Custom Search

Saturday, August 11, 2012

ಯಾಕೆ ಕೆಲ್ಸ ಬೇಗ ಆಗೋಲ್ಲ... (ಒಂದು ಅನುಭವ) - 2 (complete conversation ;) ;))


ಸಾರ್, ಬಿಲ್ ಕರ್ರೆಕ್ಶನ್ ಇದೆ, ಹನುಮಂತನಗರ ಏರಿಯಾ, ಯಾರ್ಹತ್ರ ಹೋಗ್ಬೇಕು??

ಅಲ್ಲಿ ರೈಟ್ ಸೈಡ್ ಆಫೀಸ್ ಒಳಗೆ ಹೋಗಿ ಕೇಳಿ ಸರ್...
ಬಲಗಡೆ ಇದ್ದ ಆಫೀಸ್ ಒಳಗೆ ಹೋದೆ,

ಮೇಡಂ, ಬಿಲ್ ಕರ್ರೆಕ್ಶನ್ ಇದೆ, ಹನುಮಂತನಗರ ಏರಿಯಾ, ಯಾರು ಇನ್ಚಾರ್ಜು???
ರೀ, ಕಮಲ ಏನ್ರೀ ನಿಮ್ ಮಗನ್ಗೆ ಹುಡುಗಿ ಸೆಟ್ ಆಯ್ತು ಅಂದ್ರಿ, ಯಾವ ಊರು ಕಡೆದು, ನಿಮ್ ಕ್ಯಾಸ್ಟ್ಆ???

ಹು ಕಣ್ರೀ ರಮಾ, ಸೆಟ್ ಆಯ್ತು, ಹುಡುಗಿ ಇಲ್ಲೇ JP Nagar, ನಮ್ ಕ್ಯಾಸ್ಟ್ ಅಲ್ಲ ಕಣ್ರೀ, ನಮ್ ಮಗ ಕೆಲ್ಸ ಮಾಡೋ ಆಫೀಸ್ ಅಲ್ಲೇ ಅವ್ಳು ಕೂಡ ಮಾಡ್ತಾಳೆ, ಇಬ್ರು ಇಷ್ಟ ಪಟ್ಟಿದ್ರು, ವಯಸ್ಸಿಗೆ ಬಂದ ಮಗ, ಏನು ಹೇಳೋದು ಹೇಳಿ. ಸುಮ್ನೆ ಯಾಕೆ ಮನಸ್ಸು ಹಾಳು ಮಾಡ್ಕೊಳೋದು, ಅದಕ್ಕೆ ನಾವೆಲ್ಲ ಒಪ್ಕೊಂಡು ಮಾತು-ಕತೆ ಮುಗ್ಸಿದ್ವಿ ಕಣ್ರೀ.

ಅಲ್ರೀ ಕಮಲ, ಇಷ್ಟ ಪಟ್ರು ಅಂತ ಒಕ್ಪೊಂಡು ಮಾತು-ಕತೆ ಮುಗ್ಸಿದ್ರ? ಅದು ಇಂಟರ್ ಕ್ಯಾಸ್ಟ್?? ಏನೋ ಬಿಡಿ, ಕಾಲ ಚೇಂಜ್ ಆಗಿದೆ. ಅದಿರ್ಲಿ, ವರದಕ್ಷಿಣಿ, ವರೋಪಚಾರ ಏನು ಮಾಡ್ತಾರೆ, ಮದ್ವೆ ಎಲ್ಲಿ ಮಾಡ್ಕೊಡ್ತಾರಂತೆ, ಹುಡುಗಿ ಹೆಂಗಿದಾಳೆ ನೋಡೋಕೆ?

ಹುಡುಗಿ ಚೆನ್ನಾಗಿದಾಳೆ ರೀ ರಮಾ, ಲಕ್ಷಣವಾಗಿ ಇದ್ದಾಳೆ, ಅದ್ಕೆ ನನ್ ಮಗನು ಒಪ್ಪಿರೋದು. ಲವ್ ಮ್ಯಾರೇಜ್ ಅಲ್ವೇನ್ರಿ, ವರದಕ್ಷಿಣೆ ವರೋಪಚಾರ ಏನು ಇಲ್ಲ, ಮದ್ವೆ ಇಲ್ಲೇ ಗ್ರ್ಯಾಂಡ್ ಆಗಿ ಮಾಡ್ಕೊಡ್ತಾರಂತೆ...

