ಇನ್ಫರ್ಮೇಶನ್ ಕಲೆಕ್ಟ್ ಮಾಡಿದ್ ಪ್ರಕಾರ ಸ್ವಲ್ಪ ಬೇಗ ಹೊರ್ಡೋದು ಅಂತ ಮಾತಾಡ್ಕೊಂಡು, ಮಿನಿಮಮ್ ಲಗೇಜ್/ಫುಡ್/ಸ್ನ್ಯಾಕ್ಸ್ ರೆಡೀ ಮಾಡ್ಕೊಂಡು ಗಾಡಿ ಎತ್ತಿದ್ವಿ. ಮೂರು ಜನ ರವಿಯ ಕಾರ್ ನಲ್ಲಿ ಕಾರ್ಪೊರೇಶನ್ ಹತ್ರ ಬರ್ಬೇಕಿತ್ತು, ಮತ್ತೆ ನಾನು ಅಲ್ಲೇ ವೇಟ್ ಮಾಡ್ಬೇಕಿತ್ತು. ಪ್ಲಾನ್ ಹಾಕ್ಕೊಂಡ್ ಥರಾನೆ ಕಾರ್ಪೊರೇಶನ್ ಹತ್ರ ಮೀಟ್ ಆಗಿ, ಶುರು ಆಯ್ತು ನಮ್ಮ ಪಯಣ ಸ್ಕಂದಗಿರಿ ಕಡೆಗೆ (ಟೈಮ್ 11.00PM). ಇಂಟರ್ನ್ಯಾಶನಲ್ ಏರ್ಪೋರ್ಟ್ ರೋಡಲ್ಲಿ.. ಸೊಯ್ಯ್ಯ್ಯ್ ಅಂತ ಹೋಗ್ತಿರ್ಬೇಕಿದ್ರೆ.. ಜ್ಞಾಪಕ ಆಯ್ತು ಗಾಡಿಲಿ ಪೆಟ್ರೋಲ್ ಕಡ್ಮೆ ಇದೆ ಅಂತ. ಹ್ಹ ಹ ಹ.. ಏರ್ಪೋರ್ಟ್ ಪಾಸ್ ಆಗಿ, ಮುಂದೆ ಹೋಗಿದ್ವಿ, ಅಲ್ಲಿ ರೀಚ್ ಆಗೋ ಹೊತ್ಗೆ ಎಲ್ಲ ಪೆಟ್ರೋಲ್ ಬಂಕ್ ಕ್ಲೋಸ್ ಆಗಿದ್ರಿಂದ.. ಮತ್ತೆ 16KM ವಾಪಸ್ ಬರ್ಬೇಕಾಯ್ತು, ಏರ್ಪೋರ್ಟ್ ಕಡೆಗೆ , ಯಲಹಂಕ ಹತ್ರ. ಕೈಯಲ್ಲಿ google mapsದು ಪ್ರಿಂಟ್, GPS ಇಟ್ಕೊಂಡು ಮುಂದೆ ಹೋದ್ವಿ, ಚಿಕ್ಕಬಳ್ಳಾಪುರ ರೀಚ್ ಆದ್ಮೇಲೆ ಸ್ವಲ್ಪ ರಿಸ್ಕ್ ಆಯ್ತು, maps, GPS ಹೆಲ್ಪ್ ಮಾಡ್ಲಿಲ್ಲ, ಅಲ್ಲೇ ಇದ್ದ ಯಾರ್ಯಾರ್ನೊ ಕೇಳ್ಕೊಂಡು ಹೋಗಿದ್ದಾಯ್ತು :(. ಅಲ್ಲಿ ಒಂದ್ ಕಡೆ ಮಿಸ್ ಆಗಿ ರಾಂಗ್ ಟರ್ನ್ ತಗೊಂಡ್ ಮತ್ತೆ ವಾಪಸ್ ಚಿಕ್ಕಬಳ್ಳಾಪುರ ಊರೊಳಗೆ ಬಂದು.. ವಾಪಸ್ ನಂದೀಬೆಟ್ಟದ ಕಡೆ ಇಂದ ಹೋಗೋಣ ಅಂತ ಡಿಸೈಡ್ ಮಾಡ್ಕೋಂಡ್ವಿ. ಆದ್ರೆ ಒಂದು ಲಾಸ್ಟ್ ಟ್ರೈ ಇರ್ಲಿ ಅಂತ.. ಮತ್ತೊಂದ್ ಸಲ ಅಲ್ಲೇ ಇದ್ದ ಪೋಲೀಸ್ ನ ಕೇಳಿ ಮುಂದೆ ಹೋದ್ವಿ... hurray.. ದಾರಿ ಸಿಕ್ತು.... :) ha ha... n we reached... :) :D
ಅಲ್ಲಿ ಹೋಗ್ತಿದ್ದಂಗೆ ಗೈಡ್ ಗಳ ಹಾವಳಿ (800Rs ಅಂತೆ :@ grrrrrrrrrr), ನಾವು ಯಾವ್ದೇ ಗೈಡ್ ಬೇಡ ಅಂತ ಮುಂದೆ ಹೋದ್ವಿ. ಗಾಡಿ ಪಾರ್ಕ್ ಮಾಡಿ (parking charge paid 50Rs for car [20Rs for bike]), ಟ್ರೆಕಿಂಗ್ ಶುರು ಮಾಡ್ಕೊಂಡ್ವಿ. ಹ್ಹ ಹಾಹಾ.. ಅಲ್ಲಿದೆ ಟ್ವಿಸ್ಟ್.. ಸ್ವಲ್ಪ ಮುಂದೆ ಹೋಗಿ ದಾರಿ ಸಿಕ್ದೇ ತಲೆ ಕೆಡ್ತು, ಇದು ಗೊತ್ತಿಲ್ಡ ಒಬ್ಬ ತಾತ (ಗೈಡ್) ನಮ್ಹಿಂದೆ ಬರ್ತಿದ್ರು, ಆವ್ರು 400Rs ಇಂದ ಶುರು