Custom Search

Friday, August 17, 2012

ಪ್ರಾಣಿಗಳಿಗೆ ಬುದ್ಧಿ ಇಲ್ವಾ????


ಸಾಮಾನ್ಯವಾಗಿ ಯಾರದ್ರು ಮನುಷ್ಯ ಏನಾದ್ರು ತಪ್ಪು ಮಾಡಿದ್ರೆ (ತಿಳಿದೋ ಅಥವಾ ತಿಳಿಯದೆಯೋ ಅದು ಅನವಶ್ಯಕ ನಮ್ಮ ಜನಕ್ಕೆ.), ಆಡುವ ಮಾತಿನಲ್ಲಿ ವ್ಯತ್ಯಾಸ ಆದ್ರೆ ಇನ್ನು ಕೆಲವು ಸಂದರ್ಭಗಳಲ್ಲಿ, ಸುತ್ತ ಇರೋ ಜನ ಏನ್ ಅಂತಾರೆ????

ಯಾಕೆ ಹಿಂಗೆ ಆಡ್ತಿದ್ದೀಯಾ?
ಯಾಕೆ ಹಿಂಗೆ ಮಾಡ್ತಿದ್ದೀಯಾ?
ಯಾಕೆ ಹಿಂಗೆ ತಲೆಲಿ ಬುದ್ಧಿ ಇಲ್ಲದವನ ರೀತಿ ಆಡ್ತೀಯ?
ನಿಂಗು ಆ ಪ್ರಾಣಿಗೂ (ನಾಯಿ, ಕೋತಿ, ದನ, ಹಂದಿ ಇತ್ಯಾದಿ ಯಾವ್ದಾದ್ರು ಆಗಿರಬಹುದು) ಏನು ವ್ಯತ್ಯಾಸ ಇಲ್ಲ. ಎರಡು ಒಂದೇ.....

ಈ ರೀತಿ ಕೇಳಿರೋದು ಸಾಮಾನ್ಯ ಅಲ್ವಾ????
ಆದರೆ ಮನುಷ್ಯನ್ನ ಒಂದು ಪ್ರಾಣಿಗೆ ಹೋಲಿಸೋದು ಎಷ್ಟು ಸರಿ????
ಯಾಕಂದ್ರೆ, ಸೃಷ್ಟಿಕರ್ತ ಎಲ್ಲಾ ಜೀವಗಳಿಗೂ ಒಂದೇ ಮಟ್ಟದ ಜ್ಞಾನ ಕೊಟ್ಟಿದ್ದಾನೆ ಅನ್ನೋದು ನನ್ನ ಅಭಿಪ್ರಾಯ...

ಕೆಲವು ಉದಾಹರಣೆಗಳು...
ಸಣ್ಣ ಪ್ರಾಣಿ/ಕೀಟ ಜಾತಿಗೆ ಸೇರಿದ್ದು, ಇರುವೆ. ಇರುವೆಯನ್ನ ಉದಾಹರಣೆಯಾಗಿ ಹೇಳೋದಾದ್ರೆ...

ಅದಕ್ಕೆ ಯಾರು ಹೋಗಿ ಹೇಳ್ತಾರೆ, ತನ್ನ ಗೂಡು (ಹುತ್ತ)ವನ್ನ ಹೀಗೆ ಕಟ್ಬೇಕು ಅಂತ?
ಯಾವ ರೀತಿಯ ಆಹಾರ/ಕಾಳು ಶೇಖರಣೆ ಮಾಡ್ಕೊಬೇಕು ಅಂತ???

