Custom Search

Saturday, September 1, 2012

ಐದು ವರ್ಷಗಳ ಹಿಂದೆ....


ಆ ದಿನ 10 ಘಂಟೆಗೆ ನಾನು ಇಂಟರ್ವ್ಯೂ ಇದ್ದ ಜಾಗಕ್ಕೆ ಹೋಗಬೇಕಿತ್ತು, ಸರಿಯಾದ ಟೈಮ್ ಗೆ ಮನಯಿಂದ ಹೊರಟ್ರು ಕೂಡ ಆಗ್ಲಿಲ್ಲ. ಹಿಂದಿನ ದಿನ, careernet ಇಂದ ಕಾಲ್ ಬಂದಿತ್ತು, ಇಂಟರ್ವ್ಯೂ ಕೂಡ ಫಿಕ್ಸ್ ಆಗಿತ್ತು, ಕಾಲ್ ಮಾಡಿದ ಹುಡುಗ ತುಂಬ ಚೆನ್ನಾಗಿ ಮಾತಾಡ್ತಾ ಇದ್ದ, ಅದನ್ನು ಕೇಳಿ ಖುಷಿ ಆಗ್ತಿತ್ತು. ಆ ಮಾತುಗಳನ್ನ ಕೇಳ್ತಿದ್ರೆ ಎಲ್ಲೋ ಅಂದು ಕಡೆ ಆಶಾವಾದ, ಕೊನೆಗೆ ಈ ಕಂಪನಿ ಅಲ್ಲಿ ಆದರು ನಾನು ಸೆಲೆಕ್ಟ್ ಆಗ್ತೀನಿ ಅಂತ. ನನ್ನ ಕೆಲವು ರೂಲ್ಸ್/ಅದು ಇದು... ನಂಗೆ ಸರಿ ಅನ್ಸಿದ್ರೂ ಬೇರೆ ಅವ್ರಿಗೆ ಸರಿ ಅನ್ನಿಸದ ನಿಯಮಗಳು... ಇದ್ರಿಂದ ನನ್ನ ಕ್ಲಾಸ್ ಅಲ್ಲಿ ಇದ್ದ ಎಂತ-ಎಂತ ಪುಣ್ಯಾತ್ಮರು ಕೂಡ ಯಾವ್ದೋ ಒಂದು ಕಂಪನಿ ಅಲ್ಲಿ ಕೆಲ್ಸ ಗಿಟ್ಟಿಸಿಕೊಂಡಿದ್ರು. ನಂಗೆ ಆ talent ಇರ್ಲಿಲ್ವೋ, ಇದ್ರೂ ಕೂಡ ಅದನ್ನ ಕಂಡು ಹಿಡಿಯೋ ಯೋಗ್ಯತೆ ಯಾರ್ಗೂ ಇರ್ಲಿಲ್ವೋ ಆ ದೇವರಿಗೆ ಗೊತ್ತು.

