Custom Search

Sunday, August 12, 2012

ಏನ ಹೇಳಲಿ ನಾ ಅಗಲಿಕೆಯ ಆಳ...???? - 2


ಕಾಲನ ಆಟ ಇನ್ನು ಮುಗಿದಿರಲಿಲ್ಲ ನಮ್ಮ ಪಾಲಿಗೆ,,,,

ಈ ಘಟನೆ ಮುಗಿದ ಕೆಲವೇ ದಿನಗಳು, ಇನ್ನು ನಿಖರವಾಗಿ ಹೇಳ್ಬೇಕು ಅಂದ್ರೆ ಅದೇ ಆಗಸ್ಟ್ ತಿಂಗಳು, ನೋವಿನ ಛಾಯೆ ಇನ್ನು ಮಾಸಿರಲಿಲ್ಲ, ಗೆಳೆಯರೆಲ್ಲ ಅದೇ ಗುಂಗಲ್ಲಿ ಇದ್ವಿ, ಮತ್ತೊಂದು ವಾರ್ತೆ. ಗೆಳೆಯನ ಸಹೋದರನಿಗೆ ಹುಷಾರಿಲ್ಲ, ಅದರಲ್ಲಿ ಏನು ವಿಶೇಷ ಇದೆ? ವಿಶೇಷ ಇದೆ, ವಯಸ್ಸು ೩೦ರ ಆಸುಪಾಸು, ಅನಾರೋಗ್ಯ, ಆಸ್ಪತ್ರೆಗೆ ದಾಖಲು. ಏನೋ ಸಣ್ಣ ಜ್ವರ ಇರ್ಬೇಕು ಅಂತ ನಾನು ಜಾಸ್ತಿ ಯೋಚನೆ ಮಾಡ್ಲಿಲ್ಲ, ಆಗಾಗ ಅಪ್ಡೇಟ್ ಬರ್ತಾ ಇತ್ತು, ಹುಷಾರಾಗ್ತಾ ಇದಾರೆ, ಸ್ವಲ್ಪ ಜ್ವರ ಜಾಸ್ತಿ, ಇತ್ಯಾದಿ. ಮತ್ತದೇ ಮತ್ತೆ ಅದೇ.... ಊಟ ಮಾಡ್ತಿದೀನಿ, ಗೆಳತಿಯ ಕರೆ, ಮಾತಾಡ್ತಾ ಇಲ್ಲ, ಅಳ್ತಾ ಇದ್ದಾಳೆ. ಸ್ವಲ್ಪ ಹೊತ್ತದ್ಮೇಲೆ, "ಅವನ ಅಣ್ಣ ತೀರ್ಕೊಂದ್ಬಿಟ್ರಂತೆ, ಅವನು ಅಳ್ತಿದ್ದಾನೆ...........". ಮತ್ತೆ ಆಕಾಶ ತಲೆಮೇಲೆ ಬಿದ್ದಂಗೆ, ನನ್ನ ಕಿವಿ ನಾನೇ ನಂಬೋಕೆ ಆಗ್ತಿರ್ಲಿಲ್ಲ. ಅವನ ಊರಲ್ಲೇ ಇದ್ದ ಮತ್ತೊಬ್ಬ ಗೆಳೆಯನಿಗೆ ಕರೆ ಮಾಡಿ ವಿಚಾರಿಸಿದ್ರೆ, ನಾ ಕೇಳಿದ ವಿಷ್ಯ ನಿಜ ಅಂದ್ಬಿಟ್ಟ... :( "ಸರಿ, ನಾನು ಬರ್ತೀನಿ..." ಎಲ್ಲ್ಲಿಗೆ, ಹೇಗೆ ಬರಬೇಕು ತಿಳ್ಕೊಂಡು, ಹೋಗಿ ಬರ್ತೀನಿ ಅಂತ ಅಮ್ಮನಿಗೆ ಹೇಳಿ ಹೊರಟೇಬಿಟ್ಟೆ. ಬೆಳಿಗ್ಗೆ ಅಲ್ಲಿ ಹೋದಾಗ, ಮತ್ತದೇ ನೋವು, ದುಃಖ, ಅಳಲು, ಆಕ್ರಂದನ. ಹಿಂದೆ ಮುಗಿದ ಗೆಳೆಯನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ನನ್ನ ಮತ್ತೊಬ್ಬ ಗೆಳೆಯನ ಅಣ್ಣ. ಆ ನೋವು ಹೇಳಲಾಗದು, ಗೆಳೆಯನ ಮುಖ ನೋಡಿದರೆ ಏನು ಹೇಳ್ಬೇಕು ತೋಚ್ತಾ ಇಲ್ಲ, ಏನು ಅರಿಯದ ಮುದ್ದು ಮಗು ಮತ್ತೊಂದು ಕಡೆ.

..............
..............
..............

ಶಾಸ್ತ್ರಗಳೆಲ್ಲ ಮುಗಿದಮೇಲೆ, ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ. ಅದು ಕೂಡ ನನ್ನ ಗೆಳೆಯನ ಕೈ ಇಂದ.... ನೋಡಲಾಗದಿದ್ದರೂ ಎಲ್ಲರೂ ಅಲ್ಲಿ ಮೂಕ ಪ್ರೇಕ್ಷಕರು, ಪಾತ್ರದಾರಿಗಳು ಅಷ್ಟೇ. ಕಾಲನ ಕೈಗೊಂಬೆಗಳು. ತನ್ನ ಒಡಹುಟ್ಟಿದ ಅಣ್ಣನಿಗೆ ತಲೆಗೊಳ್ಳಿ ಇಡಬೇಕಾದ ಸ್ಥಿತಿ ನೋಡುತ್ತಿದ್ರೆ, ಕಣ್ಣಲ್ಲಿ ನೀರು ತಾನಾಗಿ ಬರ್ತಾ ಇತ್ತು... ಕಡೆಗೆ ಯಾವಾಗ ಮುಖ ನೋಡ್ದೆ, ಏನು ಹೇಳ್ದೆ ಏನು ಅರಿವಿಗೆ ಬರ್ತಿಲ್ಲ. ಅಲ್ಲಿಂದ ಹೊರಟೆ... ಮತ್ತೆ ಬರ್ತೀನಿ ಅಂತ ಹೇಳೋ ಸು-ಸಮಯ ಅದಾಗಿರಲಿಲ್ಲ.... :( :( :(

No comments:

Post a Comment