ನೀವು ಗಮನಿಸಿರ್ತೀರ ಅನ್ಸುತ್ತೆ, ಮನೆಯ ಕಿಟಕಿ-ಬಾಗಿಲುಗಳ ಅಂಚಿನಲ್ಲಿ, ಗೋಡೆಯ ಮೂಲೆಯಲ್ಲಿ, ಎಷ್ಟು ಆಗುತ್ತೋ ಅಷ್ಟು ನೆಲಕ್ಕೆ ಸಮೀಪ, ಆದರೆ ಕಣ್ಣಿಗೆ ಕಾಣದಷ್ಟು ಒಳಗೆ, ತಮ್ಮ ಗೂಡು ಮಾಡಿರ್ತಾವೆ. ಸಾಮಾನ್ಯವಾಗಿ ಯೋಚನೆ ಮಾಡಿದ್ರೆ.. ಎಲ್ಲೋ ಜಾಗ ಇತ್ತು.. ಗೂಡು ಮಾಡ್ಕೊಂದಿದಾವೆ ಅನ್ಸುತ್ತೆ, ಆ ಗೂಡಿನ ಕಡೆ ಸ್ವಲ್ಪ ಜಾಸ್ತಿ ಗಮನ ಕೊಟ್ರೆ ನಿಮಗೆ ಗೊತ್ತಾಗುತ್ತೆ, ಆ ಜಾಗಕ್ಕೆ, ಬಿಸಿಲು-ಮಳೆ-ಗಾಳಿ ಯಾವುದೇ ತೊಂದ್ರೆ ಆಗೋದಿಲ್ಲ ಅಂತ.

ಇರುವೆಗಳ ಊಟ/ತಿಂಡಿ/ಆಹಾರದ ವಿಷ್ಯ ಅಂತ ಹೇಳೋದಾದ್ರೆ, ನೀವು ಅನ್ನ ಇಟ್ಟಿರಿ, ಮುದ್ದೆ ಇಟ್ಟಿರಿ, ಹೋಳಿಗೆ ಇಟ್ಟಿರಿ, ಈ ತಿಂಡಿಗಳು ಇರೋ ಜಾಗದಲ್ಲೇ ಖಾಲಿ ಆಗುತ್ತೆಯೇ ಹೊರತು, ಇವು ಯಾವು ಇರುವೆಗಳ ಗೂಡು ಸೇರೋಲ್ಲ. ಇರುವೆಗಳು ಗೂಡಿಗೆ ಹೊತ್ಕೊಂಡು ಹೋಗೋದು ಏನಿದ್ರು, ಸಕ್ಕರೆ, ಕಾಳುಗಳು, ಇತ್ಯಾದಿ ಗಟ್ಟಿ/ಘನ ಪದಾರ್ಥಗಳನ್ನ ಮಾತ್ರ...

ಇರುವೆಯ ಬಗ್ಗೆ, ಚಿಕ್ಕದಾಗಿ ಇಷ್ಟು ಹೇಳಬಹುದು ಅಂದ್ರೆ.. ಆನೆ ಬಗ್ಗೆ ಏನೆಲ್ಲಾ ಹೇಳಬಹುದು???

ಒಂದು ತಾಯಿ ಆನೆ, ತನ್ನ ಮರಿ ಆನೆಯನ್ನ ಎಷ್ಟು ಹುಷಾರಾಗಿ ನೋಡ್ಕೊಳುತ್ತೆ ಅಂದ್ರೆ, ಒಬ್ಬ ತಾಯಿ ತನ್ನ ಮಗುವನ್ನ ಆರೈಕೆ ಮಾಡೋ ರೀತಿ..

ಎಲ್ಲೋ ಕೇಳಿದ ಒಂದು ನೆನಪು - ಬಂಡೀಪುರದ ಹತ್ರ ಒಂದು ಮರಿ ಆನೆ ರಸ್ತೆ ದಾಟುತ್ತಿದ್ದಾಗ ಒಂದು ಕೆಂಪು ಬಣ್ಣದ ಕಾರು, ಜೋರಾಗಿ ಶಬ್ದ (ಹಾರ್ನ್ ) ಮಾಡಿದೆ, ಅದರಿಂದ ಗಾಬರಿಗೊಂಡ ಮರಿ ಆನೆ ತನ್ನ ತಾಯಿ ಆನೆಯ ಬಳಿ ಓಡಿದೆ. ಇದನ್ನು ಗಮನಿಸಿದ ತಾಯಿ ಆನೆ, ಆ ರಸ್ತೆಯಲ್ಲಿ ಯಾವುದೇ ಕೆಂಪು ಬಣ್ಣದ ಕಾರು ಕಂಡರೂ ಅದಕ್ಕೆ ತೊಂದ್ರೆ ಕೊಡೋಕೆ ಹೋಗ್ತಿತ್ತಂತೆ.