ಮಾಡ್ಕೊಂಡು, ಮಾತಾಡ್ತಿದ್ರು. ಕೊನೆಗೆ ದಾರಿ ಸಿಕ್ದೇ ಇದ್ದಾಗ, ಇನ್ನೊಂದು ಗ್ರೂಪ್ ಜೊತೆ ಸೇರಿ ಒಟ್ಟು 300Rs ಕೊಡೋದು ಅಂತ ಬಾರ್ಗೇನ್ ಮಾಡಿ ಜೈ ಅಂದ್ವಿ. ತಾತನ್ಗೆ 78 ವರ್ಷಗಳು..., ಮತ್ತೆ ಆವ್ರು ನಮ್ಮ ಗೈಡ್.. ;) . ನಾನು ಮತ್ತೆ ರವಿ ಫೈನ್, ಆರಾಮಾಗಿ ಹತ್ಕೊಂಡು ಹೋದ್ವಿ, ಉಳಿದ ಇಬ್ರೂ ಸ್ವಲ್ಪ ಹಿಂಸೆ ಪಡ್ತಿದ್ರು, ನಂಗಿಂತ ಫಾಸ್ಟಾಗಿ ನಮ್ ಗೈಡ್ ಮುಂದೆ ಹೋಗ್ತಿದ್ರು. ಎರಡು ಒರೆ ಮೂರು ಘಂಟೆಗಳ ಟ್ರೆಕಿಂಗ್ ಆದ್ಮೇಲೆ peak ಸೇರ್ಕೊಂಡ್ವಿ. maggi ತಿನ್ಕೊಂಡು, ಕ್ಯಾಂಪ್ ಫೈಯರ್ (camp fire) ಮುಂದೆ timepass ಮಾಡ್ತಿರ್ಬೇಕಿದ್ರೆ.. sunrise ಆಗೋಕೆ ಶುರು ಆಯ್ತು... sunrise ಆಗೋ ಟೈಮಲ್ಲಿ.. ಜಸ್ಟ್ ವೋವ್ವವ್ವ್ವ್ವ್ (just wowwwwwwww) ... ಅಷ್ಟೇ.. ಹಾಲಿನ ಸಮುದ್ರದ ತರಹ ಮೋಡಗಳು... ಕೆಳಗೆ ತೇಲ್ತಿದ್ರೆ, ದೂರದ ದಿಗಂತದಂಚಲ್ಲಿ ಸೂರ್ಯೋದಯ.. :) ಬೆಳ್ಳಗಿನ ಮೋಡಗಳ ಬಣ್ಣ ಹೊಂಬಣ್ಣಕ್ಕೆ ತಿರುಗ್ತಾ ಇತ್ತು ಸೂರ್ಯ ಬರ್ತಿದ್ದಂಗೆ. ತನ್ನ ಮನೆಯ ಬಾಗಿಲಿಗೆ ಚಿನ್ನ ಹಾಕಿರೋ ಹಾಗೆ ಕಾಣ್ತಿದ್ದ ಪೂರ್ವ ದಿಕ್ಕು.. ಆಹಾ... Soooooper... :) ನಂಗಂತೂ ಮರೆಯಲಾಗದ ಒಂದು ಸುಂದರ ಅನುಭವ.. ನನ್ನ ಲೈಫ್ಟೈಮ್ ಆಸೆ ಕೂಡ ಆಗಿತ್ತು... :D :P








ಜಾಸ್ತಿ ಹೇಳಿದ್ರೆ ನಿಮ್ಗೂ ಬೇಜಾರು.. ಮಿಸ್ ಮಾಡ್ಕೊಬೇಡಿ.. ಲೈಫ್ ಅಲ್ಲಿ ಒಂದ್ಸಲ ಆದ್ರೂ ಹೀಗೆ ಮೋಡಗಳ ಮಧ್ಯೆ ಸೂರ್ಯೋದಯ ನೋಡ್ಬೆಕಿದ್ರೆ, ಸ್ಕಂದಗಿರಿಗೆ ಹೋಗಿಬನ್ನಿ...
Route Info :
ಬೆಂಗಳೂರು -> ಚಿಕ್ಕಬಳ್ಳಾಪುರ -> ಸ್ಕಂದಗಿರಿ -> ನಂದಿ ಬೆಟ್ಟ -> ಬೆಂಗಳೂರು
map shows from APMC market, Chikkaballapura to Kalawara (Skandagiri start point)
View Larger Map
Once you enter Chikkaballapura city from NH7 (left deviation on NH7), ask for police station or APMC market.near APMC market, look for arch "Papagni matha", take that road. From the above map
A: APMC market
B: Skandagiri
Best time :
As per the guide, December to February