ಕಾಲೇಜ್ ಅಲ್ಲಿ ಕೆಲಸದ ವಿಷ್ಯ ಬಂದಾಗ, ಕಾಪಿ ಮಾಡಬಾರದು ಅನ್ಕೊಂಡಿದ್ದೆ, ಆದ್ರೆ ಕಾಪಿ ಮಾಡಿದ್ಮೇಲೆ ಒಂದು written test ಕ್ಲಿಯರ್ ಆಯ್ತು. ಫ್ರೆಂಡ್ಸ್ ಎಲ್ಲ ಹೇಳ್ತಿದ್ರು, ನೆಟ್ಟಗೆ ಡ್ರೆಸ್ ಮಾಡ್ಕೊಂಡು ಹೋಗು, first impression is best impression ಏನೇನೋ ಹೇಳ್ತಿದ್ರು. ಇದ್ದ ಕ್ಷಣದಲ್ಲೇ ಎಲ್ಲ ರೆಡಿ ಆಗಬೇಕು ಅಂದ್ರೆ ಹೇಗೆ ಸಾಧ್ಯ, ಆಗ್ಲಿಲ್ಲ. ಹೇಗಿದ್ನೋ ಹಾಗೆ ಹೋದೆ. ಅಲ್ಲಿಯವರೆಗೂ ಒಂದು written test ಆಗಿರ್ಲಿಲ್ಲ, ಹಾಗಾಗಿ ಒಂದು ಕಡೆ ಭಯ, ಮತ್ತೊಂದು ಕಡೆ ಖುಷಿ. ಒಳಗೆ ಹೋದೆ. ನನ್ನ ಇಂಟರ್ವ್ಯೂ ಮಾಡೋಕೆ ಇಬ್ರು ಕೂತಿದ್ರು, ಒಳ್ಳೇ personality, well dressed, ನಾನು ಇಲಿ ಮರಿ ತರ ಇದ್ದೆ. ಕಂಪನಿ ಯಾವ್ದು ಅಂತ ಕೇಳ್ತೀರಾ??? ಬೇಡ ಬಿಡಿ. ಒಂದು ದೊಡ್ಡ ಫೈನಾನ್ಸ್ ಮ್ಯಾನೇಜ್ಮೆಂಟ್ ಕಂಪನಿ ಅಂತ ಮಾತ್ರ ಹೇಳಬಲ್ಲೆ. ಅವ್ರು ಏನ್ ಕೇಳಿದ್ರು, ನಾ ಏನ್ ಹೇಳ್ದೆ ಯಾವುದು ಜ್ಞಾಪಕ ಇಲ್ಲಾ. ಆದ್ರೆ ಇಂಟರ್ವ್ಯೂ ಮುಗಿದ್ಮೇಲೆ ಇಬ್ರಲ್ಲಿ ಒಬ್ಬರು ಬಂದು, ನನ್ನ ಭುಜದ ಮೇಲೆ ಕೈ ಹಾಕಿ "you are a funny guy, i liked you, you are selected for next round, wait outside" ಅಂತ ಹೇಳಿದಾಗ. ಆಹ್!!!! ಎಂತ ಖುಷಿ. ಕಾಯ್ತಾ ಕೂತಿದ್ದೆ, ನನ್ನದು first round ಮಾತ್ರ ಆಗಿತ್ತು, ನನ್ನ ಬೇರೆ ಕೆಲವು ಫ್ರೆಂಡ್ಸ್ ದು 2nd and 3rd round ಕೂಡ ಆಗಿತ್ತು. ಎಲ್ಲ ಕಾಯ್ತಾ ಇದ್ವಿ, ಯಾರೊಬ್ರು ಕೂಡ ಸೆಲೆಕ್ಟ್ ಆಗ್ಲಿಲ್ಲ. ಕೊನೆಗೆ ನನ್ನ ಭುಜದ ಮೇಲೆ ಕೈ ಹಾಕಿ, ಆ ಮಾತು ಹೇಳಿದ ಆ ವ್ಯಕ್ತಿ ನನ್ನ ಹತ್ರ ಬಂದು, "sorry buddy, due to some resons interviews stopped, i can't help" ಅಂತ ಹೇಳಿ ಹೋಗ್ಬಿಟ್ರು. ಆಕಾಶ ತಲೆಮೇಲೆ ಬಿದ್ದಂಗೆ ಆಯ್ತು, ಆದ್ರೆ ಬೇರೆ ದಾರಿ ಇಲ್ಲಾ, ಥ್ಯಾಂಕ್ಸ್ ಹೇಳ್ದೆ ಅಷ್ಟೇ. ನಂಗೆ "all the best" ಹೇಳಿ ಅವ್ರು ಹೊರ್ತ್ಬಿಟ್ರು. ಇದು ಆದ್ಮೇಲೆ ಇನ್ನು ಒಂದೆರಡು ಮೂರು ನಾಲ್ಕು ಇಂಟರ್ವ್ಯೂ ಆಯ್ತು, ಯಾವ್ದರಲ್ಲಿ ಕೂಡ ಸೆಲೆಕ್ಟ್ ಆಗ್ಲಿಲ್ಲ. ಒಂದಂತೂ ತುಂಬ ಕೆಟ್ಟ ಅನುಭವ, ಇದ್ದ ಇಬ್ಬರಲ್ಲಿ ಒಬ್ಬನಿಗೆ ಹೊಡೆದು ಬರ್ಬೇಕಿತ್ತು, ಕಂಟ್ರೋಲ್ ಮಾಡ್ಕೊಂಡು ಎದ್ದು ಬಂದೆ.