ಕೆಂಪು ಬಣ್ಣದ ಕಾರಿಗೆ ಯಾಕೆ ತೊಂದ್ರೆ ಮಾಡೋಕೆ ಹೋಗ್ತಿತ್ತು?
ಬೇರೆ ಬಣ್ಣದ ಕಾರುಗಳಿಗೆ ಯಾಕೆ ತೊಂದ್ರೆ ಮಾಡ್ತಿರ್ಲಿಲ್ಲ??
ತನ್ನ ಮಗುವಿನ ಬಗ್ಗೆ ಅದಕ್ಕೆ ಅಷ್ಟು ಪ್ರೀತಿ/ಕಾಳಜಿ ಇದೆಯಾ?
ಹೀಗೆ ಮುಂದೆ ಹೋಗ್ತಾ ಇರುತ್ತೆ, ಪ್ರಶ್ನೆಗಳ ಸಾಲು...

ಒಂದು ರೀತಿಯಲ್ಲಿ ನೋಡೋದಾದ್ರೆ ಹೆಚ್ಚು-ಕಡ್ಮೆ ಎಲ್ಲ ಪ್ರಾಣಿಗಳು ತಮ್ಮ ಮರಿಗಳ ಬಗ್ಗೆ ಇದೆ ರೀತಿಯ ಕಾಳಜಿ/ಪ್ರೀತಿ ತೋರಿಸ್ತಾವೆ, ರಕ್ಷಣೆ ಕೊಡ್ತಾವೆ.

ಕೋತಿ ನೋಡಿದ್ರೆ ತನ್ನ ಮರಿಯನ್ನ ಹೊಟ್ಟೆಗೆ ಅಂಟಿಸಿಕೊಂಡಿರುತ್ತೆ....

ಇನ್ನು ನಾಯಿಗಳ ವಿಷ್ಯ ಮಾತಾಡೋಣ ಅಂದ್ರೆ...
ನಮ್ಮ-ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೆ, ನಾಯಿ ತುಂಬಾ ನಿಯ್ಯತ್ತಿನ ಪ್ರಾಣಿ. ತನ್ನ ಯಜಮಾನ ಹೇಳಿದಂತೆ ಕೇಳುತ್ತೆ... ಅದು ಇದು.. ಇತ್ಯಾದಿ ಇತ್ಯಾದಿ...

ನೀವು ಅದನ್ನ ಟ್ರೈನ್ ಮಾಡಬಹುದು, ಅದು ಒಂದು ಬಗೆ ಆದ್ರೆ.. ಅದು ತಾನಾಗೆ ತಿಳ್ಕೊಂಡಿರೋದು????

ನಾನು ಕಂಡಿರುವ ಕೆಲವು ಸನ್ನಿವೇಷಗಳು,,,,
ನಮ್ಮ ಮನೆಯಲ್ಲಿ ಒಂದು ನಾಯಿ ಇದೆ, ಹೆಸರು "ರಾಣಿ"... ಮನೆ ಸುತ್ತ-ಮುತ್ತ ಎಲ್ಲಾದರು ಅದು ಇತ್ತು ಅಂದ್ರೆ, "ರಾಣಿ" ಅಂತ ಕೂಗಿದ್ರೆ ಓಡಿ ಬರುತ್ತೆ...

ಯಾರಾದ್ರೂ ಅದಕ್ಕೆ ನಾಮಕರಣ ಮಾಡಿ, ನೇಮ್ ಪ್ಲೇಟ್ (ನಾಮಫಲಕ) ಹಾಕಿದ್ದಾರ? ಇಲ್ಲ.
ಹೀಗಿದ್ರೂ "ರಾಣಿ" ಅಂತ ಕರೆದಾಗ ಅದು ಏಕೆ ಓಡಿ ಬರುತ್ತೆ????