....
....
....

ಅಲ್ಲಿ ರಾಧ ಅಂತ ಕೂತಿದಾರೆ ನೋಡಪ್ಪ, ಅಲ್ಲಿ ಹೋಗಿ ಮಾತಾಡು.

ಥ್ಯಾಂಕ್ಸ್ ಮೇಡಂ. :)

ನಮಸ್ಕಾರ ಮೇಡಂ, ಕಳೆದ ತಿಂಗ್ಳು ಫುಲ್ ಇಂಟರ್ನೆಟ್ ಇರ್ಲಿಲ್ಲ, ಅದಕ್ಕೆ ಬಿಲ್ ಅಲ್ಲಿ ಚೇಂಜ್ ಮಾಡಿಸ್ಬೇಕು ಅಮೌಂಟ್ ನ... 

AE ಬರ್ಕೋಟ್ಟಿದಾರ, ನಮ್ದೆ ಪ್ರಾಬ್ಲಮ್ ಅಂತ?

ಹೌದು ಮೇಡಂ, ಇಲ್ಲಿದೆ ನೋಡಿ ಅವ್ರು ಕೊಟ್ಟಿರೋ ಲೆಟರ್. 

ರೀ ವಿಶಾಲಾಕ್ಷಿ, ನೋಡ್ರೀ ಈ AE ಇದರಲ್ಲ ಹೋದ ತಿಂಗ್ಳು ಪ್ರಾಬ್ಲಮ್ ಆಗಿದ್ರಿ, ಏಪ್ರಿಲ್-ಮೇ ಅಲ್ಲಿ ವರ್ಕ್ ಆಗ್ತಿರ್ಲಿಲ್ಲ ಅಂತ ಬರೆದು ಕೊಟ್ಟಿದ್ದಾರೆ.

ಅಯ್ಯೋ, ಹಂಗೆ ಬಿಡಿ ರಾಧ, ಮೊನ್ನೆ ಏನಾಯ್ತು ಗೊತ್ತ? ಡಿಸೆಂಬರ್ ೨೦೧೨ ವರ್ಕ್ ಆಗ್ತಿರ್ಲಿಲ್ಲ ಅಂತ ಕೊಟ್ಟಿದ್ರು ರೀ. ಇನ್ನು ಜುಲೈ ತಿಂಗಳೇ ಮುಗ್ದಿಲ್ಲ ಡಿಸೆಂಬರ್ ಗೆ ಹೆಂಗೆ ಬಿಲ್ ಹಾಕಲಿ ಹೇಳಿ ರಾಧ... ಹ್ಹ ಹ ಹ ಹಾ.... ಅದಿರ್ಲಿ ಇವತ್ತು ಏನ್ ತಿಂಡಿ ಮಾಡಿದ್ರಿ ರಾಧ, ನಮ್ ಮನೇಲಿ ಚಿತ್ರಾನ್ನ ಮಾಡಿದ್ದೆ, ಚೆನ್ನಾಗಿದೆ ಅಂತ.. ಎಲ್ಲ ಖಾಲಿ ಮಾಡ್ಬಿಟ್ರು ಕಣ್ರೀ, ಕೊನೆಗೆ ನಂಗೆ ಇರ್ಲಿಲ್ಲ.

ನಮ್ ಮನೇಲಿ ಪಲಾವ್ ಮಾಡಿದ್ದೆ ಕಣ್ರೀ, ಹೆಸರಿಗೆ ತರಕಾರಿ ಪಲಾವು, ಆದ್ರೆ ತರಕಾರೀ ಅಲ್ಲೊಂದು ಇಲ್ಲೊಂದು... :) :)
ಎಷ್ಟು ರೇಟ್ ಆಗ್ಬಿಟ್ಟಿದೆ ಕಣ್ರೀ ವಿಶಾಲಾಕ್ಷಿ..!!!!

...........

...........

...........