ಇದೆಲ್ಲ ಹಳೆ ಕಥೆ, ಇಷ್ಟೆಲ್ಲಾ ಕಥೆ ಇದ್ದಿದ್ದರಿಂದ ಆ ಒಂದು ಕರೆ ನಂಗೆ ತುಂಬ ಖುಷಿ ಕೊಡ್ತು, ಇನ್ನು ಎಲ್ಲೋ ಒಂದು ಕಡೆ ಚಾನ್ಸ್ ಇದೇ ಅಂತ ಹೇಳಿದಂಗೆ ಅನ್ನಿಸ್ತು. ಐದು ವರ್ಷಗಳ ಹಿಂದೆ ಇದೇ ದಿನ, ಸೆಪ್ಟೆಂಬರ್ ೦೧ ೨೦೦೭, ಶನಿವಾರ ಬೆಳ್ಗೆ ಎದ್ದು, ರೆಡಿ ಆಗಿ ಹೊರಟೇಬಿಟ್ಟೆ. ಮನೆ ಇಂದ ಮಜೆಸ್ಟಿಕ್, ಮಜೆಸ್ಟಿಕ್ ಇಂದ ನಾಗನಾಥಪುರ ಹೋಗೋದು ಅಂತ ಪ್ಲಾನ್ ಮಾಡಿ, ನಮ್ಮ  BMTC ಯ dialy pass  ತಗೊಂಡು ಹೊರಟೆ. ಮೊದ್ಲೇ ಹೇಳಿದಂತೆ, 10 ಘಂಟೆಗೆ reach ಆಗೋಕೆ ಆಗ್ಲಿಲ್ಲ. ಹೊಸರೋಡ್ ಅಲ್ಲಿ ಇಳ್ಕೊಂಡಾಗ ೧೦.೧೫ ಆಗಿತ್ತು, ಆಟೋ ಹತ್ತೋಕೆ ಹಿಂದು-ಮುಂದು ನೋಡೋ ನಾನು, ಇಲ್ಲದ ಮನಸ್ಸಿನಿಂದ ಅಲ್ಲೇ ಹೋಗ್ತಿದ್ದ ಒಂದು ಆಟೋಗೆ ಕೈ ತೋರಿಸ್ದೆ, minimum ಅಂತ ಹೇಳಿದ ಆಟೋ ಡ್ರೈವರ್ ಜೊತೆ ಚೌಕಾಸಿ ಮಾಡಿ ೧೦ ರೂಪಾಯಿಗೆ ಒಪ್ಪಿಸಿದ್ದು ಆಯ್ತು. ಅದೇನೋ ಗೊತ್ತಿಲ್ಲ್ಲ ಅವನ ಮುಖದಲ್ಲಿ ಒಂದು ವಿಶೇಷ ನಗು ಕಾಣಿಸ್ತು.

ಏನ್ ಸಾರ್, ಇಂಟರ್ವ್ಯೂ?

ಹೌದು...

ಬೆಳ್ಗೆ ಇಂದ ಬೇಜಾನ್ ಹೋಗ್ತಿದಾರೆ ಸಾರ್...

ಒಹ್ ಹೌದ.. ತುಂಬ ಇದಾರ????

ಏನಿದ್ರೆ ಏನು ವಿಶೇಷ ಇಲ್ಲ ಸರ್, ಆಗೋದಿದ್ರೆ ಎಲ್ಲ ಒಳ್ಳೆದಾಗುತ್ತೆ ಹೋಗಿ ಸಾರ್....

ಹ. ಅದು ನಿಜ ಅನ್ನಿ...

ಒಳ್ಳೇದಾಗ್ಲಿ ಸಾರ್, ಇಂಟರ್ವ್ಯೂ ಚೆನ್ನಾಗಿ ಮಾಡಿ....

ಥ್ಯಾಂಕ್ಸ್ ಸರ್....

