Custom Search

Wednesday, January 5, 2011

ಕನಸು...

ಕನಸುಗಳೆಲ್ಲ ನಿಜವಲ್ಲ, ನಿಜವಾಗುವ ಕನಸೇ ಕಾಣಬೇಕಿಲ್ಲ, ಕಂಡ ಕನಸು ನಿಜವಾಗಬೇಕಿಲ್ಲ. 
ಮನಸಿನೊಳಗಿನ ನಿನ್ನೊಂದಿಗೆ ನೀನು ನಿರ್ಭಯವಾಗಿ ಸಂವಾದಿಸುವ ಸುವರ್ಣ ಸುಂದರ ಸಮಯ ಕನಸು. ಕನಸಿನಿಂದ ಏನನ್ನು ಬಯಸದೆ ಆ ಕ್ಷಣಗಳ ಅನುಭವಿಸುದೆ ಒಂದು ಅದ್ಭುತ ಅನುಭವ.

Thursday, December 23, 2010

ಬಟ್ (butt)...

ಒಬ್ಬರ ಬಟ್, ಇರುವುದು ಬಟ್ಟಲಿನಾಕಾರದಲಿ,
ಮತ್ತೊಬ್ಬರದು ಹೆಬ್ಬೆಟ್ಟಿನಾಕಾರದಲಿ,
ಇನ್ನೊಂದು ಒಬ್ಬಟ್ಟಾದರೆ,
ಮಗದೊಂದು 180ಡಿಗ್ರೀ ಫುಲ್ಲ್ ಫ್ಲಾಟು... :)

Sunday, November 28, 2010

ನಾನು - ನಾನೇ...

ನಾನು ನಾನಾದೆ, ನೀನು ನೀನಾಗಿರುವೆ, ನಾನು ನಾನಾಗದೇ ನೀನಾಗಿದ್ದಾಗ, ನೀನು ನಾನಾಗದೆ ನಿನ್ನೊಳಗಿರುವ ನನ್ನ ನೋಯಿಸಿದೆ, ನಿನ್ನೊಳಗಿರುವ ನೀನು ನಿನ್ನಲ್ಲೇ ನಿನ್ನ ನೋಯಿಸಿದೆ. ನಾನು - ನೀನು, ನನ್ನ - ನಿನ್ನ ನೋವು ನಲಿವುಗಳ ನಡುವೆ, ನಾನು ನೀನಾಗುವುದು, ನೀನು ನಾನಾಗುವುದು ನೆರವೇರಲಿಲ್ಲವಾದ್ದರಿಂದ ನಾನು ನಾನಾದೆ, ನೀನು ನೀನಾಗಿರುವೆ. ನೀನು - ನೀನೆ, ನಾನು - ನಾನೇ..... :) ;) :D

Tuesday, November 23, 2010

GC - quote - 1

ಬ್ಯೂಟಿಫುಲ್ ಹುಡ್ಗಿ ಹಿಂದೆ ಹೋದ್ರು, 
BMTC ಬಸ್ ಮುಂದೆ ಹೋದ್ರು .... 
                ಕೊನೆಗ್ ಸೇರೋದ್ ಆಸ್ಪತ್ರೇನೆ...!!!

Sunday, November 21, 2010

ನೈತಿಕತೆ...!!!

ಕೆಲವು ರಾಜಕಾರಣಿಗಳಿಗೆ ಇಲ್ಲ ನೈತಿಕತೆ,
ಆದರೆ ಹಲವರಿಗೆ ಇಲ್ಲದಿರುವುದೇ ಒಂದಕ್ಕಿಂತ 
                              ಹೆಚ್ಚು, ನೈಟಿ - ಕಥೆ...??!!! 

Monday, September 27, 2010

ಪ್ರೀತಿ...

ಗೆಳೆಯ, ಮೊದಲು ನೀನು ನಿನ್ನನ್ನು ಪ್ರೀತಿಸು, ಇತರರ ಬಗ್ಗೆ ನಂತರ ಚಿಂತಿಸು. ನಿನ್ನ ನಿಜ ಪ್ರೀತಿಗೆ ನೀನಲ್ಲದೆ ಮತ್ಯಾರು ಯೋಗ್ಯರಲ್ಲ.

ಗುಂಡಚಂದ್ರು