ಸರಿ, ನಿಮಗೆ ಇಂಟರ್ನೆಟ್ ಪ್ರಾಬ್ಲಮ್ ಆಗಿತ್ತು, ನೀವು ಯುಸ್ ಮಾಡಿಲ್ಲ ಅಂತ ವೆರಿಫೈ ಆಗಬೇಕು, ಅಲ್ಲಿ ಹಿಂದೆ ವೆರಿಫಿಕೇಶನ್ ಮಾಡ್ತಾರೆ ಹೋಗಿ ಮಾಡಿಸ್ಕೊಂಡು ಬನ್ನಿ, ಆಮೇಲೆ ಬಿಲ್ ಕರೆಕ್ಟ್ ಮಾಡಿ ಕೊಡ್ತೀನಿ.

ಥ್ಯಾಂಕ್ಸ್ ಮೇಡಂ,
ಹಿಂದೆ ಇದ್ದ ಆಫೀಸ್ ಕಡೆ ಹೊರಟೆ....

ಮೇಡಂ, ಹೋದ ತಿಂಗ್ಳು ಇಂಟರ್ನೆಟ್ ಬರ್ತಾ ಇರ್ಲಿಲ್ಲ, ಅದಕ್ಕೆ ಬ್ರಾಡ್ಬ್ಯಾಂಡ್ ಯೂಸೇಜ್ ಆಗಿಲ್ಲ ಅಂತ ವೆರಿಫೈ ಮಾಡಿ ಕೊಡ್ಬೇಕು. ರಾಧ ಮೇಡಂ ವೆರಿಫೈ ಮಾಡಿಸ್ಕೊಂಡು ಬಾ ಅಂತ ಹೇಳಿದ್ರು, ಆಮೇಲೆ ಅವ್ರು ಬಿಲ್ ಚೇಂಜ್ ಮಾಡ್ತಾರಂತೆ.

ಹೌದಾ, ಕೊಡಪ್ಪ ಇಲ್ಲಿ, 
loggin into their server for usage verification.

ಉಮಾವ್ರೆ ನಮ್ಮನೇಲಿ ಇವತ್ತು ಉಪ್ಪಿಟ್ಟು ಮಾಡಿದ್ದೆ ರೀ, ಯಾವತ್ತು ಇಲ್ಲ, ಅಂತದ್ದು ಇವತ್ತು ನಮ್ ಮನೆವ್ರು ತುಪ್ಪ ಹಾಕ್ಕೊಂಡು ಹಾಕ್ಕೊಂಡು ತಿಂತಿದ್ರು ರೀ... ಇವತ್ತು ತುಂಬಾ ಚೆನ್ನಾಗಿ ಕೂಡಿ ಬಂದಿತ್ತು ರೀ, ಉಪ್ಪು ಖಾರ ಎಲ್ಲ.. ಮಕ್ಳು ಅಷ್ಟೇ ಏನು ಮಾತಾಡಲೇ ಇಲ್ಲ.. ಯಾವಾಗ್ಲೂ ಒಂದಲ್ಲ ಒಂದು ಕೊಂಕು ತೆಗಿತಿದ್ರು ರೀ, ಇವತ್ತು ಒಂದು ಪದ ಆಡೋದು ಬೇಡ್ವೆ? :) :)

ಹೌದೇನ್ರಿ ಸುಮಾ, ಹಂಗಿದ್ರೆ ತುಪ್ಪ ಹಾಕ್ಕೊಂಡು ನಮಗೂ ಸ್ವಲ್ಪ ತರೋದಲ್ವೇನ್ರಿ. ನೀವು ಬಿಡಿಪಾ ಯಾವಾಗ್ಲು, family, ಗಂಡ, ಮಕ್ಳು ಇಷ್ಟೇ ಹೇಳ್ತಾ  ಇರ್ತೀರ....

ಅಲ್ಲ ರೀ ಉಮಾ, ಹೇಳ್ದೆ ಅಲ್ವ.. ಚೆನ್ನಾಗಿದೆ ಅಂತ ಎಲ್ಲ ತಿನ್ದ್ಬಿಟ್ರು ರೀ, ನಂಗೆ ಸ್ವಲ್ಪ ಇತ್ತು.. ಇನ್ನು ಆಫೀಸ್ ಗೆ ಹೇಗೆ ತರ್ಲಿ ಹೇಳಿ...???

ನೋಡಿ ಮಂಗಳ, ಈ ಸುಮ ಮಾಡಿದ ಉಪ್ಪಿಟ್ಟು ಮನೇಲಿ ಎಲ್ಲ ಖಾಲಿ ಮಾಡ್ಬಿಟ್ರಂತೆ ...