ಆಟೋ ಇಳ್ಕೊಂಡು ಸ್ವಲ್ಪ ಮುಂದೆ ಹೋಗಿ ನೋಡಿದ್ರೆ, ಇದೇನಾ ಆಫೀಸ್ ಅಂತ ಅನಿಸ್ತು. ಅಲ್ಲೇ ಗೇಟ್ ಹತ್ರ ನಿಂತಿದ್ದ ಸೆಕ್ಯೂರಿಟಿ, ಕಾಲ್ ಲೆಟರ್ ಚೆಕ್ ಮಾಡಿದ್ರು, ಮತ್ತೆ ಅಲ್ಲಿ ಕೂಡ ಒಂದು ನಗೆ. ಇವರನ್ನೆಲ್ಲ ಮರೆಯೋ ಹಾಗಿಲ್ಲ. ಅದ್ಕೆ ಎಲ್ಲರ ಬಗ್ಗೆ ಸ್ವಲ್ಪ ಸ್ವಲ್ಪ ಹೇಳ್ತಾ ಇದ್ದೇನಿ. ಈ ಎಲ್ಲರಿಗೂ ಧನ್ಯವಾದಗಳು.

ಒಳಗೆ ಹೋಗ್ತಿದ್ದಂಗೆ, ಕೈ-ಕಾಲು ನಡುಕ ಶುರು ಆಯ್ತು, ಎಷ್ಟೊಂದು ಜನ, ಇಷ್ಟು ಜನರಲ್ಲಿ ನಾನು ಒಬ್ಬ. ನಂಗೆ ಇಲ್ಲಿ ಖಂಡಿತ ಕೆಲ್ಸ ಸಿಗುತ್ತಾ? ಅಲ್ಲಿ ಬಂದಿದ್ದ ಎಲ್ಲರ ಜೊತೆಗೂ ಮತ್ತೊಬ್ರು ಇದ್ರು. ಅಲ್ಲಿಗೆ ಬರೋವಾಗ್ಲೆ ಒಟ್ಟಿಗೆ ಬಂದಿದ್ರಾ, ಅಲ್ಲಿ ಬಂದು ಮೀಟ್ ಆಗಿದ್ದ ನಂಗೆ ಗೊತ್ತಿಲ್ಲ. ನಾನು ಒಬ್ನೇ, ಮಾತು ಕಡಿಮೆ, ಹಾಗಾಗಿ ಒಂದು ಕಡೆ ಸುಮ್ನೆ ಕೂತಿದ್ದೆ. ಒಳಗೆ ಹೋಗಿ, entry ಮಾಡ್ಸಿ, ಹೀಗಿ ಕೂತಿರ್ಬೇಕಿದ್ರೆ, ನನ್ನ ಕ್ಲಾಸ್ ನ ಮತ್ತೊಬ್ಬ ಅಲ್ಲಿ ಕಾಣಿಸ್ದ. ಅವನ ಲೆವೆಲ್ ಬೇರೆ, ನನ್ನ ಲೆವೆಲ್ ಬೇರೆ. ಹಾಗಾಗಿ hi-bye ಅಲ್ಲಿ ನಮ್ಮ ಭೇಟಿ ಮುಗಿತು, ಮತ್ತೆ ಒಬ್ಬನೇ. ಅಲ್ಲಿ ಬಂದಿದ್ದ ಸುಮಾರು ಹುಡುಗರೆಲ್ಲ ನೀಟಾಗಿ ಡ್ರೆಸ್ ಮಾಡ್ಕೊಂಡು, ಟೈ ಹಾಕ್ಕೊಂಡು ಬಂದಿದ್ರು. ಆದ್ರೆ ನಾನು, ಸುಮಾರಾಗಿದ್ದ ಒಂದು ಶರ್ಟ್, ಪ್ಯಾಂಟ್ ಮ್ಯಾಚ್ ಅಗ್ತಿತ್ತೋ ಇಲ್ವೋ ಗೊತ್ತಿಲ್ಲ, ಶರ್ಟ್ ಮೇಲೆ ಸ್ವೆಟರ್, ಹಳೆಯ ಸ್ಪೋರ್ಟ್ ಶೂ, ತಲೆ ಬಾಚೋಕೆ ಕೂದಲು ಇರ್ಲಿಲ್ಲ, ಆಗ ಸ್ವಲ್ಪ ದಿನದ ಹಿಂದೆ ಯಾವ್ದೋ ದೇವರಿಗೆ ಹೋಗಿ ತಲೆ (ಮುಡಿ) ಕೊಟ್ಟು ಬಂದಿದ್ದೆ. ಇಷ್ಟೆಲ್ಲಾ ಸುಂದರ ಲಕ್ಷಣಗಳು ನನ್ನಲ್ಲಿ ಇರ್ಬೇಕಿದ್ರೆ, "first impression is the best impression" ಆಗೋಕೆ ಚಾನ್ಸ್ ಇರಲೇ ಇಲ್ಲ. ಅಷ್ಟೆಲ್ಲ ಜನರನ್ನ ನೋಡಿದ್ಮೇಲೆ ನಂಗೆ ನಂಬಿಕೆ ಹೋಯ್ತು, ಹೆಂಗಿದ್ರು ಬಂದಿದ್ದೀನಿ ಅಲ್ವಾ, ಇಂಟರ್ವ್ಯೂ attend ಮಾಡಿ ಹೋಗೋಣ ಅಂತ ಯೋಚನೆ ಮಾಡಿ, ಅಲ್ಲೇ ಉಳ್ಕೊಂಡೆ. ಸುಮಾರು ೨ ಘಂಟೆ ಹೊತ್ಗೆ, ನನ್ನ ಇಂಟರ್ವ್ಯೂ ಗೆ ಕಾಲ್ ಮಾಡಿದ್ರು. ಹೋಗಿ ಒಳಗೆ ಕೂತ್ಕೊಂಡ್ರೆ, ಮನಸಿನ ಎಲ್ಲೋ ಒಂದು ಮೂಲೇಲಿ ಇವತ್ತು ಎಲ್ಲ ಒಳ್ಳೆದಾಗುತ್ತೆ ಅಂತ ಹೇಳಿದಂತೆ ಆಗ್ತಿತ್ತು. ಮೊದಲೇ ಹೇಳಿದ ಒಂದು ಸುಂದರ ಇಂಟರ್ವ್ಯೂ ಅನುಭವದಂತೆ, ನನ್ನ ಎದುರಿನ ವ್ಯಕ್ತಿ ನೋಡಿದಾಗ ಏನೋ ಒಂತರ ಖುಷಿ. ಇಂಟರ್ವ್ಯೂ ಮುಗಿತು ಮತ್ತದೇ ಗೊಂದಲ. ಇಷ್ಟೊಂದು ಜನ, ಅದರಲ್ಲಿ ನಾನು ಒಬ್ಬ... ಸರಿ ರಿಸಲ್ಟ್ ಗೆ ಕಾಯ್ತಾ ಇದ್ದೆ. ಅಲ್ಲಿ ಇಂಟರ್ವ್ಯೂ ನೋಡ್ಕೊತಿದ್ದ, careernet ನ ಒಬ್ಬ ವ್ಯಕ್ತಿ ಬಂದು ಸ್ವಲ್ಪ ಧೈರ್ಯ ಹೇಳ್ದ, "ಯೋಚನೆ ಮಾಡಬೇಡ ಒಳ್ಳೆದಾಗುತ್ತೆ". ಅದೇ ಸಮಯಕ್ಕೆ ಇನ್ನೊಬ್ಳು ಹುಡುಗಿ, ಅವ್ಳು ಯಾರು ಏನು ಗೊತ್ತಿರ್ಲಿಲ್ಲ. ಸ್ವಲ್ಪ ಮಾತು ಕಥೆ ಆಯ್ತು, ಯಾವ ಕಾಲೇಜ್ ಏನು ಎತ್ತ ಎಲ್ಲ ವಿಚಾರ ವಿನಿಮಯ ಅದ್ಮೇಲೆ ಹೇಳ್ದೆ,