ಯಾರು ಅದನ್ನ ಟ್ರೈನ್ ಮಾಡಿಲ್ಲ, ಆದ್ರೂ ಅಪರಿಚಿತರು ಮನೆ ಗೇಟ್ ಹತ್ರ ಬಂದಾಗ ಯಾಕೆ ಬೊಗಳುತ್ತೆ????

ಇದೆಲ್ಲಾ ಏನೋ ಬಿಟ್ಟಾಕಿ, ನಾರ್ಮಲ್, ಇದೆಲ್ಲಾ ಅದರ ಹುಟ್ಟುಗುಣ, ಹಾಗೆ ನಡೆಯುತ್ತೆ ಅಂತ ಅನ್ಕೊಳೋಣ ಸದ್ಯಕ್ಕೆ..

ಪ್ರತಿದಿನ ರಾತ್ರಿ ನಾನು ಆಫೀಸ್ ಇಂದ ಮನೆಗೆ ಹೋಗಿ ಗೇಟ್ ತೆಗಿತಿದ್ದಂಗೆ ಎಲ್ಲಿಂದಲೋ ಪ್ರತ್ಯಕ್ಷ...
ಪ್ರತಿದಿನ ರಾತ್ರಿ ನಾನು ಅದೇ ಟೈಮ್ ಗೆ ಮನೆಗೆ ಹೋಗ್ತೀನಿ ಅಂತ ನಾನು ಯಾವತ್ತು ಅದಕ್ಕೆ ಹೇಳಿಲ್ಲ. ಅದಕ್ಕಿಂತ ಹೆಚ್ಚಿಗೆ ಅದು ಗಡಿಯಾರ ಹಾಕಿರೋಲ್ಲ (ಇದನ್ನ ನಾನು ಬಿಡಿಸಿ ಹೇಳಬೇಕಿಲ್ಲ). ಹೀಗಿದ್ರೂ ಅದೇ ಸಮಯಕ್ಕೆ ಎಲ್ಲೇ ಇದ್ರು ಹೇಗೆ ಬಂದು ಗೇಟ್ ಹತ್ರ ನಿಲ್ಲುತ್ತೆ...???
ಅಪ್ಪಿ ತಪ್ಪಿ ನಾನು ಹೋಗೋದು ಎರಡು ನಿಮ್ಷ ಲೇಟ್ ಆದ್ರೆ, ಅಲ್ಲೇ ಬೀಟ್ ಹೊಡಿತ ಇರುತ್ತೆ, ನಾ ಹೋದ ಕೂಡಲೇ ನನ್ನ ಹಿಂದೆ ಬರುತ್ತೆ.. ಒಂದು ವೇಳೆ ಉಲ್ಟಾ ಆಗಿ ನಾನು ಬೇಗ ಹೋದ್ರೆ, ಮನೆಗೆ ಹೋಗಿ ಶೂ ತೆಗೆದು ಹೊರಗೆ ಬಾರೋ ಹೊತ್ತಿಗೆ ಗೇಟ್ ಹತ್ರ ಕಾಯ್ತಾ ಇರುತ್ತೆ...

ಕಾರಣ ಇಷ್ಟೇ, ನಾನು ಮನೆಗೆ ಹೋದ್ಮೇಲೆ ಗೇಟ್ ಬೀಗ ಹಾಕ್ತೀನಿ. ಗೇಟ್ ಬೀಗ ಹಾಕೋದಕ್ಕೆ ಮುಂಚೆ ಅದು ಮನೆ ಸೇರ್ಕೊಳುತ್ತೆ.

ಅದು ಮಲಗೋ ಜಾಗ ಕೂಡ ಅಷ್ಟೇ, ಅದಕ್ಕೆ ಅಂತ ಗೂಡು ಇಲ್ಲ, ಹೊದಿಕೆ ಇಲ್ಲ. ಆದರೂ ಅದು ಬೆಚ್ಚಗೆ ಮಲಗಿರುತ್ತೆ, ಅದು ಮಲಗಿರೋ ಜಾಗದಲ್ಲಿ ನಿಂತರೆ ಗೊತ್ತಾಗುತ್ತೆ ಅದು ಎಂತ ಜಾಗ ಅಂತ.