ಏನೋ ಬಿಡ್ರಿ ಉಮಾ, ಅವ್ರು ನಮಗೆಲ್ಲಾ ಯಾಕೆ ತರ್ತಾರೆ ಹೇಳಿ....

...........

...........

...........

logged into their server, verified whether any broadband usage was there or not. 
ನೋಡಪ್ಪ, ಇಲ್ಲಿ ಜೂನ್ ೧೨ ರಿಂದ ಜೂನ್ ೩೦ ವರ್ಗು ಯುಸ್ ಮಾಡಿಲ್ಲ.. ಅದನ್ನು ಮಾತ್ರ  ಬರೆದು ಕೊಡ್ತೀನಿ, ಈ ತಿಂಗಳದ್ದು ಆಗೋಲ್ಲ, ಇನ್ನು ಬಿಲ್ ಜೆನೆರೆಟ್ ಆಗಿಲ್ಲ.

ಸರಿ ಮೇಡಂ, ಅಷ್ಟೇ ಕೊಡಿ.

ರೀ ಸುಮಾ, ಇದು ಯಾವ್ದೋ ರಿಪೋರ್ಟ್ ಅಂತ ಹೇಳಿದ್ದಾರೆ ಹೆಂಗೆ ತೆಗ್ಯೋದ್ರಿ?

ಏನ್ರೀ ಮಂಗಳ ನೆನ್ನೆ ಎಲ್ಲ ಹೇಳಿದ್ದೆ ಅಲ್ವೇನ್ರಿ, ಅಲ್ಲೇ Export ಅಂತ ಬಟನ್ ಇರುತ್ತೆ ನೋಡಿ, ಅದನ್ನ ಒತ್ತಿ,
ಆಮೇಲೆ ಡೆಸ್ಕ್ಟಾಪ್ ಅಲ್ಲಿ ಸೇವ್ ಮಾಡಿ.

ರೀ, ಇದನ್ನ ಕಳ್ಸೋದು ಹೆಂಗೆ ಹೇಳ್ರಿ?

ಜಿಮೇಲ್- ಗೆ ಲಾಗಿನ್ ಆಗಿ, ಅಲ್ಲಿದೆ ನೋಡಿ.. ಅದನ್ನ ಒತ್ತಿ, ಆಮೇಲೆ attachments  ಅಂತ ಇರುತ್ತೆ ಅದು ಕ್ಲಿಕ್ ಮಾಡಿ, ಈ ಡೆಸ್ಕ್ಟಾಪ್ ಅಲ್ಲಿ fileನ ಸೆಲೆಕ್ಟ್ ಮಾಡ್ಕೊಳ್ಳಿ.. ಆಮೇಲೆ "ಓಕೆ" ಒತ್ರಿ....

...........

...........

...........

ರೀ ಉಮಾ, ಇದು ಒಂದು ಎಂಟ್ರಿ ಮಾಡ್ಕೊಳ್ಳಿ, ಅಲ್ಲಿ ಒಂದು ಎಂಟ್ರಿ ಮಾಡ್ಸಿ ಹೋಗಪ್ಪ.

ಥ್ಯಾಂಕ್ಸ್ ಮೇಡಂ,

...........
...........
...........

ಉಮಾ ಮೇಡಂ ಎಂಟ್ರಿ ಮಾಡಿದ್ರು ಮತ್ತೆ ರಾಧ ಮೇಡಂ ಕಡೆಗೆ.

ಬಿಲ್ ಚೇಂಜ್ ಮಾಡ್ಸೋಕೆ ಬಂದಾಗ ರಾಧ ಮೇಡಂ ಸೀಟ್ ಅಲ್ಲಿ ಇರ್ಲಿಲ್ಲ, ಸುಮಾರು ಒಂದು ಘಂಟೆಯ ಕಾಲ ಅಲ್ಲೇ ವೈಟಿಂಗ್.... :) 

ಮಹಾಲಕ್ಷ್ಮಿ, ಏನ್ರೀ ನೀವು ಇವತ್ತು ಲೇಟ್ ಆಗಿ ಬಂದ್ರಿ, ಯಾಕೆ ಏನಾಯ್ತು?