ನಂಗೆ ಇಲ್ಲಿ ಯಾಕೋ ನಂಬಿಕೆ ಇಲ್ಲ, ಎಷ್ಟೊಂದು ಜನ ಇದ್ದಾರೆ. BEL  ಅಲ್ಲಿ ಇನ್ನೊಂದು ಇಂಟರ್ವ್ಯೂ ಇದೆ ಹೋಗ್ಬಿಡ್ತೀನಿ.
(ನಾಗನಾಥಪುರ - BEL , ಸುಮಾರು ೫೦ ಕಿ.ಮೀ.)

ಇಲ್ಲಿಂದ ಅಲ್ಲಿಗೆ ಹೋಗೋದು ಕಷ್ಟ. ಇಲ್ಲೇ ಏನಾಗುತ್ತೋ ನೋಡು. ಆಮೇಲೆ ಇಲ್ಲಿ  ಇಲ್ಲ, ಅಲ್ಲಿ ಇಲ್ಲ ಅನ್ನೋ ಹಾಗೆ ಆಗುತ್ತೆ. ಇಲ್ಲಿ ಹೇಗೂ ಬಂದಿದ್ದು ಆಗಿದೆ, ಇಂಟರ್ವ್ಯೂ ಕೂಡ ಆಯ್ತು. ಸ್ವಲ್ಪ ಕಾದು ನೋಡು. ಎಲ್ಲ ಒಳ್ಳೆದಾಗುತ್ತೆ.

ಕಾದೆ, ಸ್ವಲ್ಪ ಹೊತ್ತು ಕಾದೆ. careernet ನ ಅದೇ ವ್ಯಕ್ತಿ ಮತ್ತೆ ಬಂದು, ಅಲ್ಲಿ ಇನ್ನೊಂದು ರೂಂ ಇದೆ, ಅಲ್ಲಿ ಹೋಗಿ ಮತ್ತೊಂದು ರೌಂಡ್ ಇಂಟರ್ವ್ಯೂ. ಖುಷಿ. ಹೋದೆ, ಅದು HR ಇಂಟರ್ವ್ಯೂ ಆಗಿತ್ತು, ಮತ್ತೆ ಭಯ. ಮೊದಲ್ನೇ ಸಲ HR ಇಂಟರ್ವ್ಯೂ ಗೆ ಹೋಗಿದ್ದು, ಅವ್ರು ಏನೋ ಪ್ರಶ್ನೆಗಳು ಕೇಳಿದ್ರು. ಹೇಳ್ದೆ ಬಂದೆ. ಮತ್ತೆ careernetನ ಅದೇ ವ್ಯಕ್ತಿ,

ನೀವು ಮನೆಗೆ ಹೋಗಬಹುದು, ರಿಸಲ್ಟ್ ಕಾಲ್ ಮಾಡಿ ಹೇಳ್ತೀವಿ.

ಅಂತ ಹೇಳಿದ್ರು. ಹೊರಟೆ ಅಲ್ಲಿಂದ. ಮತ್ತದೇ ಒಂಟಿ ಪಯಣ. ಈ ಸಲ ಆಟೋ ಹತ್ಲಿಲ್ಲ. ಸುಮಾರು ೧-೧.೫ ಕಿ.ಮೀ. ನಡೆದು ಬಂದು, ಬಸ್ ಹತ್ತಿ ಮನೆಗೆ ಹೊರಟೆ. ಅಮ್ಮನ  ಮುಖದಲ್ಲಿ ಏನೋ ಒಂದು ಖುಷಿ, ಏನೋ ಒಂದು ಅಸಮಾಧಾನ ("ಅಯ್ಯೋ!!! ಪಾಪ ಇವತ್ತು ಆಗ್ಲಿಲ್ವಾ, ಯಾಕೆ ಇವನಿಗೆ ಹಿಂಗೆ ಆಗ್ತಿದೆ"). ಅಂದಿನ ಈ ದಿನ ಮುಗಿತು.

ಸೆಪ್ಟೆಂಬರ್ ೨ ೨೦೦೭, ಅಷ್ಟು ಏನು ವಿಶೇಷ ಇರ್ಲಿಲ್ಲ. ಎಲ್ಲಾ ಭಾನುವಾರಗಳ ತರಹ ಅದು ಒಂದು ಸಾಧಾರಣ ಭಾನುವಾರ.

ಸೆಪ್ಟೆಂಬರ್ ೩ ೨೦೦೭, ಪ್ರತಿದಿನ ಹೇಗೆ ಸಾಗ್ತಿತ್ತೋ ಅದೇ ರೀತಿ. ಏನು ವಿಶೇಷ ಇಲ್ಲ. ಸಂಜೆ ಗಾಂಧೀಬಜಾರ್ ಗೆ ಹೋಗಿದ್ದೆ, ಏನೋ ಕೆಲಸದ ಮೇಲೆ. ಒಂದು ಕರೆ ಬಂತು,

"you have been selected. I will send you the offer letter and details.
Please follow the details/instruction. Your joining date is september 5th."

