕಪ್ಪು ಇರುವ ಮೋಡದ ರಾಜನಂತೆ ತೇಲಾಡಿದಷ್ಟು ಖುಷಿ ನಂಗೆ.... ಆ ಮೋಡಗಳಲ್ಲಿನ ಪಯಣ, ಅಲ್ಲಿಂದ ಕೆಳಗೆ ನೋಡಿದರೆ ಆಟಿಕೆಗಳಂತೆ ಕಾಣ್ತಿದ್ದ ಝರಿ-ತೊರೆ, ನದಿ, ಬೆಟ್ಟ, ಗುಡ್ಡ, ಮರ, ಮನೆ, ಮನುಷ್ಯ.... ಆ ಖುಷಿ ನನ್ lifeಅಲ್ಲಿ ಮರ್ಯೋಕೆ ಅಷ್ಟು ಸುಲಭವಾಗಿ ಆಗೋದಿಲ್ಲ ಅನ್ಸುತ್ತೆ... ಮತ್ತೊಮ್ಮೆ ಈ ಥರದ ಅನುಭವ ಯಾವಾಗ ಆಗುತ್ತೋ ನಂಗೆ ಗೊತ್ತಿಲ್ಲ... ಆದ್ರೆ ಹಾಗೆ ಸುಮಾರು ಮುಕ್ಕಾಲು-ಒಂದು ಗಂಟೆ ಮೋಡಗಳಲ್ಲಿ ತೇಲಾಡ್ತಾ ತೇಲಾಡ್ತಾ ಇದ್ದೆ. ಈ ಒಂದು ಹೊಸ ಅನುಭವದಲ್ಲಿ, ಹೊಸ ಹೊಸ ಖುಷಿಯಲ್ಲಿ, ಕನಸು ನನಸಾದ ಸಂಭ್ರಮದಲ್ಲಿ ರಾತ್ರಿ 8:30 ರ ಸುಮಾರಿಗೆ ಮನೆ ಸೇರ್ದೆ.