ಏನಿಲ್ಲ ವೀಣಾ, ಮನೆ ಕೆಲ್ಸ ಇರುತ್ತೆ ಅಲ್ವ.. ಒಂದ್ಚೂರು ಲೇಟ್ ಆಯ್ತು. ಮಕ್ಳು ಆಫೀಸ್ ಗೆ ಹೋಗ್ಬೇಕು, ನಮ್ ಮನೆವ್ರು ಆಫೀಸ್ ಗೆ ಹೋಗ್ಬೇಕು, ಎಲ್ಲರ್ಗೂ ತಿಂಡಿ, ಊಟ ರೆಡಿ ಮಾಡಿ ಬರಬೇಕು ಅಲ್ವ..

ಅಲ್ಲ ರೀ, ನಿಮ್ ಮನೇಲಿ ಕೆಲಸದವಳು ಇಲ್ವಾ???

ಇಲ್ಲ ವೀಣಾ, ನಮ್ ಮನೇಲಿ ಎಲ್ಲ ಕೆಲ್ಸ ಹಂಚ್ಕೊಂಡು ಮಾಡ್ತೀವಿ, ಅದಕ್ಕೆ ಏನು ಅಷ್ಟು ಗೊತ್ತಾಗೋದಿಲ್ಲ.
ಒಂದು ಕರೆ ಬರುತ್ತೆ..
ಏನು ಪುಟ್ಟ??? ತಿಂಡಿ ತಿನ್ದ್ಯೇನೋ? ಏನೋ ಇವತ್ತು ಇಷ್ಟು ಬೇಗ ಮನೆಗೆ ಬರ್ತೀಯಾ???
...........
ಸಹನಾ ಪುಟ್ಟ, ಮನೆಗೆ ಬಂದಮೇಲೆ.. ಹುಷಾರಾಗಿ ಬಾಗಿಲು ಹಾಕ್ಕೊಂಡು ನಿದ್ದೆ ಮಾಡು. ಕೆಲ್ಸ ಏನು ಮಾಡೋಕೆ ಹೋಗಬೇಡ. ಬೋರ್ ಆದ್ರೆ ಟಿವಿ ನೋಡು ಪುಟ್ಟ.
...........
...........
...........
ಸರಿ ಇಡ್ಲಾ????
ವೀಣಾ, ತಗೊಳ್ರಿ ನೆನ್ನೆ ಚಕ್ಕುಲಿ ಮಾಡಿದ್ದೆ, ಹೆಂಗಿದೆ ಹೇಳಿ...

ಒಂದು ಘಂಟೆ ಅವಧಿಯಲ್ಲಿ ಇಂತ ಮಾತು-ಕತೆಗಳು ಬೇಜಾನ್ ಇದ್ವು... ೩೦ ನಿಮಿಷ ಆಗ್ತಾ ಇದ್ದಂಗೆ ಮಹಾಲಕ್ಷ್ಮಿ ಮೇಡಂ, ರಾಧ ಮೇಡಂ ನ ಕರ್ಯೋಕೆ ಶುರು ಮಾಡಿದ್ರು..

ರೀ ರಾಧ, ಬನ್ರಿ subscriber ಆಗ್ಲಿಂದ ಕಾಯ್ತಾ ಇದ್ದಾರೆ..

ಹ, ಬಂದೆ ರೀ, ಲಕ್ಷ್ಮಿ....

ಇನ್ನು ಸ್ವಲ್ಲ್ಪ ಹೊತ್ತು ಅಗೋ ಹೊತ್ಗೆ, ರಾಧ ಮೇಡಂ ಗಾಗಿ ಕಾಯ್ತಿದ್ದ ಇನ್ನೊಬ್ಬ subscriber ರೆಗಾಡೋಕೆ ಶುರು ಮಾಡಿದ.. ಮಹಾಲಕ್ಷ್ಮಿ ಆಂಟಿ ಎದ್ದು ಹೋಗಿ, ರೀ ರಾಧ, ಅಲ್ಲಿ ಒಬ್ರು subscriber ಜೋರ್-ಜೋರು ಮಾತಾಡ್ತಾ ಇದ್ದಾರೆ ಬನ್ರಿ.. ಎಷ್ಟು ಹೊತ್ತಿಂದ ಕಾಯ್ತಾ ಇದ್ದಾರೆ... ಅಂತ ಹೇಳಿದ್ರು...
ಬಂದಮೇಲೆ ಮೊದಲಿದ್ದ ವ್ಯಕ್ತಿಯ ಜೊತೆ ಸ್ವಲ್ಪ ಬಾಕ್ಸಿಂಗ್ ಆಡಿ, ಕಳ್ಸಿದ್ರು...