ಇದು ಆ ಕರೆಯ ಸಾರಾಂಶ. ಕಣ್ಣಲ್ಲಿ ನೀರು ತಾನಾಗಿ ಬರ್ತಿತ್ತು. ಏನು ಮಾಡಬೇಕು ಗೊತಾಗ್ತಿಲ್ಲ. ಖುಷಿ ಹೇಳೋಕೆ ಜೊತೆಗೆ ಯಾರಿಲ್ಲ. ಮನೆಗೆ ಹೋಗೋಕೆ ಇನ್ನು ೫-೧೦ ನಿಮಿಷ ಆಗುತ್ತೆ. ಅಮ್ಮನಿಗೆ ಆ ವಿಷ್ಯ ಹೇಳೋಕೆ ನನ್ನಿಂದ ಆಗೋಲ್ಲ. ನನ್ನ ಫ್ರೆಂಡ್ ಒಬ್ಳಿಗೆ ಕಾಲ್ ಮಾಡಿ, ಮಾತಾಡ್ತಾ ಮಾತಾಡ್ತಾ ಮನೆಗೆ ಹೋದೆ, ಅಮ್ಮ ಗೆ ಫೋನ್ ಕೊಟ್ಟು ಸುಮ್ನಾದೆ. ಅವಳು ಅಮ್ಮನಿಗೆ ಆ ವಿಷ್ಯ ಹೇಳ್ತಿದ್ದಂಗೆ ಅಮ್ಮನ ಮುಖದಲ್ಲಿ...................................................................................................

ಎಲ್ಲ ಮರೆಯಲಾಗದ ನೆನಪುಗಳು.....

ಬಸ್ conductor
ಆಟೋ ಡ್ರೈವರ್
ಸೆಕ್ಯೂರಿಟಿ gaurd
careernetನ ಆ ವ್ಯಕ್ತಿ
ನನ್ನ ಇಂಟರ್ವ್ಯೂ ಮಾಡಿದವರು
ಅಲ್ಲಿ ಪರಿಚಯವಾದ ಹೊಸ ಗೆಳತಿ

ಎಲ್ಲರಿಗೂ ಧನ್ಯವಾದಗಳು.....

ಕಾಲೇಜ್ ಅಲ್ಲಿ ಸೆಲೆಕ್ಟ್ ಆಗಿದ್ದ ಜಾಸ್ತಿ ಜನರು, ಕಂಪನಿ ಸೇರೋಕೆ ಮೊದಲೇ ನಾನು ಸೇರ್ಕೊಂಡೆ. ಹೆಚ್ಚು ಕಾಯಲಿಲ್ಲ, ಎಲ್ಲ procedures ೪-೫ ದಿನಗಳಲ್ಲಿ ಆಗೋಯ್ತು. ಸೆಪ್ಟೆಂಬರ್ ೫ ೨೦೦೭, ವಿಶೇಷ ಏನಂದ್ರೆ ಹೊಸ ಪರಿಚಯದ ಗೆಳತಿ ಕೂಡ ಅಲ್ಲೇ ಇದ್ಲು. ಅಲ್ಲಿಂದ ಶುರು ಆದ ಪಯಣ ಇನ್ನು ನಡಿತಾ ಇದೆ....

6 comments:

  1. ನನ್ನ ಕಣ್ಣಲ್ಲಿ ನೀರು ಬಂತಲ್ಲಪ್ಪಾ... ಗುಡ್... ಇಷ್ಟೆ ಹೇಳೋಕ್ಕೆ ಆಗ್ತಾ ಇರೋದು.

    ReplyDelete
  2. ಇಷ್ಟೇ ಅಲ್ಲ, ಇನ್ನು ಕೆಲವು ಗೆಳಯ/ಗೆಳತಿಯರು ಇದ್ದಾರೆ, ನನ್ನ ಸೋಲು-ಗೆಲುವುಗಳಲ್ಲಿ ಹಿಂದೆ ಇದ್ದು, ನಾನು ಮುಂದೆ ಹೋಗೋ ಹಾಗಿ ಮಾಡಿದವರು... ಅವರನ್ನು ಕೂಡ ಮರ್ಯೋಕೆ ಆಗೋಲ್ಲ... ಅವರಿಗೂ ಧನ್ಯವಾದಗಳು...

    ReplyDelete
  3. soooperaagide Chandru... aa geLathi yaaro?

    ReplyDelete
  4. FB alli share agide maga... nodu..

    ReplyDelete
  5. Nice Chandru... aa dinagalannanthu maryokke agolla...

    ReplyDelete
  6. chennagi moodi bandide ninna lekana.. as always.. You are special

    ReplyDelete