ಇನ್ನು ಒಂದು ಸನ್ನಿವೇಷ ಅಂದ್ರೆ,
ಒಂದು ಬೀದಿಯ ನಾಯಿ ಮತ್ತೊಂದು ಬೀದಿಗೆ ಹೋದ್ರೆ, ಜಾಸ್ತಿ ನಕ್ರ ಮಾಡೋಕೆ ಹೋಗೊಲ್ಲ... :)
(ಮನುಷ್ಯರಲ್ಲಿ[ಕೆಲವು] ಇದು ಸಂಪೂರ್ಣ ಉಲ್ಟಾ), ಸಾಮಾನ್ಯವಾಗಿ ರಾತ್ರಿ ನಾನು ಮನೆಗೆ ಹೋಗಬೇಕಿದ್ರೆ, ಬೀದೀಲಿ ಒಂದಷ್ಟು ನಾಯಿಗಳು ಇರ್ತಾವೆ. ಈ ದಿನ ಗಾಡಿ ಇಂದ ಇಳಿದು ಬರ್ತಿರ್ಬೇಕಿದ್ರೆ, ಒಂದು ಬೇರೆ ನಾಯಿ. ಅದನ್ನು ನೋಡಿದ ತಕ್ಷಣ ನಂಗೆ ಅನಿಸ್ತು ಇದು ನಮ್ಮ ಬೀದಿ ನಾಯಿ ಅಲ್ಲ, ಎಲ್ಲಿಂದಲೋ ಬಂದಿದೆ. ಅದು ಅದರ ಪಾಡಿಗೆ ಅದು ಹೋಗ್ತಾ ಇತ್ತು, ನಾನು ಅದನ್ನ ಗಮನಿಸ್ತಾ ಮನೆ ಕಡೆ ನಡಿತಾ ಇದ್ದೆ. ನಮ್ಮ ಬೀದಿಯ ನಾಯಿಗಳ ಗುಂಪು ಅಲ್ಲಿ ಮುಂದೆ ಕಾಯ್ತಾ ಇತ್ತು. ಹೊಸ ನಾಯಿ ಹೋಗ್ತಾ ಇದ್ದಂಗೆ, ಎಲ್ಲ ನಾಯಿಗಳು ಬೊಗಳೋಕೆ ಶುರು ಮಾಡ್ಕೊಂದ್ವು. ನಾ ನೋಡ್ತಾ ನಿಂತೆ, ಆ ಹೊಸ ನಾಯಿ ಏನ್ ಮಾಡುತ್ತೆ ಅಂತ. ಒಂದು ಚೂರು ಪ್ರತಿರೋಧ ಇಲ್ಲ, ಹಿಂದೆ ತಿರುಗಿ ಕೂಡ ನೋಡ್ಲಿಲ್ಲ, ತಲೆ ಬಗ್ಗಿಸಿ ಹೆಂಗೆ ನಡೀತಾ ಇತ್ತೋ ಅದೇ ಗತಿಯಲ್ಲಿ ಮುಂದೆ ಹೋಯ್ತು, ಯಾವುದು ತನ್ನ ಕಿವಿಗೆ ಬಿದ್ದಿಲ್ಲ ಅನ್ನೋ ರೀತಿ. ನಂಗೆ ಆಶ್ಚರ್ಯ...

ಈ ಸನ್ನಿವೇಷ ನೋಡಿದ್ಮೇಲೆ ನನ್ ತಲೇಲಿ ಸ್ವಲ್ಪ ಹಂಗೆ ಹುಳ ಓಡಾಡೋಕೆ ಶುರು ಆಯ್ತು.. ಹಾಗಾಗಿ ಈ ಲೇಖನ...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ....

No comments:

Post a Comment