ಮೇಡಂ, ವೆರಿಫೈ ಮಾಡ್ಸಿದ್ದು ಆಯ್ತು, ಚೇಂಜ್ ಮಾಡಿಕೊಡಿ, ಈಗ್ಲೇ ದುಡ್ಡು ಕಟ್ಟಿ ಹೋಗ್ತೀನಿ.

ಇದು ಒಂದು xerox ಕಾಪಿ ಬೇಕಲ್ಲಪ್ಪ.. ಹೋಗಿ ಒಂದು ಕಾಪಿ ಮಾಡಿಸ್ಕೊಂಡು ಬರ್ತೀಯಾ???

ಮೇಡಂ, ಮೊದ್ಲು ನೀವು ಎಲ್ಲ ಲೆಕ್ಕ ಮಾಡಿ ಹಾಕಿ ಕೊಡಿ, ಆಮೇಲೆ ಕಾಪಿ ಮಾಡಿಸ್ಕೊಂಡು ತಂದು ಕೊಡ್ತೀನಿ, ಬಿಲ್ಲು ಕಟ್ಬೇಕು...

ಒಹ್, ೧೨ ರಿಂದ ೩೦ ವರೆಗೂ ಇರ್ಲಿಲ್ಲ್ವ, ಸರಿ.
after some calcualation, bill amount changed/corrected.

ಮರಿಬೇಡ, ತಂದು ಕೊಡಪ್ಪ.. xerox ಮಾಡ್ಸಿ ಅದು ಕೊಡು ಸಾಕು, ಇದು ಒರಿಜಿನಲ್ ನೀನೆ ಇಟ್ಕೋ...
ಥ್ಯಾಂಕ್ಸ್ ಹೇಳಿ, ಬಿಲ್ ಕಟ್ಟೋಕೆ ಹೋದೆ, Qನಲ್ಲಿ ಇದ್ದದ್ದು ೫ ಜನ, ನಾನು ಆರನೆಯವನು.

ಮೊದಲ್ನೇ ವ್ಯಕ್ತಿ ದು ಆಯ್ತು, ಎರಡನೆಯವರು ಒಬ್ಬ ಮಧ್ಯವಯಸ್ಕ ಅಂಕಲ್... ಮಗುನ ಭುಜದ ಮೇಲೆ ಮಲಗಿಸಿಕೊಂಡು ನಿಂತಿದ್ದಾರೆ, ಅವರ ಸರದಿ.

ಸಾರ್, ಬಿಲ್ ಅಮೌಂಟ್ ಚೇಂಜ್ ಆಗಿ swipe ಆಗಿದೆ, ಸ್ವಲ್ಪ ಸೈಡ್ ಅಲ್ಲಿ ವೈಟ್ ಮಾಡಿ, ನೋಡ್ತೀನಿ...

ಹತ್ತು ನಿಮಿಷ ಅದು ಇದು ಹಂಗೆ ವೇಸ್ಟ್, ...

ಸರ್, ಒಂದು ಕೆಲ್ಸ ಮಾಡಿ, ಮುಂದಿನ ಬಿಲ್ ಅಲ್ಲಿ ಈ extra ಅಮೌಂಟ್ ಪೇ ಆಗಿರೋದು ಕ್ರೆಡಿಟ್ ಆಗುತ್ತೆ.. ಏನು ಪ್ರಾಬ್ಲಮ್ ಇಲ್ಲ...

...........

...........

...........

ನನ್ನ ಸರದಿ ಬಂತು,
ಮೇಡಂ, ಬಿಲ್ ಅಮೌಂಟ್ ಚೇಂಜ್ ಆಗಿದೆ, ನೋಡಿ ಅಷ್ಟು ಮಾತ್ರ pay ಮಾಡ್ತೀನಿ, receipt ಆ ಅಮೌಂಟ್ ಗೆ ಹಾಕಿ.

...........
...........

ಸರಿ.

4 comments: